ಕಿಯಾ ಕಾರೆನ್ಸ್ ಫೇಸ್‌ಲಿಪ್ಟ್ ಬಗ್ಗೆ ಮಹತ್ವದ ಮಾಹಿತಿ ಬಹಿರಂಗ: ಇನ್ನೋವಾಗೆ ಬದಲಿಯಾಗುತ್ತಾ ಈ ಕಾರು!
ಭಾರತದಲ್ಲಿ ಇತ್ತೀಚೆಗೆ ಇನ್ನೋವಾ ಸಾಲಿಗೆ ಸೇರುತ್ತಿರುವ ಎಂಪಿವಿ ವಾಹನಗಳಲ್ಲಿ ಕಿಯಾ ಕಂಪನಿಯ ಕಾರೆನ್ಸ್ ಪ್ರಮುಖವಾದುದು. ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾರಾಟವಾಗುತ್ತಿರುವ ಈ ಕಾರಿನ ಫೇಸ್‌ಲಿಫ್ಟ್ ಆವೃತ್ತಿಯನ್ನು ಕಂಪನಿ ಅಭೀವೃದ್ದಿ ಪಡಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿನ ವಿಡಿಯೋಗಳು ಮತ್ತು ಪೋಟೋಗಳು ಹರಿದಾಡುತ್ತಿದ್ದವು. ಆದರೆ ಇದೀಗ ಮೊದಲ ಬಾರಿಗೆ ಈ ಕಾರಿನ ಟೆಸ್ಟ್ ಮ್ಯೂಲ್ ಅಥವಾ ಕ್ಯಾಮೋ ಫ್ಲಾಗ್‌ನಿಂದ ಆವರಿತವಾದ ವಾಹನ ರಸ್ತೆಯಲ್ಲಿ ಪರೀಕ್ಷಾರ್ಥ ಚಾಲನೆ ನಡೆಸುತ್ತಿರುವುದು ಕಂಡು ಬಂದಿದೆ ಎಂಬುದನ್ನು ನಿಮಗೆ ತಿಳಿಸಲು ಇಚ್ಚಿಸುತ್ತಿದ್ದೇವೆ.
ಹೌದು, ಇತ್ತೀಚೆಗೆ ಸಿಕ್ಕ ವರದಿಯ ಪ್ರಕಾರ ಕಿಯಾ ಕಾರೆನ್ಸ್ (Kia Carens MPV) ಫೇಸ್‌ಲಿಫ್ಟ್ ಮಾದರಿಯು ಭಾರತೀಯ ರಸ್ತೆಗಳಲ್ಲಿ ಪರೀಕ್ಷಾರ್ಥ ಓಡಾಟ ನಡೆಸುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ. ಈ ಚಿತ್ರಗಳಲ್ಲಿ ಕಾರು ಕ್ಯಾಮೋಫ್ಲಾಗ್‌ನಿಂದ ಆವೃತ್ತವಾಗಿದ್ದರೂ ಹೊರಭಾಗದ ವಿನ್ಯಾಸಗಳು ಸೋರಿಕೆಯಾಗಿದೆ. ಹೊಸ ಫೇಸ್‌ಲಿಫ್ಟ್ ಕಾರೆನ್ಸ್‌ನ ಹೊರಭಾಗದಲ್ಲಿ ಕಂಡು ಬರಲಿರುವ ಬಹುದೊಡ್ಡ ಬದಲಾವಣೆ ಎಂದರೆ ಇದರ ಹಿಂಭಾಗ.

ಹೊಸ ಕಿಯಾ ಕಾರೆನ್ಸ್‌ನ ಹಿಂಭಾಗದ ಟೇಲ್ ಲೈಟ್ ಸಿ ಆಕಾರದಲ್ಲಿ ಇರಲಿದೆ ಎಂಬುದು ಚಿತ್ರಗಳಿಂದ ಊಹಿಸಬಹುದಾಗಿದೆ. ಇದು ಇತ್ತೀಚೆಗೆ ಬರುತ್ತಿರುವ ಹೊಸ ಕಿಯಾ ಕಾರುಗಳಲ್ಲಿ ಸಿಗ್ನೇಚರ್ ಡಿಸೈನ್ ಎಂಬ ರೀತಿಯಲ್ಲಾಗಿದ್ದು, ಕಾರೆನ್ಸ್ ಫೇಸ್‌ಲಿಫ್ಟ್‌ನಲ್ಲಿಯೂ ಸಹ ಇದನ್ನೇ ನಿರೀಕ್ಷಿಸಲಾಗಿದೆ. ಇನ್ನು ಇದರ ಜೊತೆಗೆ ಕನೆಕ್ಟೆಡ್ ಟೇಲ್ ಲೈಟ್ ಸಹ ಈ ಕಾರಿನಲ್ಲಿ ಇರಲಿದೆ. ಇದನ್ನು ಕಿಯಾ ಸ್ಟಾರ್ ಮ್ಯಾಪ್ ಎಲ್‌ಇಡಿ ಹೆಡ್‌ಲೈಟ್ ಎನ್ನಲಾಗುತ್ತಿದೆ.
ಮಾಹಿತಿಗಳ ಪ್ರಕಾರ ಕಿಯಾ ತನ್ನ ಹೊಸ ಕಾರೆನ್ಸ್‌ಗೂ ಸೆಲ್ಟೋಸ್ ಮತ್ತು ಸಾನೆಟ್ ಫೇಸ್‌ಲಿಫ್ಟ್‌ಗಳಲ್ಲಿ ತಂದ ಡಿಸೈನ್ ಮಾದರಿಯನ್ನೇ ಇದರಲ್ಲೂ ಅವಲಂಬಿಸಲಿದೆ ಎನ್ನಲಾಗುತ್ತಿದೆ. ಏನೇ ಆದರೂ ಹೊಸ ಕಾರೆನ್ಸ್‌ನಲ್ಲಿ ಈಗಿರುವ ಕಾರೆನ್ಸ್‌ಗಿಂತ ಹೆಚ್ಚಿನ ಫೀಚರ್‌ಗಳು ಮತ್ತು ಡಿಸೈನ್ ಇರಲಿದ್ದು ಇದರಿಂದ ಈ ಕಾರಿನ ಅನುಭವವೂ ಸಹ ಉತ್ತಮ ದರ್ಜೆಯದ್ದಾಗಿರುತ್ತದೆ ಎಂಬುದು ವಿಶೇಷವಾಗಿ ಹೇಳಬೇಕಾಗಿಲ್ಲ.

ಇನ್ನು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರೆನ್ಸ್ ಬಗ್ಗೆ ನೋಡುವುದಾದರೆ, ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.
ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡುತ್ತಿದೆ.

ಕಿಯಾ ಕಾರೆನ್ಸ್ ಕಾರು ಮಾದರಿಯು ಒಟ್ಟು ಐದು ವೆರಿಯೆಂಟ್ ಮತ್ತು ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಂಡಿತ್ತು. ಹೊಸ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿಯಾಗಿದ್ದು ಕಾರೆನ್ಸ್ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಪೈಪೋಟಿಯಾಗಿ ನಿರ್ಮಾಣಗೊಂಡಿದ್ದು, ಹೊಸ ಕಾರು 4,540 ಎಂಎಂ ಉದ್ದ, 1,800 ಎಂಎಂ ಅಗಲ, 1,708 ಎತ್ತರ ಮತ್ತು 2,780 ಎಂಎಂ ವ್ಹೀಲ್ ಬೆಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








