Hyundai: ಹ್ಯುಂಡೈ ಹೊಸ ಮೈಲಿಗಲ್ಲು: ಆರ್ಥಿಕ ವರ್ಷ 23-24 ರಲ್ಲಿ ದಾಖಲೆಯ ಮಾರಾಟ

ಹುಂಡೈ (Hyundai) ಕಂಪನಿಯು, ಆರ್ಥಿಕ ವರ್ಷ 23-24 ರಲ್ಲಿ ಕಳೆದ ಆರ್ಥಿಕ ವರ್ಷಕ್ಕಿಂತ ಶೇ 8 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿದೆ. ಬರೋಬ್ಬರಿ 7,77,876 ಯುನಿಟ್‌ ಕಾರುಗಳ ಅತ್ಯಧಿಕ ಮಾರಾಟವನ್ನು ದಾಖಲಿಸಿದೆ. ಇನ್ನೂ ದೇಶೀಯವಾಗಿ 23-24ರ ಆರ್ಥಿಕ ವರ್ಷದಲ್ಲಿ 6,14,721 ಯೂನಿಟ್ ಕಾರುಗಳ ಮಾರಾಟವಾಗಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಕಳೆದ ವರ್ಷಕ್ಕಿಂತ ಶೇ 6.7 ಬೆಳವಣಿಗೆಯೊಂದಿಗೆ 1,63,155 ಯುನಿಟ್‌ಗಳಷ್ಟಿತ್ತು ವಾರ್ಷಿಕ ರಫ್ತನ್ನು ದಾಖಲು ಮಾಡಿದೆ. ಕೇವಲ ಮಾರ್ಚ್ 2024 ರಲ್ಲಿಯೇ, ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 53,001 ಯುನಿಟ್‌ಗಳು ಮತ್ತು 12,600 ಯುನಿಟ್ ರಫ್ತು ಸೇರಿದಂತೆ ಒಟ್ಟು 65,601 ಯುನಿಟ್‌ಗಳ ಮಾರಾಟವನ್ನು ವರದಿ ಮಾಡಿದೆ.

hyundai aura

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಮಾತನಾಡಿ, ಆರ್ಥಿಕ ವರ್ಷ 23-24 ರಲ್ಲಿ 7.77 ಲಕ್ಷ ವಾಹನಗಳ ಉತ್ತಮ ಸ್ವೀಕಾರದೊಂದಿಗೆ ಶೇ 8 ರಷ್ಟು ಬೆಳವಣಿಗೆಯು ನಮ್ಮ ಉತ್ಪನ್ನಗಳ ಕೊಡುಗೆಗೆ ಸಾಕ್ಷಿಯಾಗಿದೆ. 2024-25ಕ್ಕೆ ಮುಂದುವರಿಯುತ್ತಿದ್ದಂತೆ, ನಮ್ಮ ಗ್ರಾಹಕರಿಗೆ ಹೆಚ್ಚು ಉತ್ಸಾಹ ಮತ್ತು ವರ್ಧಿತ ಮೌಲ್ಯವನ್ನು ಸೃಷ್ಟಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದರು.

2023-24 ರಲ್ಲಿ, ನಾವು ಹ್ಯುಂಡೈ EXTER, ಹೊಸ CRETA, CRETA N LINE, ಹೊಸ i-20 ಮತ್ತು ಹುಂಡೈ VENUE ಮತ್ತು VENUE-N ಲೈನ್‌ನಲ್ಲಿ ADAS ಫೀಚರ್ ಪರಿಚಯ ಸೇರಿದಂತೆ ಹಲವು ಹೊಸ ಮಾದರಿಗಳು ಮತ್ತು ಉತ್ಪನ್ನ ನವೀಕರಣಗಳನ್ನು ಪ್ರಾರಂಭಿಸಿದ್ದೇವೆ. ಈ ಎಲ್ಲಾ ಹೊಸ ಕೊಡುಗೆಗಳೊಂದಿಗೆ ಗ್ರಾಹಕರ ವಿಶ್ವಾಸವನ್ನೂ ಗಳಿಸಿದ್ದೇವೆ ಎಂದರು.

