ಹ್ಯುಂಡೈ ವೆನ್ಯೂ ಎಕ್ಸಿಕ್ಯೂಟಿವ್ ಟರ್ಬೋ ವೇರಿಯೆಂಟ್ ವಿಶೇಷತೆಗಳು
ಹ್ಯುಂಡೈ ಇತ್ತೀಚೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ತನ್ನ ಬಹುನಿರೀಕ್ಷಿತ ವೆನ್ಯೂ ಎಕ್ಸಿಕ್ಯೂಟಿವ್ ಟರ್ಬೊ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಈ ಟರ್ಬೊ ವೇರಿಯೆಂಟ್ ಅನ್ನು ಇಂದಿನ ಪರ್ಫಾಮೆನ್ಸ್ ಉತ್ಸಾಹಿಗಳ ದಿಟ್ಟ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಹ್ಯುಂಡೈ ವೆನ್ಯೂ ಎಕ್ಸಿಕ್ಯೂಟಿವ್ ಟರ್ಬೊ ವೇರಿಯೆಂಟ್ ಬೆಲೆಯು ರೂ. 9,99,990 (ಎಕ್ಸ್ ಶೋ ರೂಂ) ರಿಂದ ಪ್ರಾರಂಭವಾಗುತ್ತದೆ. ಹಾಗೆಯೇ VENUE S (O) Turbo ಟ್ರಿಮ್ 6MT ಆವೃತ್ತಿಯು ರೂ. 10,75,200 ಮತ್ತು 7DCT ಆವೃತ್ತಿಯು ರೂ. 11,85,900 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಆಸಕ್ತ ಖರೀದಿದಾರರು ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಹ್ಯುಂಡೈ ಡೀಲರ್‌ಗಳನ್ನು ಸಂಪರ್ಕಿಸಬಹುದು.

ವೆನ್ಯೂ 1.0 ಲೀ. ಟರ್ಬೊ ಎಕ್ಸಿಕ್ಯೂಟಿವ್ 6MT ವಿಶೇಷತೆಗಳು: 16 ಇಂಚಿನ ಡ್ಯುಯಲ್ ಟೋನ್ ವೀಲ್‌ಗಳು ಮತ್ತು ಉತ್ತಮ ರೋಡ್‌ಗ್ರಿಪ್ ಇರುವ ಟೈರ್‌ಗಳು, ಡಾರ್ಕ್ ಕ್ರೋಮ್ ಫ್ರಂಟ್ ರೇಡಿಯೇಟರ್ ಗ್ರಿಲ್, ರೂಫ್ ರೈಲ್ಸ್ ಮತ್ತು ಶಾರ್ಕ್ ಫಿನ್ ಆಂಟೆನಾ, ಟೈಲ್‌ಗೇಟ್‌ನಲ್ಲಿ ವಿಶೇಷವಾದ 'ಎಕ್ಸಿಕ್ಯೂಟಿವ್' ಲೋಗೋವನ್ನು ನೀಡಲಾಗಿದೆ.
ಪವರ್ ಟ್ರೈನ್: ಕಪ್ಪಾ 1.0 ಲೀ. ಟರ್ಬೊ GDI ಎಂಜಿನ್ 6 - ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಜೊತೆಗೆ ಬರುತ್ತದೆ. ಇದು 88.3 kW (120 PS) @6 000 r/min ಗರಿಷ್ಠ ಪವರ್ ಮತ್ತು 172 Nm @1 500 - 4 000 r/min ಗರಿಷ್ಠ ಟಾರ್ಕ್ ಹೊರ ಹಾಕುತ್ತದೆ. ಇದರ ಜೊತೆಗೆ ಐಡಲ್ ಸ್ಟಾಪ್ & ಗೋ (ISG) ವೈಶಿಷ್ಟ್ಯವು ಮೈಲೇಜ್ ಹೆಚ್ಚಿಸುತ್ತದೆ.

ಸುರಕ್ಷತೆ: 6 ಏರ್‌ಬ್ಯಾಗ್‌ಗಳು, ಎಲ್ಲಾ ಆಸನಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್ ಜೊತೆಗೆ 3 ಪಾಯಿಂಟ್ ಸೀಟ್ ಬೆಲ್ಟ್‌ಗಳು, ಎಲೆಕ್ಟ್ರಾನಿಕ್-ಸ್ಟೆಬಿಲಿಟಿ-ಕಂಟ್ರೋಲ್ (ESC), ವಾಹನ-ಸ್ಥಿರತೆ-ನಿರ್ವಹಣೆ (VSM), ಹಿಲ್-ಅಸಿಸ್ಟ್-ಕಂಟ್ರೋಲ್ (HAC), IRVM, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಸುರಕ್ಷತಾ ವೈಶಿಷ್ಟ್ಯಗಳು ಇವೆ.
ಇಂಟೀರಿಯರ್: ಸ್ಟೋರೇಜ್‌ನೊಂದಿಗೆ ಮುಂಭಾಗದ ಸೆಂಟರ್ ಆರ್ಮ್‌ರೆಸ್ಟ್, 2 - ಸ್ಟೆಪ್ ಹಿಂಭಾಗದ ಒರಗಿಕೊಳ್ಳುವ ಆಸನಗಳು, ಹಿಂಭಾಗದಲ್ಲಿ 60:40 ಸ್ಪ್ಲಿಟ್ ಸೀಟ್, ಎಲ್ಲಾ ಪ್ರಯಾಣಿಕರಿಗೆ ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ Android Auto/Apple ಕಾರ್ಪ್ಲೇ ಮತ್ತು ವಾಯಿಸ್ ರೆಕಗ್ನಿಷನ್, ಕಲರ್ಡ್ TFT MID ಡಿಜಿಟಲ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಇವುಗಳ ಜೊತೆಗೆ ಇನ್ನೂ ಹೆಚ್ಚಿನ ಆಧುನಿಕ ವೈಶಿಷ್ಟ್ಯವಾದ ಕ್ರೂಸ್ ಕಂಟ್ರೋಲ್ ಕೂಡ ಇದ್ದು, ಜೊತೆಗೆ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಹಿಂಭಾಗದಲ್ಲಿ ಎಸಿ ವೆಂಟ್‌ಗಳು, ಹಿಂದಿನ ವೈಪರ್ ಮತ್ತು ವಾಷರ್ ಅನ್ನು ನೀಡಲಾಗಿದೆ. ಹೆಚ್ಚುವರಿಯಾಗಿ ಪ್ರಯಾಣಿಕರಿಗೆ ಈಗ ಹೆಚ್ಚಿನ ಆರಾಮದಾಯಕ ಪ್ರಯಾಣಕ್ಕೆ ಉತ್ತಮ ಸೀಟ್‌ಗಳನ್ನು ನಿಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications