27 Km ಮೈಲೇಜ್‌ನ ಈ ಕಾರು ಭಾರತದಲ್ಲಿ ಸೂಪರ್‌ಹಿಟ್: ಆದರೆ ವಿದೇಶಕ್ಕೆ ರಫ್ತಾಗಿದ್ದು ಕೇವಲ 2 ಯೂನಿಟ್‌!

ಕಳೆದ ವರ್ಷ ದಕ್ಷಿಣ ಕೊರಿಯಾದ ಪ್ರಸಿದ್ದ ಕಾರು ನಿರ್ಮಾಣ ಕಂಪನಿಯಾದ ಹ್ಯುಂಡೈ, ಭಾರತದಲ್ಲಿ ಎಕ್ಸ್‌ಟರ್‌ ಎಂಬ ಮೈಕ್ರೋ ಎಸ್‌ಯುವಿಯೊಂದನ್ನು ಬಿಡುಗಡೆ ಮಾಡಿತ್ತು. ಟಾಟಾ ಪಂಚ್‌ನ ಎದುರಾಳಿಯಾಗಿ ಮಾರುಕಟ್ಟೆಗೆ ಬಂದ ಈ ಎಕ್ಸ್‌ಟರ್‌, ಆನಂತರ ನಡೆದಿದ್ದೆಲ್ಲಾ ಇತಿಹಾಸ. ಈ ಕಾರು ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಪಡೆದಿದ್ದು, ಅತ್ಯುತ್ತಮ ಮಾರಾಟವನ್ನು ಪಡೆಯುತ್ತಿದೆ. ಇದು ಟಾಟಾ ಪಂಚ್‌ನಷ್ಟು ಹೆಚ್ಚು ಮಾರಾಟವಾಗದಿದ್ದರೂ, ಟಾಪ್ 3 ಮಾರಾಟವಾದ ಕಾರುಗಳಲ್ಲಿ Xter ಸಹ ಸೇರಿದೆ. ಆದರೆ ಈ Xter ಕಾರಿನ ಬಗ್ಗೆ ಶಾಕಿಂಗ್ ನ್ಯೂಸ್ ಇದೆ. ಅದರ ಬಗ್ಗೆ ವಿವರವಾದ ಮಾಹಿತಿಯನ್ನು ನೋಡೋಣ.

ಹ್ಯುಂಡೈ ಭಾರತದಲ್ಲಿ ಹೆಚ್ಚು ಮಾರಾಟವಾಗುವ SUV ಪಂಚ್ ಕಾರ್‌ಗೆ ಪೈಪೋಟಿ ನೀಡುತ್ತಿದೆ ಮತ್ತು ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಕಳೆದ ಮೇ ತಿಂಗಳಲ್ಲಿ ಭಾರತದಲ್ಲಿ ಒಟ್ಟು 7697 ಕಾರುಗಳು ಮಾರಾಟವಾಗಿವೆ. ಕಾರು ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಏಳನೇ ಸ್ಥಾನದಲ್ಲಿದೆ.

Hyundai shipped only two Exter units abroad in May

ಹ್ಯುಂಡೈ ಈ ಎಕ್ಸ್‌ಟರ್ ಕಾರನ್ನು ಭಾರತದಲ್ಲಿ ಮಾರಾಟ ಮಾಡುವುದಲ್ಲದೆ ವಿದೇಶಕ್ಕೂ ರಫ್ತು ಮಾಡುತ್ತಿದೆ. ಆದರೆ ಕಳೆದ ಮೇ ತಿಂಗಳಿನಲ್ಲಿ ಕಂಪನಿಯು ವಿದೇಶಕ್ಕೆ ಕೇವಲ ಎರಡು ಕಾರುಗಳನ್ನು ರಫ್ತು ಮಾಡಿತ್ತು. ಇದು ಹ್ಯುಂಡೈ ಕಂಪನಿ ವಿದೇಶಕ್ಕೆ ರಫ್ತು ಮಾಡಿರುವ ಸಂಖ್ಯೆಯಲ್ಲಿ ಅತೀ ಕಡಿಮೆ ಸಂಖ್ಯೆಯಾಗಿದೆ.

ಈ ಕಾರು (Exter) ಭಾರತದಿಂದ ವಿದೇಶಗಳಿಗೆ ರಫ್ತು ಮಾಡಲಾದ ಅತಿ ಕಡಿಮೆ ಸಂಖ್ಯೆಯ ಕಾರುಗಳು ಮತ್ತು ರಫ್ತು ಮಾಡಲಾದ ಒಟ್ಟು 50 ವಿಧದ ಕಾರುಗಳಲ್ಲಿ 50 ನೇ ಕಾರು. ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಕಾರಿಗೆ ವಿದೇಶದಲ್ಲಿ ಅಷ್ಟಾಗಿ ಪ್ರತಿಕ್ರಿಯೆ ಸಿಗಲಿಲ್ಲವಂತೆ.

Hyundai shipped only two Exter units abroad in May

ಹ್ಯುಂಡೈ ಎಕ್ಸ್‌ಟರ್‌ ಕಾರಿನ ಬಗ್ಗೆ ನೋಡುವುದಾದರೆ, ಈ ಎಸ್‌ಯುವಿ, 1.2-ಲೀಟರ್, 4 ಸಿಲಿಂಡರ್ (ಪೆಟ್ರೋಲ್) ಎಂಜಿನ್ ಹೊಂದಿದ್ದು, 81.8 bhp ಗರಿಷ್ಠ ಪವರ್ ಹಾಗೂ 113.8 Nm ಪಿಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಮೋಡ್ ನಲ್ಲಿ 67.7 bhp ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಆವೃತ್ತಿಯು ಮ್ಯಾನ್ಯುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಸಿಎನ್‌ಜಿ ಆವೃತ್ತಿಯು ಮ್ಯಾನ್ಯುವಲ್‌ (5 ಸ್ಪೀಡ್) ಗೇರ್‌ಬಾಕ್ಸ್ ಅನ್ನು ಪಡೆದಿದೆ. ಹ್ಯುಂಡೈ ಎಕ್ಸ್‌ಟರ್‌ ಕಾರಿನ ಮೈಲೇಜ್ ವಿಚಾರವಾಗಿ ಮಾತನಾಡುವದಾದರೆ, ಪೆಟ್ರೋಲ್ ಚಾಲಿತ ಕಾರು, 19.2km/l - 19.4km/l ಇಂಧನ ದಕ್ಷತೆಯನ್ನು ಹೊಂದಿದೆ. ಸಿಎನ್‌ಜಿ ಚಾಲಿತ ಕಾರು ಗರಿಷ್ಠ 27.1km/kg ಮೈಲೇಜ್ ನೀಡುತ್ತದೆ.

ಹ್ಯುಂಡೈ ಎಕ್ಸ್‌ಟರ್‌ ಸೀಟುಗಳು ಲೆಥೆರೆಟ್ ಅಪ್‌ಹೋಲ್‌ಸ್ಟರಿ ಫೀಚರ್ಸ್ ಹೊಂದಿದ್ದು, ಎಲ್ಲ ವಯಸ್ಸಿನವರು ಆರಾಮದಾಯಕವಾಗಿ ಪ್ರಯಾಣಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ಈ ಕಾರು ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್ ಕಂಟ್ರೋಲ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೈಂಡರ್‌, ISOFIX ಚೈಲ್ಡ್ ಸೀಟ್ ಆಂಕರ್‌ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, June 23, 2024, 10:00 [IST]
English summary
Hyundai shipped only two exter units abroad in may
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+