Hyundai: ಹ್ಯುಂಡೈ ವೆನ್ಯೂ ಎಕ್ಸಿಕ್ಯೂಟಿವ್ ಟರ್ಬೋ ವೇರಿಯೆಂಟ್ ವಿಶೇಷತೆಗಳು

ಹುಂಡೈ ವೆನ್ಯೂನ ಎಕ್ಸಿಕ್ಯೂಟಿವ್ ಟರ್ಬೊ ವೇರಿಯೆಂಟ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹ್ಯುಂಡೈ VENUE ಎಕ್ಸಿಕ್ಯೂಟಿವ್ ಟರ್ಬೊ ರೂಪಾಂತರವು ಖರೀದಿದಾರರ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದ್ದು, ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಇಲ್ಲಿ ನೋಡೋಣ.

ಹುಂಡೈ ವೆನ್ಯೂನ ಎಕ್ಸಿಕ್ಯೂಟಿವ್ ಟರ್ಬೊ ವೇರಿಯೆಂಟ್ ಬೆಲೆಯು ರೂ. 9,99,990 (ಎಕ್ಸ್ ಶೋ ರೂಂ) ರಿಂದ ಪ್ರಾರಂಭವಾಗುತ್ತದೆ. ನವೀಕರಿಸಿದ ಹುಂಡೈ VENUE S (O) Turbo ಟ್ರಿಮ್ 6MT ಆವೃತ್ತಿಯ ಬೆಲೆಯು ರೂ. 10,75,200 ಮತ್ತು 7DCT ಆವೃತ್ತಿಯು ರೂ. 11,85,900 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಆಸಕ್ತ ಖರೀದಿದಾರರು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಹ್ಯುಂಡೈ ಡೀಲರ್‌ಗಳನ್ನು ಸಂಪರ್ಕಿಸಬಹುದು.

hyundai-venue-executive-turbo-variant-features

ಇಂಟೀರಿಯರ್: ಸ್ಟೋರೇಜ್‌ನೊಂದಿಗೆ ಮುಂಭಾಗದ ಸೆಂಟರ್ ಆರ್ಮ್‌ರೆಸ್ಟ್, 2 - ಸ್ಟೆಪ್ ಹಿಂಭಾಗದ ಒರಗಿಕೊಳ್ಳುವ ಆಸನಗಳು, ಹಿಂಭಾಗದಲ್ಲಿ 60:40 ಸ್ಪ್ಲಿಟ್ ಸೀಟ್, ಎಲ್ಲಾ ಪ್ರಯಾಣಿಕರಿಗೆ ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ Android Auto/Apple ಕಾರ್ಪ್ಲೇ ಮತ್ತು ವಾಯಿಸ್ ರೆಕಗ್ನಿಷನ್, ಕಲರ್ಡ್ TFT MID ಡಿಜಿಟಲ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಇವುಗಳ ಜೊತೆಗೆ ಇನ್ನೂ ಹೆಚ್ಚಿನ ಆಧುನಿಕ ವೈಶಿಷ್ಟ್ಯವಾದ ಕ್ರೂಸ್ ಕಂಟ್ರೋಲ್ ಕೂಡ ಇದ್ದು, ಜೊತೆಗೆ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಹಿಂಭಾಗದಲ್ಲಿ ಎಸಿ ವೆಂಟ್‌ಗಳು, ಹಿಂದಿನ ವೈಪರ್ ಮತ್ತು ವಾಷರ್ ಅನ್ನು ನೀಡಲಾಗಿದೆ. ಹೆಚ್ಚುವರಿಯಾಗಿ ಪ್ರಯಾಣಿಕರಿಗೆ ಈಗ ಹೆಚ್ಚಿನ ಆರಾಮದಾಯಕ ಪ್ರಯಾಣಕ್ಕೆ ಉತ್ತಮ ಸೀಟ್‌ಗಳನ್ನು ನಿಡಲಾಗಿದೆ.

hyundai-venue-executive-turbo-variant-features

ಪವರ್ ಟ್ರೈನ್: ಕಪ್ಪಾ 1.0 ಲೀ. ಟರ್ಬೊ GDI ಎಂಜಿನ್ 6 - ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಜೊತೆಗೆ ಬರುತ್ತದೆ. ಇದು 88.3 kW (120 PS) @6 000 r/min ಗರಿಷ್ಠ ಪವರ್ ಮತ್ತು 172 Nm @1 500 - 4 000 r/min ಗರಿಷ್ಠ ಟಾರ್ಕ್ ಹೊರ ಹಾಕುತ್ತದೆ. ಇದರ ಜೊತೆಗೆ ಐಡಲ್ ಸ್ಟಾಪ್ & ಗೋ (ISG) ವೈಶಿಷ್ಟ್ಯವು ಮೈಲೇಜ್ ಹೆಚ್ಚಿಸುತ್ತದೆ.

ಸುರಕ್ಷತೆ: 6 ಏರ್‌ಬ್ಯಾಗ್‌ಗಳು, ಎಲ್ಲಾ ಆಸನಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್ ಜೊತೆಗೆ 3 ಪಾಯಿಂಟ್ ಸೀಟ್ ಬೆಲ್ಟ್‌ಗಳು, ಎಲೆಕ್ಟ್ರಾನಿಕ್-ಸ್ಟೆಬಿಲಿಟಿ-ಕಂಟ್ರೋಲ್ (ESC), ವಾಹನ-ಸ್ಥಿರತೆ-ನಿರ್ವಹಣೆ (VSM), ಹಿಲ್-ಅಸಿಸ್ಟ್-ಕಂಟ್ರೋಲ್ (HAC), IRVM, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಸುರಕ್ಷತಾ ವೈಶಿಷ್ಟ್ಯಗಳು ಇವೆ.

hyundai-venue-executive-turbo-variant-features

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಸಿಒಒ ತರುಣ್ ಗಾರ್ಗ್ ಮಾತನಾಡಿ, ಹುಂಡೈ ವೆನ್ಯೂನ ಎಕ್ಸಿಕ್ಯೂಟಿವ್ ಟರ್ಬೊ ರೂಪಾಂತರವನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ. ಮೌಲ್ಯ ಪ್ರಜ್ಞೆಯುಳ್ಳ ಹೊಸ-ಯುಗದ ಖರೀದಿದಾರರಿಗೆ ರೋಮಾಂಚಕ ಪರ್ಫಾಮೆನ್ಸ್ ಮತ್ತು ವರ್ಧಿತ ಅನುಕೂಲತೆಯ ವೈಶಿಷ್ಟ್ಯಗಳ ಅತ್ಯುತ್ತಮ ಸಂಯೋಜನೆಯನ್ನು ನೀಡಲು ಈ ರೂಪಾಂತರವು ಸಿದ್ಧವಾಗಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, March 10, 2024, 10:00 [IST]
English summary
Hyundai venue executive turbo variant features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+