ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್‌: ಇದಕ್ಕಿಂತ ಉತ್ತಮ ಆಫರ್‌ ಸದ್ಯಕ್ಕಿಲ್ಲ!

ಹ್ಯುಂಡೈ ಕಂಪನಿಯ ಕಾಂಪಾಕ್ಟ್‌ ಎಸ್‌ಯುವಿ ವೆನ್ಯು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಉತ್ತಮ ಮೈಲೇಜ್‌ ಮತ್ತು ಆಕರ್ಷಕ ಡಿಸೈನ್‌ನೊಂದಿಗೆ ಕೂಡಿರುವ ಈ ಕಾರು ಎಂಟ್ರಿ ಲೆವೆಲ್ ಎಸ್‌ಯುವಿ ಕಾರುಗಳನ್ನು ಖರೀದಿಸಬೇಕು ಎಂದುಕೊಂಡಿರುವವರ ಮೊದಲ ಆಯ್ಕೆ. ಈ ಕಾರನ್ನು ಕೊಳ್ಳುವವರಿಗೆ ಇದೀಗ ಸುವರ್ಣ ಕಾಲವೊಂದು ಬಂದಿದೆ.

ಹೌದು, ಇದೀಗ ಹ್ಯುಂಡೈ ವೆನ್ಯು ಕಾರನ್ನು ಖರೀದಿಸುವವರಿಗೆ ಕಂಪನಿ ಭರ್ಜರಿ ಆಫರ್‌ ನೀಡುತ್ತಿದೆ. ಹ್ಯುಂಡೈ ವೆನ್ಯೂ ಕಾರಿನ ಮತ್ತೊಂದು ಪರ್ಫಾಮೆನ್ಸ್‌ ವೇರಿಯಂಟ್‌ ಆಗಿರುವ ವೆನ್ಯು ಎನ್‌ಲೈನ್‌ ಕಾರಿಗೂ ಸಹ ಭರ್ಜರಿ ಆಫರ್‌ ಅನ್ನು ಕಂಪನಿ ನೀಡುತ್ತಿದೆ ಎಂದು ತಿಳಿದು ಬಂದಿದೆ. ಹ್ಯುಂಡೈ ವೆನ್ಯು ಎನ್‌ಲೈನ್‌ ಕಾರಿಗೆ ಇದೇ ಮೊದಲ ಬಾರಿಗೆ ಡಿಸ್ಕೌಂಟ್‌ ದೊರಕುತ್ತಿದೆ.

Hyundai Venue Gets Upto Rs 35000 Dsicount Now More Details Are Here

ಮಾಹಿತಿಗಳ ಪ್ರಕಾರ ಹ್ಯುಂಡೈ ಕಂಪನಿಯು ವೆನ್ಯು (Hyundai Venue) ಕಾರಿಗೆ ಸುಮಾರು 35000 ರೂಗಳ ವರೆಗೆ ಡಿಸ್ಕೌಂಟ್‌ ಸಿಗುತ್ತಿದ್ದು, ಇದರ ಎನ್‌ಲೈನ್‌ ಮಾದರಿ ಕಾರಿಗೆ ಸುಮಾರು 30000 ರೂಗಳ ವರೆಗೆ ಡಿಸ್ಕೌಂಟ್‌ ಸಿಗಲಿದೆ. ಹೀಗಾಗಿ ಈ ಕಾರನ್ನು ಖರೀದಿಸಬೇಕು ಎಂದುಕೊಂಡವರಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು, ಗ್ರಾಹಕರು ಕೂಡಲೇ ಸಮೀಪದ ಹ್ಯುಂಡೈ ಡೀಲರ್ ಶಾಪ್‌ಗೆ ತ್ವರೆ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಹ್ಯುಂಡೈ ವೆನ್ಯು ಕಾಂಪಾಕ್ಟ್‌ ಎಸ್‌ಯುವಿ ಬಗ್ಗೆ ನೋಡುವುದಾದರೆ, ಈ ಹ್ಯುಂಡೈ ವೆನ್ಯೂ ಎಸ್‍ಯುವಿಯಲ್ಲಿ 1.5-ಲೀಟರ್ 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ನೀಡಲಾಗಿದೆ. ಇದು ಕ್ರೆಟಾದಂತೆಯೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುವಂತೆ ಅಪ್ಡೇಟ್ ಮಾಡಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಬದಲಿಗೆ, ವೆನ್ಯೂ ಡೀಸೆಲ್ ಈಗ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಹ್ಯುಂಡೈ ಎಸ್‍ಯುವಿಯ ಎಂಜಿನ್ 113.5 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Hyundai Venue Gets Upto Rs 35000 Dsicount Now More Details Are Here

ಇತರ ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಸೇರಿವೆ. ಇದರಲ್ಲಿ 1.2-ಲೀಟರ್ ಎಂಜಿನ್ 83 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು 1.2 ಲೀಟರ್ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಆದರೆ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ iMT ಅಥವಾ 7-ಸ್ಪೀಡ್ DCT ಯೊಂದಿಗೆ ನೀಡಲಾಗುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರುವ ಹುಂಡೈ ಕ್ರೆಟಾ ಡೀಸೆಲ್‌ಗಿಂತ ಭಿನ್ನವಾಗಿದೆ. ಈ ಎಸ್‌ಯುವಿಯ ಡೀಸೆಲ್ ರೂಪಾಂತರವು ಪ್ರತ್ಯೇಕವಾಗಿ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೀಡಿದೆ.

Hyundai Venue Gets Upto Rs 35000 Dsicount Now More Details Are Here

ಇನ್ನು ಈ ಹ್ಯುಂಡೈ ಈಗ ಮಿಡ್-ಸ್ಪೆಕ್ S(O) ಟ್ರಿಮ್ ಮಟ್ಟದಿಂದ 6 ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ. ಈ ವೆನ್ಯೂ ಎಸ್‍ಯುವಿಯಲ್ಲಿ ಕೆಲವು ಫೀಚರ್ಸ್ ಗಳನ್ನು ಈಗ ಟಾಪ್ ಸ್ಪೀಡ್ SX(O) ರೂಪಾಂತರದಲ್ಲಿ ಬಂದಿದೆ. SX(O) ರೂಪಾಂತರದಲ್ಲಿರುವ ಪ್ರತ್ಯೇಕವಾಗಿ ಹಿಂದಿನ ಸೀಟ್ ರಿಕ್ಲೈನೇಶನ್, ಮತ್ತು ಕಪ್ ಹೋಲ್ಡರ್‌ನೊಂದಿಗೆ ಆರ್ಮ್‌ರೆಸ್ಟ್‌ನಂತಹ ಕೆಲವು ಪ್ರಮುಖ ಫೀಚರ್ಸ್ ಗಳಾಗಿವೆ. ಈ ಎಸ್‍ಯುವಿಯಲ್ಲಿ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 19, 2024, 16:44 [IST]
English summary
Hyundai venue gets upto rs 35000 discount now more details are here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+