Maruti: ಜಪಾನ್‌ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
ಮಾರುತಿ ಸುಜುಕಿ ಕಂಪನಿಯು ನಾಲ್ಕನೇ ತಲೆಮಾರಿನ (2024) ಸ್ವಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹ್ಯಾಚ್‌ಬ್ಯಾಕ್ ಅನ್ನು ಮೊದಲು ಜಪಾನ್‌ನಲ್ಲಿ ಬಿಡುಗಡೆ ಮಾಡಲಾಯಿತು. ಇದೀಗ ಮಾರುತಿ ಸುಜುಕಿ ಕಂಪನಿಯು ಹೊಸ ತಲೆಮಾರಿನ ಸ್ವಿಫ್ಟ್ ಕಾರನ್ನು ಭಾರತದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಮಾರಾಟ ಮಾಡಲು ಯೋಜಿಸಿದೆ.
ಜಪಾನ್‌ನಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್‌ನ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳನ್ನು ಜಪಾನ್ ಎನ್‌ಸಿಎಪಿ ಇತ್ತೀಚೆಗೆ ಪ್ರಕಟಿಸಿದೆ. ಜಪಾನ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (JNCAP) ಕ್ರ್ಯಾಶ್ ಟೆಸ್ಟ್‌ನಲ್ಲಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ 4 - ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಭಾರತದಲ್ಲಿ ಮಾರುತಿ ಬ್ರೆಝಾ ಮಾತ್ರ (4-ಸ್ಟಾರ್) ಈವರೆಗೆ ಉತ್ತಮ ಅಂಕಗಳನ್ನು ಗಳಿಸಿದ ಮಾರುತಿ ಕಾರಾಗಿ ಗುರ್ತಿಸಿಕೊಂಡಿದೆ. ಉಳಿದರೆ ಈ ಮಟ್ಟದ ಸ್ಟಾರ್ ರೇಟಿಂಗ್ ಪಡೆದ ಮಾರುತಿ ಕಾರುಗಳನ್ನು ನೋಡಲು ಅಸಾಧ್ಯ. ಭಾರತ ಹಾಗೂ ಜಪಾನ್‌ನಲ್ಲಿ ಮಾರಾಟವಾಗುವ ಕಾರುಗಳು ಒಂದೇ ಆದ್ರೂ, ಈ ಗುಣಮಟ್ಟ ಹೇಗೆ ಬದಲಾಯಿತು?

ಹಣಕ್ಕೆ ತಕ್ಕ ಮೌಲ್ಯ: ಜಪಾನ್‌ನಲ್ಲಿ ಹೊಸ - ಜೆನ್ ಸುಜುಕಿ ಸ್ವಿಫ್ಟ್‌ನ ಬೆಲೆಗಳು 1,922,800 ಯೆನ್‌ಗಳಿಂದ ಆರಂಭವಾಗಿ 2,087,800 ಯೆನ್‌ಗಳವರೆಗೆ (ಅಂದಾಜು ರೂ. 11 ಲಕ್ಷದಿಂದ ಆರಂಭವಾಗಿ ರೂ. 20 ಲಕ್ಷದವರೆಗೆ) ಇದೆ. ಆದ್ರೆ ಭಾರತದಲ್ಲಿ ಇದೇ ಕಾರಿನ ಬೆಲೆಯು ರೂ. 6 ಲಕ್ಷದಿಂದ ಆರಂಭವಾಗಿ ರೂ. 11 (ಎಕ್ಸ್ ಶೋರೂಂ) ಲಕ್ಷವಿದೆ. ಹಾಗಾಗಿಯೇ ಭಾರತದಲ್ಲಿ ಮಾರಾಟವಾಗುವ ಸ್ವಿಫ್ಟ್‌ನ ಸುರಕ್ಷತಾ ಗುಣಮಟ್ಟ ಬದಲಾಗುತ್ತದೆ.
ಭಾರತೀಯರು ಕಡಿಮೆ ಬೆಲೆ, ಉತ್ತಮ ಮೈಲೇಜ್ ಹಾಗೂ ಫೀಚರ್ಸ್ ನೋಡುತ್ತಾರೆಯೇ ಹೊರತು ಗುಣಮಟ್ಟವನ್ನು ನೋಡುವುದಿಲ್ಲ. ಮಾರುತಿ ಕಂಪನಿ ಕೂಡ ಇದನ್ನು ಮನಗಂಡಿದ್ದು, ಅಗ್ಗದ ಬೆಲೆಗೆ ತನ್ನ ಹಲವು ಕಾರುಗಳನ್ನು ನೀಡುತ್ತಿರುವ ಕಾರಣ ದೇಶದಲ್ಲಿ ಇನ್ಯಾವುದೇ ಕಾರು ಬ್ರಾಂಡ್‌ಗೆ ಇಲ್ಲದ ಬೇಡಿಕೆ ಮಾರುತಿ ಸುಜುಕಿ ಕಾರಿಗಳಿಗೆ ಇದೆ.

ಭಾರತದ 2024ರ ಮಾರುತಿ ಸ್ವಿಫ್ಟ್ ಹೇಗಿರಲಿದೆ?: ಜಪಾನ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ಜೆನರೇಷನ್ ಸ್ವಿಫ್ಟ್ ಕಾರು 5 ಸ್ಟಾರ್‌ಗಳಿಗೆ 4 ಸ್ಟಾರ್ ರೇಟಿಂಗ್ ಗಳಿಸಿದೆ. ಸದ್ಯ ಈಗ ಮಾರಾಟದಲ್ಲಿರುವ ಭಾರತದ ಸ್ವಿಫ್ಟ್ 5 ಸ್ಟಾರ್‌ಗಳಿಗೆ ಕೇವಲ 1 ಸ್ಟಾರ್ ರೇಟಿಂಗ್ ಅನ್ನು ಮಾತ್ರ ಪಡೆದಿದೆ. ಇನ್ನು ಮುಂದಿನ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ 2024ರ ಮಾರುತಿ ಸುಜುಕಿ ಸ್ವಿಫ್ಟ್ 4 ಸ್ಟಾರ್ ರೇಟಿಂಗ್ ಗಳಿಸುವ ಬಗ್ಗೆ ಅನುಮಾನಗಳಿವೆ. ಏಕೆಂದರೆ ಇಲ್ಲಿ ಕಡಿಮೆ ಬೆಲೆಗೆ (ಅಂದಾಜು 6.5 ಲಕ್ಷ ಆರಂಭಿಕ ಬೆಲೆ) ಬಿಡುಗಡೆಯಾಗಲಿರುವ ಕಾರಣ ಜಪಾನಿನ ಮಾದರಿಗಿಂತ ಸ್ವಲ್ಪ ಭಿನ್ನವಾಗಿ ಸುರಕ್ಷತಾ ರೇಟಿಂಗ್ ಬದಲಾಗಬಹುದು.
ಜಪಾನ್ ಪರೀಕ್ಷೆ ಹೀಗಿತ್ತು: ಜಪಾನಿನ ಏಜೆನ್ಸಿ ಸುರಕ್ಷತಾ ಕಾರ್ಯಕ್ಷಮತೆ ಮತ್ತು ಘರ್ಷಣೆ ಸುರಕ್ಷತಾ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದೆ. 2024ರ ಸ್ವಿಫ್ಟ್ ಕಾರು ಡ್ಯಾಮೇಜ್ ರಿಡಕ್ಷನ್ ಬ್ರೇಕ್, ಡ್ಯಾಮೇಜ್ ರಿಟೇಷನ್ ಬ್ರೇಕ್, ಲೇನ್ ಡಿಪಾರ್ಚರ್ ಪ್ರಿವೆನ್ಷನ್, ಹೈ-ಪರ್ಫಾಮೆನ್ಸ್ ಹೆಡ್ ಲೈಟ್, ಫುಲ್-ರ್ಯಾಪ್ ಫ್ರಂಟಲ್ ಕೊಲಿಷನ್, ಸೈಡ್ ಕೊಲಿಷನ್, ರಿಯರ್ ಕೊಲಿಷನ್ ಪ್ರೊಟೆಕ್ಷನ್ ಮತ್ತು ಪಾದಚಾರಿಗಳ ಲೆಗ್ ಪ್ರೊಟೆಕ್ಷನ್‌ನಲ್ಲಿ ಫುಲ್ ಫೈವ್ ಸ್ಟಾರ್‌ಗಳನ್ನು ಪಡೆದುಕೊಂಡಿದೆ.

ಸೀಟ್ ಬೆಲ್ಟ್ ಎಚ್ಚರಿಕೆ, ಪಾದಚಾರಿಗಳ ತಲೆ ರಕ್ಷಣೆ ಮತ್ತು ರಾಂಗ್ ಪೆಡಲ್ ಒತ್ತುವಾಗ ವೇಗವರ್ಧನೆ ನಿಗ್ರಹ (Acceleration suppression), ಡ್ರೈವರ್ ಸೀಟಿಗೆ ಫುಲ್-ರ್ಯಾಪ್ ಫ್ರಂಟಲ್ ಕೊಲಿಷನ್ ಮತ್ತು ಆಫ್ಸೆಟ್ ಫ್ರಂಟಲ್ ಕೊಲಿಷನ್‌ನಲ್ಲಿ ನಾಲ್ಕು ಸ್ಟಾರ್‌ಗಳನ್ನು ನೀಡಲಾಗಿದೆ. ಹಾಗೆಯೇ ಆಫ್ಸೆಟ್ ಫ್ರಂಟಲ್ ಕೊಲಿಷನ್‌ನಲ್ಲಿ (ಹಿಂಭಾಗದ ಸೀಟ್) 3 ಸ್ಟಾರ್‌ಗಳನ್ನು ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications