Kia Carens: ಭಾರತದಲ್ಲಿ ಹೊಸ ದಾಖಲೆ ನಿರ್ಮಿಸಿದ ಕಿಯಾ ಫ್ಯಾಮಿಲಿ ಕಾರು
ಕಿಯಾ ಕಂಪನಿಯ ಪ್ರಮುಖ ವಾಹನವಾದ ಕ್ಯಾರೆನ್ಸ್ (Kia Carens), ಫೆಬ್ರವರಿ 2022 ರಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ದೇಶೀಯವಾಗಿ 1.5 ಲಕ್ಷ ಕಾರುಗಳು ಮಾರಾಟವಾಗುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ವಾಹನವು ತನ್ನ ನಯವಾದ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ ಫ್ಯಾಮಿಲಿ ಕಾರು ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಶೇ 50 ರಷ್ಟು ಗ್ರಾಹಕರು ಈ ಜನಪ್ರಿಯ ಫ್ಯಾಮಿಲಿ ಕಾರಿನ ಟಾಪ್ ಮತ್ತು ಮಿಡ್ ಟ್ರಿಮ್‌ಗಳನ್ನು ಬಯಸುತ್ತಿದ್ದು, ಇವು ಸನ್‌ರೂಫ್, ಮಲ್ಟಿ ಡ್ರೈವ್ ಮೋಡ್‌ಗಳು, ವೆಂಟಿಲೇಟೆಡ್ ಸೀಟ್‌ಗಳು ಮತ್ತು ಕಿಯಾ ಕನೆಕ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ.
ವಿವಿಧ ಎಂಜಿನ್ ಆಯ್ಕೆಗಳಲ್ಲಿ, ಪೆಟ್ರೋಲ್ ಪವರ್‌ಟ್ರೇನ್ ಅಗ್ರ ಆಯ್ಕೆಯಾಗಿ ಹೊರಹೊಮ್ಮಿದ್ದು, ಇದು ಶೇ57 ರಷ್ಟು ಬೇಡಿಕೆಯನ್ನು ಹೊಂದಿದೆ. ನಂತರ ಡೀಸೆಲ್ ಪವರ್‌ಟ್ರೇನ್‌ಗೆ ಶೇ43 ರಷ್ಷು ಬೇಡಿಕೆಯಿದ್ದು, ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೆಚ್ಚು ಆದ್ಯತೆಯನ್ನು ಮುಂದುವರೆಸಿದೆ. ಶೇ62 ರಷ್ಟು ಗ್ರಾಹಕರು ಇದನ್ನು ಆರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಏಪ್ರಿಲ್ 2024 ರಲ್ಲಿ, ಕಂಪನಿಯು ಕ್ಯಾರೆನ್ಸ್‌ನ 6-ಸೀಟರ್ ವೇರಿಯೆಂಟ್ ಅನ್ನು ಮರು-ಪ್ರಾರಂಭಿಸಿತು, ಇದು ಕುಡ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಕ್ಯಾರೆನ್ಸ್ ಭಾರತೀಯ ಕುಟುಂಬಗಳಲ್ಲಿ ನೆಚ್ಚಿನದಾಗಿದೆ, ಈಗ ನಮ್ಮ ಮಾಸಿಕ ದೇಶೀಯ ಮಾರಾಟದ ಸರಿಸುಮಾರು 15% ರಷ್ಟಿದೆ. ಮುಂಬರುವ ವರ್ಷಗಳಲ್ಲಿ ಇದರ ಜನಪ್ರಿಯತೆ ಬೆಳೆಯುತ್ತದೆ ಎಂದು ನಮಗೆ ವಿಶ್ವಾಸವಿದೆ. ನಮ್ಮ ಗ್ರಾಹಕರಿಗೆ ನವೀನ ಮತ್ತು ಉತ್ತಮ ಗುಣಮಟ್ಟದ ವಾಹನಗಳನ್ನು ತರಲು ನಾವು ಬದ್ಧರಾಗಿದ್ದೇವೆ. ಅವರ ನಿರಂತರ ಬೆಂಬಲಕ್ಕಾಗಿ ಕೃತಜ್ಞರಾಗಿರುತ್ತೇವೆ ಎಂದು ಕಿಯಾ ಇಂಡಿಯಾದ ಮುಖ್ಯ ಮಾರಾಟ ಮತ್ತು ವ್ಯವಹಾರ ಅಧಿಕಾರಿ ಮ್ಯುಂಗ್-ಸಿಕ್ ಸೋಹ್ನ್ ಹೇಳಿದರು.
