ಮುಂಬರಲಿರುವ ಈ 5 ಕಾರುಗಳಿಗೆ ಜಾತಕ ಪಕ್ಷಿಯಂತೆ ಗ್ರಾಹಕರು ಕಾಯುತ್ತಿದ್ದಾರೆ.. ಯಾವುವು, ವಿಶೇಷತೆಗಳೇನು?

ಭಾರತದ ಕಾರು ಮಾರುಕಟ್ಟೆಯಲ್ಲಿ ಈ ವರ್ಷದ ಮೇ ತಿಂಗಳವರೆಗೆ ವಿವಿಧ ವಾಹನ ತಯಾರಕರಿಂದ ಹಲವು ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿಗಳು ಅದ್ದೂರಿಯಾಗಿ ಬಿಡುಗಡೆಗೊಂಡಿದ್ದವು. ಮುಂಬರುವ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್, ಮಹೀಂದ್ರಾ, ಮಾರುತಿ ಸುಜುಕಿ ಮತ್ತು ಸಿಟ್ರನ್ ಕಂಪನಿಗಳು, ಐದು ಹೊಚ್ಚ ಹೊಸ ಕಾರುಗಳನ್ನು ಪರಿಚಯಿಸಲು ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿವೆ. ನೂತನ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿಯ ಬರುವಿಕೆಯ ಮೇಲೆ ಗ್ರಾಹಕರಿಗೂ ಕೂಡ ನಿರೀಕ್ಷೆಗಳು ದುಪ್ಪಟ್ಟಾಗಿದ್ದು, ಜಾತಕ ಪಕ್ಷಿಯಂತೆ ಕಾತರದಿಂದ ತುದಿಗಾಲಿನಲ್ಲಿ ನಿಂತಿದ್ದಾರೆ.

ಮೊದಲಿಗೆ ಜೂನ್ 7ರಂದು ಬಿಡುಗಡೆಯಾಗಲಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಟಾಟಾ ಆಲ್ಟ್ರೋಜ್ ರೇಸರ್ (Tata Altroz Racer) ಹ್ಯಾಚ್‌ಬ್ಯಾಕ್‌ ಬಗ್ಗೆ ಮಾತನಾಡೋಣ. ಈ ಕಾರು ರೂ.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಬುಕ್ಕಿಂಗ್ ಕೂಡ ಪ್ರಾರಂಭವಾಗಿದ್ದು, ಆಸಕ್ತ ಗ್ರಾಹಕರು ರೂ.21,000 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಕಾಯ್ದಿರಿಸಬಹುದು.

Indians Waiting Upcoming 5 Cars Altroz Racer Swift Cng Dzire Thar 5 Door Basalt

ಹೊಸ ಟಾಟಾ ಆಲ್ಟ್ರೋಜ್ ರೇಸರ್ ಕಾರು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಗಬಹುದು. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರುವ ಸಾಧ್ಯತೆಯೂ ಇದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, 360-ಡಿಗ್ರಿ ಸರೌಂಡ್ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎನ್ನಲಾಗಿದೆ.

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್ ಸಹ ಬಹುತೇಕ ಈ ವರ್ಷವೇ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಈ ಕಾರು, ಹೋದ ತಿಂಗಳು ದೇಶೀಯ ಮಾರುಕಟ್ಟೆಗೆ ಬಂದ ನಾಲ್ಕನೇ ತಲೆಮಾರಿನ ಸ್ವಿಫ್ಟ್ (Swift) ಹ್ಯಾಚ್‌ಬ್ಯಾಕ್‌ ರೀತಿಯಲ್ಲಿಯೇ ಮುಂಭಾಗ (ಫ್ರಂಟ್) ಹಾಗೂ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಹೊಂದಿರಲಿದೆ. ಜೊತೆಗೆ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರಬಹುದು ಎಂದು ತಿಳಿದುಬಂದಿದೆ.

Indians Waiting Upcoming 5 Cars Altroz Racer Swift Cng Dzire Thar 5 Door Basalt

ಮುಂಬರುವ ತಿಂಗಳಲ್ಲಿ ದೇಶೀಯ ಖರೀದಿದಾರರಿಗೆ ನೂತನ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ (Maruti Suzuki Swift CNG) ಹ್ಯಾಚ್‌ಬ್ಯಾಕ್‌ ಲಭ್ಯವಾಗುವ ನಿರೀಕ್ಷೆಯಿದೆ. ಇದು ಪೆಟ್ರೋಲ್ ಚಾಲಿತ ಮಾದರಿ (ಮಾಡೆಲ್)ಯಂತೆ 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಎಂಜಿನ್ ಪಡೆದಿರಲಿದೆ. ಆದರೆ ಕಡಿಮೆ ಪವರ್ (ಶಕ್ತಿ) ಮತ್ತು ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ಹೊಚ್ಚ ಹೊಸ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ ರೂ.6.49 ಲಕ್ಷದಿಂದ ರೂ.9.64 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಆದರೆ ಸಿಎನ್‌ಜಿ ರೂಪದಲ್ಲಿ ಬರುವ ಆವೃತ್ತಿಯು ಸುಮಾರು ರೂ.90,000 ದಿಂದ ರೂ.95,000 ವರೆಗೆ ದುಬಾರಿಯಾಗಿರಲಿದೆ ಎನ್ನಲಾಗಿದ್ದು, ಈಗಿರುವ ಕಾರಿನಂತೆ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. 32 ಕೆಎಂ/ಕೆಜಿ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ.

Indians Waiting Upcoming 5 Cars Altroz Racer Swift Cng Dzire Thar 5 Door Basalt

ಬಹುನಿರೀಕ್ಷಿತ ಮಹೀಂದ್ರಾ ಥಾರ್ 5-ಡೋರ್ (Mahindra Thar 5-Door) ಎಸ್‌ಯುವಿಯು ಈ ವರ್ಷಾಂತ್ಯದೊಳಗೆ ಬಿಡುಗಡೆಯಾಗಬಹುದು. ಈ ಕಾರು ರೂ.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಲಿದ್ದು, ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಸಿಟ್ರನ್ ಬಸಾಲ್ಟ್ (Citroen Basalt) ಎಸ್‌ಯುವಿ ಕೂಡ ಮುಂಬರುವ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, 1.2-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿರಬಹುದು ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 3, 2024, 15:46 [IST]
English summary
Indians waiting upcoming 5 cars altroz racer swift cng dzire thar 5 door basalt
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+