ಮಹೀಂದ್ರಾಗೆ ಭರ್ಜರಿ ಬೇಡಿಕೆ: ಜನವರಿಯಲ್ಲಿ ಮಾರಾಟವಾದ ಕಾರುಗಳೆಷ್ಟು ಗೊತ್ತಾ?
ಭಾರತದ ಪ್ರಮುಖ ಆಟೋಮೋಟಿವ್ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ ಲಿಮಿಟೆಡ್ (M&M Ltd.), ಜನವರಿ 2024 ರಲ್ಲಿ ಅದರ ಒಟ್ಟಾರೆ ವಾಹನ ಮಾರಾಟವನ್ನು ಘೋಷಿಸಿದೆ. ಪ್ರತಿ ತಿಂಗಳಿನಂತೆ ಈ ಬಾರಿಯೂ ತನ್ನ ಭರ್ಜರಿ 73,944 ವಾಹನಗಳ ಮಾರಾಟವನ್ನು ದಾಖಲಿಸಿದೆ. ರಫ್ತು ಸೇರಿದಂತೆ ಶೇ15 ರಷ್ಟು ಬೆಳವಣಿಗೆಯಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ.
ಒಟ್ಟಾರೆ ವಾಹನಗಳಲ್ಲಿ ವಿಭಾಗಗಳವಾರು ನೋಡುವುದಾದ್ರೆ, ಯುಟಿಲಿಟಿ ವೆಹಿಕಲ್ಸ್ ವಿಭಾಗದಲ್ಲಿ ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ 43,068 ವಾಹನಗಳನ್ನು ಮಾರಾಟ ಮಾಡಿದೆ. ರಫ್ತು ಸೇರಿದಂತೆ ಒಟ್ಟಾರೆ 43,866 ವಾಹನಗಳ ಬೆಳವಣಿಗೆಯಾಗಿದೆ. ವಾಣಿಜ್ಯ ವಾಹನಗಳ ದೇಶೀಯ ಮಾರಾಟವು 23,481 ರಷ್ಟಿದೆ. ಇವು ಮಹೀಂದ್ರಾಗೆ ಭಾರತದಲ್ಲಿ ತನ್ನ ಗ್ರಾಹಕರ ಬಲವಾದ ಬೇಡಿಕೆಯನ್ನು ತೋರಿಸುತ್ತದೆ.

M&M ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, "ಜನವರಿಯಲ್ಲಿ ನಾವು ಒಟ್ಟು 43,068 SUV ಗಳನ್ನು ಮಾರಾಟ ಮಾಡಿದ್ದೇವೆ, ಆರೋಗ್ಯಕರ ಶೇ31 ರಷ್ಟು ಬೆಳವಣಿಗೆಯಾಗಿದೆ. ಎಲ್ಲಾ ವಿಭಾಗದ ವಾಹನಗಳು ಒಟ್ಟು 73,944 ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಶೇ15 ರಷ್ಟು ಬೆಳವಣಿಗೆಯಾಗಿದೆ ಎಂದರು.
ನಾವು 2024 XUV700 ಬಿಡುಗಡೆಯೊಂದಿಗೆ ವರ್ಷವನ್ನು ಪ್ರಾರಂಭಿಸಿದ್ದೇವೆ. ಈ ಕಾರು ಸಂಪೂರ್ಣ ಹೊಸ ವೈಶಿಷ್ಟ್ಯಗಳೊಂದಿಗೆ, ಸೌಕರ್ಯ, ತಂತ್ರಜ್ಞಾನ ಮತ್ತು ಅತ್ಯಾಧುನಿಕತೆಯನ್ನು ಮುಂದಿನ ಹಂತಕ್ಕೆ ಏರಿಸುತ್ತದೆ. ಈ ಗಣರಾಜ್ಯೋತ್ಸವದ ದಿನವಾದ 'ವಿಕ್ಷಿತ್ ಭಾರತ್'ನ ಉತ್ಸಾಹವನ್ನು ಗೌರವಿಸುತ್ತಾ, ನಾವು ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಸಾಧಕರನ್ನು ಗೌರವಿಸುತ್ತ ಭಾರತದ ಪ್ರಗತಿಯಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸುವ "ಬದಲಾವಣೆಯ ಚಾಲಕರು" (Drivers of Change)ಉಪಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಜನವರಿಯಲ್ಲಿ ಹೊಸ XUV700 ಬಿಡುಗಡೆ: ಮಹೀಂದ್ರಾ XUV700 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಜನವರಿ 15 ರಂದು ಬಿಡುಗಡೆಗೊಳಿಸಿದೆ. ಈ ಹೊಸ ಮಹೀಂದ್ರಾ XUV700 ಎಸ್‍ಯುವಿಯ ಆರಂಭಿಕ ಬೆಲೆಯು ರೂ.13.99 ಲಕ್ಷವಾದರೆ, ಟಾಪ್ ವೆರಿಯೆಂಟ್ ಮಾದರಿಯ ಬೆಲೆಯು ರೂ.23.99 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಹೊಸ ಮಹೀಂದ್ರಾ XUV700 (Mahindra XUV700) ಎಸ್‍ಯುವಿಯು ನವೀಕರಿಸಿದ ಕ್ಯಾಬಿನ್‌ನಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಆದರೆ ಹೊರಭಾಗದಲ್ಲಿ, ವಾಹನ ತಯಾರಕರು ನಾಪೋಲಿ ಬ್ಲ್ಯಾಕ್ ಪೇಂಟ್ ಥೀಮ್ ಅನ್ನು ಸ್ಟೆಲ್ತ್ ಲುಕ್ ಅನ್ನು ನೀಡಿದ್ದಾರೆ. 2021ರ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು ತನ್ನ ಮೊದಲ XUV700 ಎಸ್‍ಯುವಿಯು ಬಿಡುಗಡೆ ಮಾಡಿತು.