hyundai i20

ಹ್ಯುಂಡೈನ ತಂತ್ರಜ್ಞಾನ ಮತ್ತು ನಾವೀನ್ಯತೆಯ ಅನ್ವೇಷಣೆಯನ್ನು ವಿಮರ್ಶಕರು ಸಹ ಗುರುತಿಸಿದ್ದಾರೆ. ಪ್ರಮುಖ ಭಾರತೀಯ ಆಟೋಮೋಟಿವ್ ಮಾಧ್ಯಮದಿಂದ EXTER, VERNA ಮತ್ತು IONIQ 5ಗೆ 'ವರ್ಷದ ಕಾರು' ಪ್ರಶಸ್ತಿಯನ್ನು ನೀಡಲಾಯಿತು. ವಾಸ್ತವವಾಗಿ, ಈ ಆರ್ಥಿಕ ವರ್ಷದಲ್ಲಿ ಹ್ಯುಂಡೈಗಾಗಿ ಮೂರು ಉತ್ಪನ್ನಗಳು ಒಟ್ಟಾಗಿ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಸಂಗ್ರಹಿಸಿವೆ ಎಂದು ತರುಣ್ ಗಾರ್ಗ್ ಹೇಳಿದ್ದಾರೆ.

ಹ್ಯುಂಡೈ ಪ್ರಸ್ತುತ ಭಾರತದಾದ್ಯಂತ 1,363 ಮಾರಾಟ ಕೇಂದ್ರಗಳು ಮತ್ತು 1,549 ಸೇವಾ ಕೇಂದ್ರಗಳ ದೃಢವಾದ ಜಾಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹ್ಯುಂಡೈ ಗ್ರಾಂಡ್ i10 ನಿಯೋಸ್, i20, i20 ಎನ್‌-ಲೈನ್, ಆರಾ, ಎಕ್ಸಟರ್, ವೆನ್ಯೂ, ವೆನ್ಯೂ-N ಲೈನ್, ವರ್ನಾ, ಕ್ರೆಟಾ, ಕ್ರೆಟಾ N ಲೈನ್, ಅಲ್ಕಜಾರ್, ಟಕ್ಸನ್, ಕೋನಾ ಎಲೆಕ್ಟ್ರಿಕ್ ಮತ್ತು ಐಯಾನಿಕ್ 5 ಸೇರಿದಂತೆ ಒಟ್ಟು 14 ಕಾರು ಮಾದರಿಗಳನ್ನು ಒಳಗೊಂಡಿದೆ.

hyundai verna

ಚೆನ್ನೈ ಬಳಿ ಹ್ಯುಂಡೈನ ಸಂಪೂರ್ಣ ಸಂಯೋಜಿತ ಘಟಕವು ಸುಧಾರಿತ ಉತ್ಪಾದನೆ, ಗುಣಮಟ್ಟ ಮತ್ತು ಪರೀಕ್ಷಾ ಸಾಮರ್ಥ್ಯಗಳನ್ನು ಹೊಂದಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ HMC ಯ ಜಾಗತಿಕ ರಫ್ತು ಕೇಂದ್ರದ ನಿರ್ಣಾಯಕ ಭಾಗವಾಗಿದೆ. ಜೊತೆಗೆ ಆಫ್ರಿಕಾ, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೇರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾ ಪೆಸಿಫಿಕ್‌ನಾದ್ಯಂತ 88 ದೇಶಗಳಿಗೆ ಇಲ್ಲಿಂದ ರಫ್ತು ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 1, 2024, 16:10 [IST]
English summary
Hyundai records highest ever total sales of 7 77 lakh units in fy23 24
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+