ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್‌ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
ಹ್ಯುಂಡೈ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ವರ್ಗದವರಿಗೂ ಬೇಕಾದ ರೀತಿಯಲ್ಲಿ ಕಾರುಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದೆ. ಅದರಲ್ಲಿ ಮಧ್ಯಮ ವರ್ಗದವರಿಗೆ ಹ್ಯುಂಡೈ ಕಾರುಗಳ ಆಯ್ಕೆ ಸ್ವಲ್ಪ ಹೆಚ್ಚೇ ಎನ್ನಬಹುದು. ಅದರಲ್ಲಿ ಪ್ರಮುಖವಾದ ಸೆಡಾನ್ ಈ ಆಕರ್ಷಕ ಫೀಚರ್‌ಗಳಿಂದ ಕೂಡಿದ ಹ್ಯುಂಡೈ ವೆರ್ನಾ.
ಪ್ರೀಮಿಯಂ ಸೆಗ್ಮೆಂಟ್‌ನ ಸೆಡಾನ್ ತೆಗೆದುಕೊಳ್ಳಬೇಕು ಎಂದುಕೊಳ್ಳುವವರ ಮೊದಲ ಆಯ್ಕೆಯಲ್ಲಿ ವೆರ್ನಾ (Hyundai Verna) ಸಹ ಒಂದು. ಹಲವಾರು ವೇರಿಯಂಟ್‌ನಲ್ಲಿ ಸಾಕಷ್ಟು ಫೀಚರ್‌ಗಳ ಜೊತೆಗೆ ಲಭ್ಯವಾಗುವ ಈ ಕಾರು ಇದೀಗ ಭಾರೀ ಡಿಸ್ಕೌಂಟ್ ಅನ್ನು ಪಡೆದುಕೊಳ್ಳುತ್ತಿದೆ. ಮಾಹಿತಿಗಳ ಪ್ರಕಾರ ಈ ಕಾರು ಇದೀಗ ಸುಮಾರು 45000 ರೂಗಳ ಡಿಸ್ಕೌಂಟ್ ಅನ್ನು ಪಡೆದುಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಆಫರ್ ಈ ಕಾರಿನ ಎಲ್ಲಾ ವೇರಿಯಂಟ್‌ಗಳಿಗೂ ಲಭ್ಯವಿದ್ದು, ಕಾರು ಕೊಳ್ಳುವಾಗ ಗ್ರಾಹಕರು ತಮಗೆ ಬೇಕಾದ ವೇರಿಯಂಟ್ ಅನ್ನು ಖರೀದಿಸಬಹುದಾಗಿದೆ. ಮೊದಲಿನಿಂದಲೂ ಹ್ಯುಂಡೈ ವೆರ್ನಾ ಎಂದರೆ ಎಲ್ಲರ ಅಚ್ಚುಮೆಚ್ಚಿನ ಕಾರ್ ಆಗಿತ್ತು. ಆದರೆ ಕಳೆದ ವರ್ಷ ಇದ ಫೇಸ್‌ಲಿಫ್ಟ್ ಮಾದರಿ ಮಾರುಕಟ್ಟೆಗೆ ಲಾಂಚ್ ಅದ ಮೇಲಂತೂ ಇದರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ ಎಂದೇ ಹೇಳಬಹುದು.
ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆರ್ನಾ ಬಗ್ಗೆ ನೊಡುವುದಾದರೆ, ಈ ಹ್ಯುಂಡೈ ವೆರ್ನಾ ಸೆಡಾನ್ ಕಾರು EX, S, S ಮತ್ತು SX (O) ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಈ ವೆರ್ನಾ ಕಾರಿನಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಮತ್ತು 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ.

ಈ ವೆರ್ನಾ ಕಾರು ಕಾರಿನ EX ಮತ್ತು S ರೂಪಾಂತರಗಳಲ್ಲಿ 1.5 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 113.4 ಬಿಹೆಚ್‍ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ iVT ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.
ಇನ್ನು ಈ ಹ್ಯುಂಡೈ ಕಾರಿನ S ಮತ್ತು SX (O) ರೂಪಾಂತರಗಳಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಮಾದರಿಯಲ್ಲಿ 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ವೆರ್ನಾ ಕಾರಿನಲ್ಲಿ ಡ್ಯುಯಲ್-ಡಿಸ್ ಪ್ಲೇಯಂತಹ ಕೆಲವು ಸೆಗ್ಮೆಂಟ್-ಮೊದಲ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಈ ಕಾರಿನಲ್ಲಿ ಒಂದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂಗಾಗಿ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್‌ಸ್ ಡಿಸ್ ಪ್ಲೇಯನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ DCT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ವೆರ್ನಾದ ಪ್ರಮುಖ ವೈಶಿಷ್ಟ್ಯವೆಂದರೆ ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಹ್ಯುಂಡೈ ಕಾರಿನಲ್ಲಿ ADAS ಸೂಟ್ 17 ಸುಧಾರಿತ ಸುರಕ್ಷತಾ ಫೀಚರ್ಸ್ ಒದಗಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








