ಹೊಸ ಕಾರು ಖರೀದಿಸುತ್ತಿದ್ದೀರಾ? ಡೀಲರ್‌ಗೂ ಗೊತ್ತಿರದ ಈ ವಿಚಾರಗಳು ತಿಳಿದಿದ್ದರೆ ನೀವೆ ಪಂಟರು!
ಹೊಸ ಕಾರು ಖರೀದಿಸುವಾಗ ತುಂಬಾ ಉತ್ಸಾಹವಿರುತ್ತದೆ, ಅದೇ ವೇಳೆ ಗೊಂದಲವೂ ಇರುತ್ತದೆ. ಡೆಲಿವರಿ ಪಡೆಯುವಾಗ ಇದೇ ಉತ್ಸಾಹದಲ್ಲಿ ಹಲವರು ಸಮಗ್ರ ತಪಾಸಣೆ ಮಾಡುವುದನ್ನು ಮರೆತುಬಿಡುತ್ತಾರೆ. ಯಾವುದೇ ವಾಹನವಾಗಲಿ ಉತ್ಪಾದನಾ ಘಟಕದಿಂದ ಡೀಲರ್‌ಶಿಪ್‌ವರೆಗೆ ಸುರಕ್ಷಿತವಾಗಿ ಬಂದಿ ತಲುಪಿರುತ್ತದೆ ಎಂದುಕೊಳ್ಳುವುದು ತುಂಬಾ ತಪ್ಪು. ಕಳಪೆ ಗುಣಮಟ್ಟದ ಅಥವಾ ಹಾನಿಯಾಗಿರುವ ಕಾರುಗಳನ್ನು ಡೆಲಿವರಿ ಕೊಟ್ಟಿರುವ ಹಲವು ಉದಾಹರಣೆಗಳು ಕೂಡ ಇವೆ. ಡೆಲಿವರಿ ಪಡೆಯುವಾಗಲೇ ಸಮಸ್ಯೆಗಳನ್ನು ಕಂಡುಕೊಂಡರೆ ನೀವು ಸೇಫ್, ಡೆಲಿವರಿ ಪಡೆದ ನಂತರ ಸಮಸ್ಯೆಗಳು ಬೆಳಕಿಗೆ ಬಂದರೆ ಡೀಲರ್‌ಶಿಪ್ ಸುತ್ತ ಅಲೆಯುವ ಪರಿಸ್ಥಿತಿಗಳು ಎದುರಾಗುತ್ತವೆ.
ಹೊಸ ಕಾರು ಡೆಲಿವರಿ ತೆಗೆದುಕೊಳ್ಳುವ ಮೊದಲು ಉತ್ಸಾಹದೊಂದಿಗೆ ಶಾಂತವಾಗಿರುವುದು ಕೂಡ ಬಹಳ ಮುಖ್ಯ. ಕಾರಿನ ಸಮಗ್ರ ತಪಾಸಣೆ ಮಾಡುವ ಮೂಲಕ ಸಂಭಾವ್ಯ ಸಮಸ್ಯೆಗಳಿದ್ದರೇ ಗುರುತಿಸಬಹುದು. ಹಾಗಾದ್ರೆ ಯಾವೆಲ್ಲಾ ತಪಾಸನೆಗಳನ್ನು ಮಾಡಬಹುದು? ನಿಮ್ಮ ಹೊಸ ಕಾರನ್ನು ಡೀಲರ್‌ಶಿಪ್‌ನಿಂದ ಹೊರತರುವ ಮೊದಲು ಮಾಡಬೇಕಾದ ಅಗತ್ಯ ತಪಾಸಣೆಗಳು ಇಲ್ಲಿವೆ.

