ಕ್ರೇಟಾ ಖರೀದಿಸಲು ಬಜೆಟ್‌ ಇಲ್ಲವೇ: ಆಫರ್‌ ಮುಗಿಯುವುದಕ್ಕೂ ಮುನ್ನ, 8 ಲಕ್ಷಕ್ಕೆ ಈ SUV ಖರೀದಿಸಿ!

ಭಾರತದಲ್ಲಿ ಹ್ಯುಂಡೈ ಕಾರುಗಳಿಗೆ ಬೇರೆಯದ್ದೇ ಫ್ಯಾನ್‌ ಬೇಸ್‌ ಇದೆ. ತನ್ನ ಅಗ್ರೆಸಿವ್‌ ಪರ್ಫಾಮೆನ್ಸ್ ಮತ್ತು ಸ್ಟೈಲಿಶ್ ಡಿಸೈನ್‌ ಹೊಂದಿರುವ ಹ್ಯುಂಡೈ ಕಾರುಗಳು ಬಹುತೇಕ ಎಲ್ಲರ ಮೆಚ್ಚುಗೆಗೂ ಪಾತ್ರವಾಗುತ್ತದೆ. ಹ್ಯುಂಡೈ ಕಂಪನಿಯ ಪ್ರಸಿದ್ದ ಮಾಡೆಲ್‌ಗಳಲ್ಲಿ ಹ್ಯುಂಡೈ ಕ್ರೆಟಾ ಮತ್ತು ವೆನ್ಯೂ ಪ್ರಮುಖವಾದುದು. ಹ್ಯುಂಡೈ ವೆನ್ಯೂ ಕಾರು ಮಾದರಿಯಲ್ಲಿ ಎನ್‌ಲೈನ್ ಆಯ್ಕೆಯೂ ಲಭ್ಯವಿದೆ. ಹ್ಯುಂಡೈ ಕಾರು ಇದೀಗ ತನ್ನ ವೆನ್ಯೂ ಕಾರು ಮಾದರಿಗೆ ಭರ್ಜರಿ ಆಫರ್‌ ಅನ್ನು ನೀಡುತ್ತಿದೆ. ಇಂದಿನ ಈ ಲೇಖನದಲ್ಲಿ ನಾವು ಆ ಕುರಿತಾಗಿ ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೂ ಓದಿ.

ಮಾಹಿತಿಗಳ ಪ್ರಕಾರ ಜೂನ್‌ ತಿಂಗಳಲ್ಲಿ ಹ್ಯುಂಡೈ ವೆನ್ಯೂ (Hyundai Venue) ಕಾರು ಮಾದರಿಗೆ ಕಂಪನಿಯು ಉತ್ತಮ ಆಫರ್‌ಗಳನ್ನು ನೀಡುತ್ತಿದೆ. ನೀವೇನಾದರೂ ಒಂದು ಕಾಂಪಾಕ್ಟ್‌ ಎಸ್‌ಯುವಿಯ ಹುಡುಕಾಟದಲ್ಲಿದ್ದರೆ ಹ್ಯುಂಡೈ ವೆನ್ಯೂ ನಿಮಗೆ ಸರಿಯಾದ ಆಯ್ಕೆ ಎನ್ನಬಹುದು. ಈ ಕಾರು ಕೊಳ್ಳುವವರಿಗೆ ಇದೀಗ ಕಂಪನಿ ಸುಮಾರು 45000 ರೂಗಳ ಡಿಸ್ಕೌಂಟ್‌ ಅನ್ನು ನೀಡುತ್ತಿದೆ.

Hyundai Venue A perfect Compact SUV For Small Family

ಇದರಲ್ಲಿ 35 ಸಾವಿರ ರೂಗಳ ಕ್ಯಾಶ್‌ಬ್ಯಾಕ್‌ ದೊರಕುತ್ತದೆ. ಅದುಮಾತ್ರವಲ್ಲದೇ ಸುಮಾರು 10 ಸಾವಿರ ರೂಗಳ ಎಕ್ಸ್‌ಚೇಂಜ್‌ ಬೋನಸ್‌ ಸಹ ನೀವು ವೆನ್ಯೂ ಕಾರನ್ನು ಖರೀದಿಸುವಾಗ ಕಂಪನಿ ನಿಮಗೆ ನೀಡುತ್ತದೆ. ಹೀಗೆ ಒಟ್ಟಾಗಿ ಸುಮಾರು 45 ಸಾವಿರ ರೂಗಳ ಡಿಸ್ಕೌಂಟ್‌ ಅನ್ನು ಕಂಪನಿ ನಿಮಗೆ ಹ್ಯುಂಡೈ ವೆನ್ಯೂ ಖರೀದಿ ಮಾಡುವಾಗ ನೀಡುತ್ತದೆ. ಹೊಸ ಕಾರು ಕೊಳ್ಳುವವರಿಗೆ ಇದೊಂದು ಉತ್ತಮ ಕೊಡುಗೆ ಎಂದೇ ಹೇಳಬಹುದು.

ಹ್ಯುಂಡೈ ವೆನ್ಯೂ ಎಸ್‍ಯುವಿ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7,94,100 ಆದರೆ ಆನ್ ರೋಡ್ ಬೆಲೆಯು ರೂ.9,63,306 ಆಗಿದೆ. ಈ ಎಸ್‍ಯುವಿ ಲೋ ವೆರಿಯೆಂಟ್ ಮಾದರಿಗೆ 9.8 % ಬಡ್ಡಿ ದರದಲ್ಲಿ ಐದು ವರ್ಷದ ಲೋನ್‌ ಮಾಡಿದರೆ ಪ್ರತಿ ತಿಂಗಳು ನೀವು 18,342 ಗಳಷ್ಟು ಇಎಂಐ ಪಾವತಿಸಬೇಕು. ಇನ್ನು ಈ ಎಕ್ಸ್‌ಟರ್ ಎಸ್‍ಯುವಿಯ ಡೌನ್ ಪೇಮೆಂಟ್ ರೂ.96,000 ಆಗಿದೆ.

Hyundai Venue A perfect Compact SUV For Small Family

ಈ ಹ್ಯುಂಡೈ ವೆನ್ಯೂ ಎಸ್‍ಯುವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ನೀಡಲಾಗಿದೆ. ಇದು ಕ್ರೆಟಾದಂತೆಯೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುವಂತೆ ಅಪ್ಡೇಟ್ ಮಾಡಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಬದಲಿಗೆ, ವೆನ್ಯೂ ಡೀಸೆಲ್ ಈಗ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಹ್ಯುಂಡೈ ಎಸ್‍ಯುವಿಯ ಎಂಜಿನ್ 113.5 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇತರ ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಸೇರಿವೆ. ಇದರಲ್ಲಿ 1.2-ಲೀಟರ್ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು 1.2 ಲೀಟರ್ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಆದರೆ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ iMT ಅಥವಾ 7-ಸ್ಪೀಡ್ DCT ಯೊಂದಿಗೆ ನೀಡಲಾಗುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರುವ ಹುಂಡೈ ಕ್ರೆಟಾ ಡೀಸೆಲ್‌ಗಿಂತ ಭಿನ್ನವಾಗಿದೆ. ಈ ಎಸ್‌ಯುವಿಯ ಡೀಸೆಲ್ ರೂಪಾಂತರವು ಪ್ರತ್ಯೇಕವಾಗಿ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೀಡಿದೆ.

ಇನ್ನು ಈ ಹ್ಯುಂಡೈ ಈಗ ಮಿಡ್-ಸ್ಪೆಕ್ S(O) ಟ್ರಿಮ್ ಮಟ್ಟದಿಂದ 6 ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ. ಈ ವೆನ್ಯೂ ಎಸ್‍ಯುವಿಯಲ್ಲಿ ಕೆಲವು ಫೀಚರ್ಸ್ ಗಳನ್ನು ಈಗ ಟಾಪ್ ಸ್ಪೀಡ್ SX(O) ರೂಪಾಂತರದಲ್ಲಿ ಬಂದಿದೆ. SX(O) ರೂಪಾಂತರದಲ್ಲಿರುವ ಪ್ರತ್ಯೇಕವಾಗಿ ಹಿಂದಿನ ಸೀಟ್ ರಿಕ್ಲೈನೇಶನ್, ಮತ್ತು ಕಪ್ ಹೋಲ್ಡರ್‌ನೊಂದಿಗೆ ಆರ್ಮ್‌ರೆಸ್ಟ್‌ನಂತಹ ಕೆಲವು ಪ್ರಮುಖ ಫೀಚರ್ಸ್ ಗಳಾಗಿವೆ. ಈ ಎಸ್‍ಯುವಿಯಲ್ಲಿ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, June 8, 2024, 11:30 [IST]
English summary
Hyundai venue a perfect compact suv for small family
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+