ಈ ಎಸ್‍ಯುವಿಯು ಬಿಡುಗಡೆಯಾದಗಿನಿಂದ 1.40 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಈ ಮೈಲಿಗಲ್ಲನ್ನು ಸಾಧಿಸಿದ ಅತ್ಯಂತ ವೇಗದ ಮಹೀಂದ್ರಾ ಎಸ್‌ಯುವಿಯಾಗಿದೆ. ಮಹೀಂದ್ರಾ XUV700 ಎಸ್‍ಯುವಿ MX, AX3, AX5, AX7 ಮತ್ತು AX7L ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.
2024ರ ಮಹೀಂದ್ರಾ XUV700 ಎಸ್‍ಯುವಿಯ ವಿನ್ಯಾಸವು ಹಿಂದಿನ ಮಾದರಿಗೆ ಹೋಲುತ್ತದೆ ಮತ್ತು ಮೂಲ ವಿನ್ಯಾಸ ಮತ್ತು ಸಿಲೂಯೆಟ್ ಹಿಂದಿನಂತೆಯೇ ಇರುತ್ತದೆ. ಈ ಎಸ್‍ಯುವಿಯ AX7L ಮತ್ತು AX7 ರೂಪಾಂತರಗಳಿಗೆ ಹೊಸ ನಾಪೋಲಿ ಬ್ಲ್ಯಾಕ್ ಪೇಂಟ್ ಆಯ್ಕೆಯ ಸೇರ್ಪಡೆಯು ಬೀಫಿ ಎಸ್‍ಯುವಿಗೆ ಹೆಚ್ಚಿನ ಝಿಂಗ್ ಅನ್ನು ಸೇರಿಸಿದೆ. ಈ ಎರಡು ರೂಪಾಂತರಗಳು ಐಚ್ಛಿಕ ಡ್ಯುಯಲ್-ಟೋನ್ ಬಣ್ಣದೊಂದಿಗೆ ಬರುತ್ತವೆ.

2024ರ ಮಹೀಂದ್ರಾ XUV700 ಎಸ್‍ಯುವಿಯ ಎಂಜಿನ್ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಮಾದರಿಯು 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಪಡೆಯುತ್ತದೆ, ಆದರೆ ಡೀಸೆಲ್ ರೂಪಾಂತರವು 2.2-ಲೀಟರ್ ಟರ್ಬೊ-ಡೀಸೆಲ್ ಮೋಟರ್ ಅನ್ನು ಪಡೆಯುತ್ತದೆ, ಇದು ಹಿಂದಿನ ಮಾದರಿಯಲ್ಲಿಯೂ ಕಾರ್ಯನಿರ್ವಹಿಸುತ್ತಿತ್ತು. ಆದ್ದರಿಂದ ಇವುಗಳ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಒಂದೇ ಆಗಿವೆ.


Click it and Unblock the Notifications