ಕಿಯಾ ಅಬ್ಬರಕ್ಕೆ ಎಲ್ಲವೂ ತತ್ತರ! ಸುನಾಮಿ ಎಬ್ಬಿಸಿ ಮುನ್ನುಗುತ್ತಿದೆ... ಹೊಸ ದಾಖಲೆ

ಭಾರತದಲ್ಲಿ ತನ್ನ ಐದು ವರ್ಷಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕಿಯಾ ಇಂಡಿಯಾ, ದೇಶೀಯ ಮಾರುಕಟ್ಟೆಯಲ್ಲಿ 1 ಮಿಲಿಯನ್ (10 ಲಕ್ಷ) ಕಾರುಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ. ದೇಶದಲ್ಲಿ ಕೇವಲ 59 ತಿಂಗಳೊಳಗೆ ಈ ಮೈಲಿಗಲ್ಲನ್ನು ಸಾಧಿಸಿದ್ದು, ಕಿಯಾ ಸೆಲ್ಟೋಸ್ ಕಾರು' ಕಂಪನಿಯ ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಟ್ಟು ಮಾರಾಟದಲ್ಲಿ ಶೇ48 ಕ್ಕಿಂತ ಹೆಚ್ಚಿನ ಪಾಲು ಸೆಲ್ಟೋಸ್‌ನದ್ದೇ ಇದೆ. ಸೋನೆಟ್ ಮತ್ತು ಕ್ಯಾರೆನ್ಸ್ ಕ್ರಮವಾಗಿ ಕಿಯಾದ ಒಟ್ಟು ದೇಶೀಯ ಮಾರಾಟದಲ್ಲಿ ಶೇ34 ಮತ್ತು ಶೇ16 ರಷ್ಟು ಕೊಡುಗೆ ನೀಡಿವೆ ಎಂದು ಕಂಪನಿ ತಿಳಿಸಿದೆ.

2019 ರಲ್ಲಿ ಪ್ರಾರಂಭವಾದ ಕಂಪನಿಯು ತನ್ನ ಹೊಸ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಡಿಸೈನ್‌ನೊಂದಿಗೆ ಭಾರತೀಯ ಕಾರು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತು. ಅಂದಿನಿಂದ ಕಿಯಾ ಭಾರತದಲ್ಲಿ ತನ್ನ ಆಟೋಮ್ಯಾಟಿಕ್ ಮತ್ತು ಹೊಸ ಟ್ರಾನ್ಸ್‌ಮಿಷನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ವಿನೂತನ ಚಾಲನಾ ಅನುಭವ ನೀಡುವಲ್ಲಿ ಯಶಸ್ವಿಯಾಗಿ ಮುಂದುವರಿದಿದೆ.

kia-achieve-1-million-domestic-sales-in-india-details

ಪ್ರಸ್ತುತ ಕಿಯಾ ಇಂಡಿಯಾ IVT, 6AT ಮತ್ತು 7DCT ಎಂಬ 3 ಆಟೋಮ್ಯಾಟಿಕ್ ಟ್ರಾನ್ಸ್‌ಮಿಷಗಳನ್ನು ನೀಡುತ್ತಿದೆ. ಇವು ಕಂಪನಿಯ ಮಾರಾಟದಲ್ಲಿ ಶೇ32 ರಷ್ಟು ಕೊಡುಗೆ ನೀಡಿವೆ. ಕಿಯಾ 2020 ರಲ್ಲಿ ಸೋನೆಟ್‌ನೊಂದಿಗೆ iMT (ಇಂಟೆಲಿಜೆಂಟ್ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಅನ್ನು ಸಹ ಪ್ರಾರಂಭಿಸಿತು, ಇದು ಶೇ15 ರಷ್ಟು ಕೊಡುಗೆ ನೀಡಿದೆ.

ಕಂಪನಿಯು 2019 ರಲ್ಲಿ 45,226 ಯುನಿಟ್‌ ಕಾರುಗಳ ವಾರ್ಷಿಕ ಮಾರಾಟದೊಂದಿಗೆ ಪ್ರಾರಂಭವಾಗಿ, 2020 ರಲ್ಲಿ 1,40,505 ಯುನಿಟ್‌ ಕಾರುಗಳಿಗೆ, 2021 ರಲ್ಲಿ 1,81,583 ಯುನಿಟ್‌ಗಳಿಗೆ ಮತ್ತು 2022 ರಲ್ಲಿ 2,54,556 ಯುನಿಟ್‌ಗಳಿಗೆ ಬೆಳೆದಿದೆ. ಪ್ರಸ್ತುತ ಕಿಯಾ ದೇಶೀಯ ಮಾರುಕಟ್ಟೆಯಲ್ಲಿ 2024ರ ಮೊದಲ 7 ತಿಂಗಳುಗಳಲ್ಲಿ ಸುಮಾರು 1.5 ಲಕ್ಷ ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ.

kia-achieve-1-million-domestic-sales-in-india-details

ಇದು ಮುಂಬರುವ ಹಬ್ಬದ ಸೀಸನ್ ವೇಳೆಗೆ ಉತ್ತಮ ಪ್ರಗತಿಯನ್ನು ಸೂಚಿಸುತ್ತಿದೆ. ಕಂಪನಿಯು 256 ನಗರಗಳಲ್ಲಿ 588 ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್‌ನೊಂದಿಗೆ ದೇಶದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಿದೆ. ಭಾರತದಿಂದ ಕಿಯಾ 100 ಕ್ಕೂ ಹೆಚ್ಚು ರಫ್ತು ಮಾರುಕಟ್ಟೆಗಳಿಗೆ 2.6 ಲಕ್ಷ ಕಾರುಗಳನ್ನು ರವಾನಿಸಿದೆ. ಕಿಯಾ ಇಂಡಿಯಾದ ಒಟ್ಟು ಮಾರಾಟಗಳು (ವಿದೇಶಗಳಿಗೆ ರಫ್ತು ಒಳಗೊಂಡಂತೆ) ಸುಮಾರು 1.3 ಮಿಲಿಯನ್ ಯುನಿಟ್‌ಗಳಾಗಿವೆ ಎಂದು ಕಂಪನಿ ತಿಳಿಸಿದೆ.

ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಕಿಯಾ ಇಂಡಿಯಾದ ಮುಖ್ಯ ಮಾರಾಟ ಅಧಿಕಾರಿ ಜುನ್ಸು ಚೋ, ಒಂದು ದಶಕಕ್ಕೂ ಹೆಚ್ಚು ಅನುಭವವಿರುವ ಇತರ ಬ್ರಾಂಡ್‌ಗಳ ಸ್ಪರ್ಧೆಯ ನಡುವೆಯೂ 1 ಮಿಲಿಯನ್ ದೇಶೀಯ ಮಾರಾಟವನ್ನು ಸಾಧಿಸುವುದು ಭಾರತೀಯ ಮಾರುಕಟ್ಟೆಯ ಮೇಲಿನ ನಮ್ಮ ನಿರಂತರ ಗಮನಕ್ಕೆ ಸಾಕ್ಷಿಯಾಗಿದೆ. ನಮ್ಮಲ್ಲಿ ನಂಬಿಕೆಯಿಟ್ಟ ನಮ್ಮ ಎಲ್ಲಾ ಗ್ರಾಹಕರಿಗೆ ಹೃತ್ಪೂರ್ವಕ ಧನ್ಯವಾದಗಳು.

kia-achieve-1-million-domestic-sales-in-india-details

ನಮ್ಮ ಇತ್ತೀಚಿನ ತಂತ್ರಜ್ಞಾನ, ವಿನ್ಯಾಸ ಮತ್ತು ಕಾರಿನಲ್ಲಿರುವ ವೈಶಿಷ್ಟ್ಯಗಳೊಂದಿಗೆ, ನಾವು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಸ್ಥಾಪಿತ ಅಭ್ಯಾಸಗಳನ್ನು ನಿರಂತರವಾಗಿ ಸವಾಲು ಮಾಡುತ್ತೇವೆ. ನಾವು ಈ ವರ್ಷ ನಮ್ಮ ಜಾಗತಿಕ ಮಾಡಲ್‌ಗಳನ್ನು ಭಾರತದಲ್ಲೂ ಪರಿಚಯಿಸುತ್ತೇವೆ. ನಮ್ಮ ನವೀನ ಮತ್ತು ಮಹತ್ವಾಕಾಂಕ್ಷೆಯ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ, ಬ್ರಾಂಡ್ ವೇಗವಾಗಿ ಬೆಳೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, August 8, 2024, 17:44 [IST]
English summary
Kia achieve 1 million domestic sales in india details
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+