ಭಾರತದ 2024 ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ vs ವಿದೇಶಿ ಕ್ರೆಟಾ... ಇಲ್ಲಿನ ಕ್ರೆಟಾಗೆ ಫುಲ್ ಬಜಾರ್!
ಭಾರತದಲ್ಲಿ ಇತ್ತೀಚೆಗಷ್ಟೆ ಹೊಸ 2024ರ ಹ್ಯುಂಡೈ ಕ್ರೆಟಾವನ್ನು ಅನಾವರಣಗೊಳಿಸಲಾಗಿದೆ. ಇನ್ನೇನು ಇದೇ ತಿಂಗಳ 16ರಂದು ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ. ನಾವು ಭಾರತದಲ್ಲಿ ನೋಡುತ್ತಿರುವ 2024ರ ಹೊಸ ಕ್ರೆಟಾ ನಮಗೆ ಹೊಸದಾಗಿರಬಹುದು, ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಗಳಾದ ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲಿ ಈಗಾಗಲೇ ಎರಡನೇ ತಲೆಮಾರಿನ ಹ್ಯುಂಡೈ ಕ್ರೆಟಾ ಬಳಕೆಯಲ್ಲಿದೆ.
ಸಾಮಾನ್ಯವಾಗಿ ಕಾರು ಕಂಪನಿಗಳು ಒಂದು ದೇಶದಲ್ಲಿ ಪರಿಚಯಿಸುವ ಮಾದರಿಯನ್ನು ಅದೇ ಡಿಸೈನ್‌ನಲ್ಲಿ ಮತ್ತೊಂದು ದೇಶದಲ್ಲಿ ಪರಿಚಯಿಸುವುದಿಲ್ಲ. ಅಲ್ಲಿನ ಆರ್ಥಿಕತೆಗೆ ಅನುಗುಣವಾಗಿ ಕಾರುಗಳನ್ನು ಹಾಗೂ ಅವುಗಳ ಫೀಚರ್‌ಗಳನ್ನು ನೀಡುತ್ತವೆ. ಅಂದರೆ ಆಯಾ ದೇಶಗಳ ಖರೀದಿ ಸಾಮರ್ಥ್ಯಗಳನ್ನು ನೋಡಿಕೊಂಡು ಕಾರು ಪ್ರೀಮಿಯಂ ಇರಬೇಕೆ ಅಥವಾ ಕಡಿಮೆ ವೈಶಿಷ್ಟ್ಯಗಳನ್ನು ಒಳಗೊಂಡಿರಬೇಕೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಹಾಗಾದ್ರೆ ಭಾರತೀಯ ಹಾಗೂ ಅಂತರಾಷ್ಟ್ರೀಯ ಕ್ರೆಟಾ ನಡುವಿನ ವ್ಯತ್ಯಾಸಗಳನ್ನು ನೋಡೋಣ.

ಇಂಟೀರಿಯರ್: ಭಾರತದ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇಗಾಗಿ ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಸ್ಕ್ರೀನ್‌ಗಳನ್ನು ಪಡೆದಿದೆ, ಜೊತೆಗೆ ಹೊಸ ಡ್ಯಾಶ್‌ಬೋರ್ಡ್‌ನಲ್ಲಿ ಹೊಸ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ಇನ್ನು ಅಂತರಾಷ್ಟ್ರೀಯ ಹ್ಯುಂಡೈ ಕ್ರೆಟಾ ಹಳೆಯ ಮಾದರಿಯ ಡ್ಯಾಶ್‌ಬೋರ್ಡ್ ವಿನ್ಯಾಸ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 7-ಇಂಚಿನ TFT ನೊಂದಿಗೆ ಸಾಗಿಸುತ್ತಿದೆ.
