ಸಖತ್‌ ಮೈಲೇಜ್‌ನ ಈ 7 ಸೀಟರ್‌ ಫ್ಯಾಮಿಲಿ ಕಾರು ಖರೀದಿಸಬೇಕೆ?: ಇಲ್ಲಿದೆ ನೋಡಿ ಸುಲಭ ಉಪಾಯ!

ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳ ಬೇಡಿಕೆ ಹೆಚ್ಚಾಗುತ್ತಿರುವಂತೆ ಹಲವು ಕಂಪನಿಗಳು ಈ ಸೆಗ್ಮೆಂಟ್‌ಗೆ ಧುಮುಕುತ್ತಿವೆ. ಆ ಸೆಗ್ಮೆಂಟ್‌ನಲ್ಲಿ ಇತ್ತೀಚೆಗೆ ಮುನ್ನುಗ್ಗುತ್ತಿರುವ ಕಾರುಗಳಲ್ಲಿ ಕಿಯಾ ಕಾರೆನ್ಸ್‌ ಸಹ ಒಂದು,. ಇಂದಿನ ಈ ಲೇಖನದಲ್ಲಿ ಕಿಯಾ ಕಾರೆನ್ಸ್ ಕಾರಿನ ಡೌನ್‌ಪೇಮೆಂಟ್ ಮತ್ತು ಇಎಂಐ ಕುರಿತಾಗಿ ನೋಡೋಣ.

ಮೊದಲಿಗೆ ಬೆಂಗಳೂರಿನಲ್ಲಿ ಕಿಯಾ ಕಾರೆನ್ಸ್‌ ಆರಂಭಿಕ ವೇರಿಯಂಟ್ ಆನ್‌ ರೋಡ್‌‌ ಬೆಲೆ ಆರಂಭವಾಗುವುದು, 13,10,858 ರೂಪಾಯಿಗಳು. ಇದರಲ್ಲಿ ಎಕ್ಸ್‌ ಶೋರೂಮ್‌ ಬೆಲೆ ಸುಮಾರು 10,51,900 ಲಕ್ಷಗಳು. ಇದರ ಜೊತೆಗೆ ಇನ್ಸುರೆನ್ಸ್‌ ಮತ್ತು ಆರ್‌ಟಿಒ ಟ್ಯಾಕ್ಸ್‌ಗಳು ಸೇರಿ ಸುಮಾರು 13,10,858 ಲಕ್ಷ ರೂಗಳಿಗೆ ನಿಮಗೆ ಸಿಗುತ್ತದೆ.

Kia Carens MPV Down payment EMI And More Details

ಇನ್ನಿದರ (KIA Carens) ಡೌನ್‌ ಪೇಮೆಂಟ್‌ ಬಗ್ಗೆ ನೋಡುವುದಾದರೆ ನೀವು ಈ ವಾಹನಕ್ಕೆ 2 ಲಕ್ಷ ರೂ ಡೌನ್‌ ಪೇಮೆಂಟ್ ಮಾಡಿದರೆ ಸುಮಾರು ೯.೮ % ಬಡ್ಡಿದರದಲ್ಲಿ ೭ ವರ್ಷಗಳ ಕಾಲಾವಧಿಯ ಲೋನ್‌ ಮಾಡಬಹುದು. ಹೀಗೆ ಮಾಡಿದಾಗ ನೀವು ಪ್ರತೀ ತಿಂಗಳು ಇಎಂಐ ರೂಪದಲ್ಲಿ ಸುಮಾರು 18,327 ರೂಪಾಯಿಗಳಷ್ಟು ಹಣವನ್ನು ಪಾವತಿಸಬೇಕಾಗುತ್ತದೆ.

ಇನ್ನು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರೆನ್ಸ್ ಬಗ್ಗೆ ನೋಡುವುದಾದರೆ, ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

Kia Carens MPV Down payment EMI And More Details

ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡುತ್ತಿದೆ.

ಕಿಯಾ ಕಾರೆನ್ಸ್ ಕಾರು ಮಾದರಿಯು ಒಟ್ಟು ಐದು ವೆರಿಯೆಂಟ್ ಮತ್ತು ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಂಡಿತ್ತು. ಹೊಸ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿಯಾಗಿದ್ದು ಕಾರೆನ್ಸ್ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಪೈಪೋಟಿಯಾಗಿ ನಿರ್ಮಾಣಗೊಂಡಿದ್ದು, ಹೊಸ ಕಾರು 4,540 ಎಂಎಂ ಉದ್ದ, 1,800 ಎಂಎಂ ಅಗಲ, 1,708 ಎತ್ತರ ಮತ್ತು 2,780 ಎಂಎಂ ವ್ಹೀಲ್ ಬೆಸ್ ಹೊಂದಿದೆ.

ಮಾಹಿತಿಗಳ ಪ್ರಕಾರ ಕಿಯಾ ತನ್ನ ಕಾರೆನ್ಸ್ ಕಾರು ಮಾದರಿಗೆ ಹೊಸ ಆವೃತ್ತಿಯೊಂದನ್ನು ಸೇರಿಸಲಿದೆ ಎಂದು ತಿಳಿದು ಬಂದಿದೆ. ಸ್ವಲ್ಪ ದಿನದಲ್ಲೇ ಕಿಯಾ, ಕಾರೆನ್ಸ್‌ ಕಾರಿಗೆ ಹೊಸ ಡೀಸೆಲ್‌ ಮ್ಯಾನುವಲ್‌ ಆವೃತ್ತಿಯನ್ನು ಸೇರಿಸುತ್ತಿದ್ದು, ಲಾಂಚ್ ಆಗುವುದಕ್ಕೂ ಮೊದಲು ಇದರ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 27, 2024, 16:27 [IST]
English summary
Kia carens mpv down payment emi and more details
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+