ಬಾಹ್ಯ ತಪಾಸಣೆ: ಕಾರಿನ ಹೊರಭಾಗವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, ಬಾಡಿ ಪ್ಯಾನೆಲ್‌ಗಳಲ್ಲಿ ಯಾವುದೇ ಡೆಂಟ್‌ಗಳು, ಗೀರುಗಳು ಅಥವಾ ಅಸಮವಾಗಿರುವ ಪ್ಯಾನಲ್ ಇದೆಯೇ ಪರಿಶೀಲಿಸಿ. ಕಾರಿಗೆ ಪೇಂಟ್ ಸರಿಯಾಗಿ ಆಗಿದೆಯೇ ನೋಡಿ, ಸರಿಯಾದ ಟೈರ್ ಗಾತ್ರ, ಸವೆತ, ಥ್ರೆಡ್ ಡೆಪ್ತ್ ಅಥವಾ ಪಂಕ್ಚರ್ ಆಗಿರುವ ಚಿಹ್ನೆಗಳಿವೆಯೇ ನೋಡಿ. ಏಕೆಂದರೆ ಡೆಲಿವರಿಗಾಗಿ ಡೀಲರ್ ಟೈರ್‌ಗಳನ್ನು ಬದಲಾಯಿಸಿದ ಹಲವು ಸಂದರ್ಭಗಳೂ ಇವೆ.
ಒಳಾಂಗಣ ತಪಾಸಣೆ: ಮೊದಲು ಡ್ಯಾಶ್‌ಬೋರ್ಡ್ ಮತ್ತು ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಜಾಗೃತವಾಗಿ ಪರಿಶೀಲಿಸಬೇಕು. ಎಲ್ಲಾ ವಾರ್ನಿಂಗ್ ಲೈಟ್‌ಗಳು, ಗೇಜ್‌ಗಳು ಮತ್ತು ಡಿಸ್ಪ್ಲೇಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ನೋಡಿ. ಸೀಟ್‌ಗಳಲ್ಲಿ ಯಾವುದೇ ಕಲೆಯಾಗಿದೆಯೇ ಪರಿಶೀಲಿಸಿದ ನಂತರ, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಆಡಿಯೋ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್ ಅನ್ನು ಪರೀಕ್ಷಿಸಬೇಕು.

ಓಡೋಮೀಟರ್ ಮತ್ತು ಇಂಧನ: ಹೊಸದಾಗಿ ಖರೀದಿಸಿದ ವಾಹನವು 100 ರಿಂದ 150 ಕಿ.ಮೀ ದೂರ ಓಡಿರುತ್ತದೆ. ಒಂದು ವೇಳೆ ಇದಕ್ಕಿಂತ ಹೆಚ್ಚು ದೂರ ವಾಹನ ಓಡಿದ್ದರೇ, ಡೀಲರ್‌ನಿಂದ ಸ್ಪಷ್ಟೀಕರಣವನ್ನು ಪಡೆಯುವುದು ಉತ್ತಮ. ಸಾಮಾನ್ಯವಾಗಿ ಡೀಲರ್ ಐದು ಲೀಟರ್ ಇಂಧನವನ್ನು ನೀಡುತ್ತಾರೆ. ಹತ್ತಿರದ ಬಂಕ್‌ಗಳನ್ನು ತಲುಪಲು ಇಂಧನ ಸಾಕಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಎಂಜಿನ್ ಪರಿಶೀಲನೆ: ಎಂಜಿನ್ ಮತ್ತು ಪರ್ಫಾಮೆನ್ಸ್ ಅನ್ನು ಪರಿಶಿಲಿಸಿದ ನಂತರ ಅದರ ಆಯಿಲ್ ಮಟ್ಟ, ಬಣ್ಣ ಮತ್ತು ಸ್ಥಿರತೆ, ಹಾಗೆಯೇ ಇತರ ಅಗತ್ಯ ಆಯಿಲ್‌ಗಳನ್ನು (ಕೂಲೆಂಟ್, ಬ್ರೇಕ್, ಟ್ರಾನ್ಸ್‌ಮಿಷನ್) ಪರಿಶೀಲಿಸಿ. ನಂತರ ಸೋರಿಕೆ ಅಥವಾ ಸವೆತದ ಯಾವುದೇ ಚಿಹ್ನೆಗಳಿಲ್ಲದೆ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿದೆಯೇ ಪರಿಶೀಲಿಸಿ. ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಮಾಡುವಾಗ ಅಸಾಮಾನ್ಯ ಶಬ್ದ ಅಥವಾ ವೈಬ್ರೇಷನ್ ಇದೆಯೇ ಕಂಡುಕೊಳ್ಳಿ.

ಡಾಕ್ಯುಮೆಂಟೇಶನ್ ಮತ್ತು ವಾರಂಟಿ ಚೆಕ್: ಮಾಲೀಕರ ಕೈಪಿಡಿ (Owner's Manual) ಸೇರಿಸಲಾಗಿದೆಯೇ ಎಂದು ಪರಿಶೀಲಿಸಿ. ಖಾತರಿ ನಿಯಮಗಳು, ಅವಧಿ ಮತ್ತು ಮೈಲೇಜ್ ಮಿತಿಗಳನ್ನು ಪರಿಶೀಲಿಸಿ. ಅಸ್ತಿತ್ವದಲ್ಲಿರುವ ಯಾವುದೇ ಸೇವಾ ದಾಖಲೆಗಳು ಅಥವಾ ಮೇಂಟೇನೆನ್ಸ್ ಹಿಸ್ಟರಿ ಪಡೆದುಕೊಳ್ಳಿ. ವಾಹನವನ್ನು ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾಗಿದೆಯೇ, ವಿಮೆ ಮಾಡಲಾಗಿದೆಯೇ ಎಂದು ಪರಿಶೀಲಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