ಮುಂಭಾಗದ ವಿನ್ಯಾಸ: ಇತರ ದೇಶಗಳಲ್ಲಿ ಫೇಸ್‌ಲಿಫ್ಟ್ ಹ್ಯುಂಡೈ ಕ್ರೆಟಾ ಪ್ಯಾರಾ ಮೆಟ್ರಿಕ್ ಡ್ಯುಯಲ್ ಎಲ್‌ಇಡಿ ಲ್ಯಾಂಪ್‌ಗಳೊಂದಿಗೆ ಬಂದರೆ ಹೊಸ ಮುಂಬರುವ ಭಾರತದ ಹ್ಯುಂಡೈ ಕ್ರೆಟಾ ಬಾಕ್ಟಿ ಗ್ರಿಲ್ ವಿನ್ಯಾಸ, ಹೊಸ ಎಲ್‌ಇಡಿ ಡಿಆರ್ಎಲ್‌ಗಳನ್ನು ಹೊಂದಿದೆ. ಇದು ಡಿಆರ್‌ಎಲ್‌ಗಳನ್ನು ತಲೆಕೆಳಗಾದ ಎಲ್ ಆಕಾರವನ್ನು ಸೂಚಿಸುವುದರ ಜೊತೆಗೆ ಅಗಲವಾದ ಬಾನೆಟ್ ವಿನ್ಯಾಸವನ್ನು ಹೊಂದುವ ಮೂಲಕ ಭಾರತದ ಸ್ಪೆಕ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಹಿಂಭಾಗದ ವಿನ್ಯಾಸ: ಭಾರತದ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಹಿಂಭಾಗದಲ್ಲಿ ಹೊಸ ಮುಂಭಾಗಕ್ಕೆ ಹೊಂದಿಕೊಳ್ಳುವಂತೆ ಹೊಸ ಡಿಸೈನ್ ನೀಡಲಾಗಿದೆ. ಎಲ್ಇಡಿ ಡಿಆರ್ಎಲ್‌ಗಳ ಲೈಟ್ ಸಿಗ್ನೇಚರ್‌ಗೆ ಹೊಂದಿಕೆಯಾಗುವ ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್ ಸೆಟಪ್ ನೋಡಬಹುದು. ಜೊತೆಗೆ ಹೊಸ ಬಂಪರ್‌ನಲ್ಲಿ ಆಕರ್ಷಕ ಸಿಲ್ವರ್ ಸ್ಕಿಡ್ ಪ್ಲೇಟ್ ನೀಡಲಾಗಿದೆ. ಅಂತರಾಷ್ಟ್ರೀಯ ಕ್ರೆಟಾ ಹಳೆಯ ಫೇಸ್ ಲಿಫ್ಟ್ ಮಾದರಿಗೆ ಹೋಲಿಸಿದರೆ ಹಿಂಭಾಗದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಪಡೆದಿಲ್ಲ.
ಪವರ್‌ಟ್ರೇನ್: ಕೆಲವು ಮಾರುಕಟ್ಟೆಗಳು ಇದನ್ನು ಕೇವಲ 1.5-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಪಡೆಯುತ್ತವೆ, ಇತರವುಗಳು 1-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ ಆಯ್ಕೆಯೊಂದಿಗೆ ಬರುತ್ತವೆ. ನಮ್ಮ ಭಾರತದಲ್ಲಿ ಮೂರು 1.5-ಲೀಟರ್ ಎಂಜಿನ್ ಆಯ್ಕೆಗಳನ್ನು ಪಡೆಯಬಹುದು. ಅವುಗಳೆಂದರೆ ನ್ಯಾಚುರಲ್ಲಿ ಆಸ್ಪಿರೇಟೆಡ್, ಟರ್ಬೋಚಾರ್ಜ್ಡ್ ಮತ್ತು ಡೀಸೆಲ್.

ಫೇಸ್‌ಲಿಫ್ಟೆಡ್ ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯನ್ನು 11 ಲಕ್ಷ ರೂಪಾಯಿಗಳ ನಿರೀಕ್ಷಿತ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಪ್ರವೇಶಿಸಲಿದೆ. ಇದು ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಕಿಯಾ ಸೆಲ್ಟೋಸ್, ಟೊಯೊಟಾ ಹೈರೈಡರ್, ಹೋಂಡಾ ಎಲಿವೇಟ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications