'ಹ್ಯುಂಡೈ' EV ಗ್ರಾಹಕರಿಗೆ ಚಿಂತೆಯೇ ಬೇಡ! ಭರ್ಜರಿ ಒಪ್ಪಂದ... ಸಿಹಿಸುದ್ದಿ ಕೊಟ್ಟ ಕಂಪನಿ!

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಭಾರತ ಸರ್ಕಾರದ EV ಅಳವಡಿಕೆ ಕಾರ್ಯತಂತ್ರಗಳಿಗೆ ಅನುಗುಣವಾಗಿ, ಚಾರ್ಜ್ ಝೋನ್ (CHARGE ZONE)ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಮಾಡಿದೆ. ಈ ಒಪ್ಪಂದ ಭಾಗವಾಗಿ ಚಾರ್ಜ್ ಝೋನ್ ಕಂಪನಿಯು ಭಾರತದಲ್ಲಿನ 100 ಹ್ಯುಂಡೈ ಡೀಲರ್‌ಶಿಪ್‌ಗಳಲ್ಲಿ 60 kW DC ಚಾರ್ಜರ್‌ಗಳನ್ನು ಸ್ಥಾಪಿಸಲಿದೆ. ಈ ಮೂಲಕ ಭಾರತದಲ್ಲಿ ಸಾರ್ವಜನಿಕ EV ಚಾರ್ಜಿಂಗ್ ಮೂಲಸೌಕರ್ಯಗಳ ವಿಸ್ತರಣೆಯಾಗಲಿದೆ. ಚಾರ್ಜಿಂಗ್ ಕೇಂದ್ರಗಳು ಎಲ್ಲಾ EV ಬಳಕೆದಾರರಿಗೆ ನಗರ ಮತ್ತು ಹೆದ್ದಾರಿಗಳಾದ್ಯಂತ ಡೀಲರ್‌ಶಿಪ್‌ಗಳನ್ನು ಪರಿಗಣಿಸಿ, ಇಂಟರ್‌ಸಿಟಿ ಮತ್ತು ಇಂಟ್ರಾಸಿಟಿ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ಹ್ಯುಂಡೈ ತಿಳಿಸಿದೆ.

ಪ್ರಸ್ತುತ ಹ್ಯುಂಡೈ ಕಂಪನಿಯು 60 kW DC ಸಾರ್ವಜನಿಕ EV ಚಾರ್ಜಿಂಗ್ ಸ್ಟೇಷನ್‌ಗಳೊಂದಿಗೆ 19 ಡೀಲರ್‌ಶಿಪ್‌ಗಳನ್ನು ಹೊಂದಿದೆ. ಈಗ CHARGE ZONE ಜೊತೆಗೆ ತನ್ನ ಡೀಲರ್‌ಶಿಪ್‌ಗಳಲ್ಲಿ ವಿಶ್ವಾಸಾರ್ಹ ಚಾರ್ಜಿಂಗ್ ಅನುಭವದೊಂದಿಗೆ 24x7 ಗ್ರಾಹಕ ಬೆಂಬಲ ವ್ಯವಸ್ಥೆಯೊಂದಿಗೆ ಹೆಚ್ಚುವರಿ 100 ಚಾರ್ಜಿಂಗ್ ಸ್ಟೇಷನ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದೆ.

hyundai-partners-with-charge-zone-to-install-high-speed-ev-chargers

ಹ್ಯುಂಡೈ ತನ್ನ ಸಮಗ್ರ EV ಮಾರ್ಗಸೂಚಿಯ ಅಡಿಯಲ್ಲಿ, DC 180 kW ಮತ್ತು DC 60 kW ಚಾರ್ಜರ್‌ಗಳೊಂದಿಗೆ ರಾಷ್ಟ್ರದಾದ್ಯಂತ ನಿರಂತರವಾಗಿ ಬೆಳೆಯುತ್ತಿರುವ EV ಚಾರ್ಜಿಂಗ್ ನೆಟ್‌ವರ್ಕ್ ಅನ್ನು ನಿರ್ಮಿಸಲು ಹೂಡಿಕೆ ಮಾಡಿದೆ. ಅದರ ಡೀಲರ್‌ಶಿಪ್ ನೆಟ್‌ವರ್ಕ್ ಜೊತೆಗೆ, ಹೆಚ್ಚುವರಿಯಾಗಿ 15 ಹೆಚ್ಚು ಫಾಸ್ಟ್‌ ಚಾರ್ಜಿಂಗ್ ಸ್ಟೇಷನ್‌ಗಳನ್ನು ಒಂಬತ್ತು ರಾಜ್ಯಗಳ ಪ್ರಮುಖ ನಗರಗಳು ಮತ್ತು ಹೆದ್ದಾರಿಗಳಲ್ಲಿ ಹರಡಿರುವುದಾಗಿ ತಿಳಿಸಿದೆ.