ಕಿಯಾ ಕ್ಯಾರೆನ್ಸ್‌ನ (Kia Carens) ಯಶಸ್ಸು ದೇಶೀಯ ಮಾರುಕಟ್ಟೆಯನ್ನು ಮೀರಿ ವಿಸ್ತರಿಸಿದೆ, ಸುಮಾರು 17,000 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಇದು ಕಿಯಾದ ಜಾಗತಿಕ ಕಾರ್ಯಾಚರಣೆಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡಿದೆ. ಈ ವಾಹನವು ಕಂಪನಿಯ ಒಟ್ಟು ದೇಶೀಯ ಸಗಟು ಮಾರಾಟದಲ್ಲಿ ಶೇ15 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

ಅದರ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಕುಟುಂಬ ಸಾಗಣೆದಾರರಲ್ಲಿ ಒಂದಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಕಿಯಾ ಕ್ಯಾರೆನ್ಸ್ ಗ್ರಾಹಕರ ಹೃದಯ ಮತ್ತು ಮನಸ್ಸನ್ನು ಸೆರೆಹಿಡಿಯುವುದನ್ನು ಮುಂದುವರೆಸುತ್ತಿರುವುದರಿಂದ, ಕಿಯಾ ಇಂಡಿಯಾ ಅಸಾಧಾರಣ ಚಾಲನಾ ಅನುಭವಗಳನ್ನು ನೀಡಲು ಮತ್ತು ಆಟೋಮೋಟಿವ್ ಉತ್ಕೃಷ್ಟತೆಯನ್ನು ಮರುವ್ಯಾಖ್ಯಾನಿಸುವ ಪ್ರವರ್ತಕ ವಾಹನಗಳಿಗೆ ಸಮರ್ಪಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇಲ್ಲಿಯವರೆಗೆ, ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್, ಕಾರ್ನಿವಲ್, ಸೋನೆಟ್, ಕ್ಯಾರೆನ್ಸ್ ಮತ್ತು EV6 ಸೇರಿದಂತೆ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ಕಿಯಾ ಇಂಡಿಯಾ ತನ್ನ ಅನಂತಪುರದ ಸ್ಥಾವರದಿಂದ 9.6 ಲಕ್ಷಕ್ಕೂ ಹೆಚ್ಚು ದೇಶೀಯ ಮಾರಾಟ ಮತ್ತು 2.5 ಲಕ್ಷ ರಫ್ತು ಸೇರಿದಂತೆ 1.2 ಮಿಲಿಯನ್ ವಾಹನ ರವಾನೆಗಳನ್ನು ಪೂರ್ಣಗೊಳಿಸಿದೆ.

ಭಾರತೀಯ ರಸ್ತೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಸಂಪರ್ಕಿತ ಕಾರುಗಳೊಂದಿಗೆ, ಇದು ದೇಶದ ಸಂಪರ್ಕಿತ ಕಾರ್ ಲೀಡರ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ಬ್ರ್ಯಾಂಡ್ 236 ನಗರಗಳಲ್ಲಿ 522 ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಅನ್ನು ಹೊಂದಿದೆ. ದೇಶಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ಬಲಪಡಿಸುವತ್ತ ಗಮನಹರಿಸಿದೆ ಎಂದು ಕಿಯಾ ಇಂಡಿಯಾ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