ಹ್ಯುಂಡೈ ಒಂದು ಮೀಸಲಾದ ಚಾರ್ಜಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (CMS) ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಸುಲಭವಾಗಿ ಚಾರ್ಜ್‌ ಮಾಡಲು "myHyundai" ಮೊಬೈಲ್ ಅಪ್ಲಿಕೇಶನ್‌ ಬಳಸಬಹುದು. ಇದು CMS ವಿವಿಧ CPO ಚಾರ್ಜರ್‌ಗಳ ಚಾರ್ಜಿಂಗ್ ಪಾಯಿಂಟ್‌ಗಳು, ಚಾರ್ಜಿಂಗ್ ಸ್ಲಾಟ್ ಬುಕಿಂಗ್, ರಿಮೋಟ್ ಮಾನಿಟರಿಂಗ್ ಮತ್ತು ಡಿಜಿಟಲ್ ಪಾವತಿಗಳನ್ನು ಪತ್ತೆಹಚ್ಚಲು EV ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಜೊತೆಗೆ ಎಲ್ಲಾ ವಾಹನ ಬ್ರ್ಯಾಂಡ್‌ಗಳ EV ಗ್ರಾಹಕರಿಗೂ EV ಚಾರ್ಜಿಂಗ್ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. CHARGE ZONE ನ ಚಾರ್ಜರ್‌ಗಳ ನೆಟ್‌ವರ್ಕ್‌ಗಳು "MyHyundai" ಅಪ್ಲಿಕೇಶನ್‌ನಲ್ಲಿ "EV ಚಾರ್ಜ್" ವಿಭಾಗದಲ್ಲಿ ಹ್ಯುಂಡೈನ ಸ್ವಂತ ಚಾರ್ಜರ್‌ಗಳು ಮತ್ತು ಮೂರನೇ ವ್ಯಕ್ತಿಯ ಚಾರ್ಜಿಂಗ್ ಪಾಯಿಂಟ್ ಆಪರೇಟರ್‌ಗಳ ಜೊತೆಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಹ್ಯುಂಡೈ ಕಾರ್ಪೊರೇಟ್ ಪ್ಲಾನಿಂಗ್ ಫಂಕ್ಷನ್ ಮುಖ್ಯಸ್ಥ ಜೇ ವಾನ್ ರ್ಯು ಪ್ರತಿಕ್ರಿಯಿಸಿ, "ಭಾರತವು ಎಲೆಕ್ಟ್ರಿಕ್ ವಾಹನಗಳ ಹೆಚ್ಚಿನ ಅಳವಡಿಕೆಯ ಗುರಿಯನ್ನು ಹೊಂದಿರುವುದರಿಂದ, EV ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸುವುದು ಅಷ್ಟೇ ಮುಖ್ಯವಾಗಿದೆ. CHARGE ZONE ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ, ನಾವು EV ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಬಲಪಡಿಸುವತ್ತ ಸಾಗುತ್ತಿದ್ದೇವೆ ಎಂದರು.

ಈಗ 100 ಹುಂಡೈ ಡೀಲರ್‌ಶಿಪ್‌ಗಳು DC 60 kW ವೇಗದ ಚಾರ್ಜರ್‌ಗಳೊಂದಿಗೆ ಸಜ್ಜುಗೊಳ್ಳಲಿವೆ. ಎಲ್ಲಾ EV ಬಳಕೆದಾರರು (ಹ್ಯುಂಡೈ ಮತ್ತು ನಾನ್-ಹ್ಯುಂಡೈ) DC ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳ ವರ್ಧಿತ ನೆಟ್‌ವರ್ಕ್‌ನಿಂದ ಪ್ರಯೋಜನ ಪಡೆಯುತ್ತಾರೆ, ಇದನ್ನು 'myHyundai' ಅಪ್ಲಿಕೇಶನ್ ಮೂಲಕ ಅಥವಾ 'CHARGE ZONE' ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು ಎಂದರು.

ಚಾರ್ಜ್ ಜೋನ್ CEO ಕಾರ್ತಿಕೇ ಹರಿಯಾನಿ ಮಾತನಾಡಿ, ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನೊಂದಿಗಿನ ನಮ್ಮ ಸಹಯೋಗವು 4-ವೀಲರ್ ಎಲೆಕ್ಟ್ರಿಕ್ ವೆಹಿಕಲ್‌ಗಳಿಗೆ (BEVs) ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸುಲಭ ಪ್ರವೇಶ ಮತ್ತು ಕ್ರಿಯಾತ್ಮಕ ಲಭ್ಯತೆಯನ್ನು ಖಚಿತಪಡಿಸುತ್ತದೆ, ವಿಶ್ವಾಸಾರ್ಹ ಮತ್ತು ತಡೆರಹಿತ ಚಾರ್ಜಿಂಗ್ ಅನುಭವವನ್ನು ಒದಗಿಸುತ್ತದೆ ಎಂದರು.

Article Published On: Thursday, July 25, 2024, 13:43 [IST]
English summary
Hyundai partners with charge zone to install high speed ev chargers
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+