Kia: ಇತ್ತೀಚೆಗಷ್ಟೆ ಬಿಡುಗಡೆ: ಗ್ರಾಹಕರಿಗೆ 400 ಕಾರುಗಳ ಡೆಲಿವರಿ ಕೊಟ್ಟು ಅಚ್ಚರಿಗೊಳಿಸಿದ ಕಿಯಾ!

ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ (Kia), ತನ್ನ ಹೊಸ ಕಾರ್ನಿವಲ್ ಲಿಮೋಸಿನ್ ವಾಹನ ವಿತರಣೆ ಪ್ರಾರಂಭವಾಗಿದ್ದು, ಕೇವಲ ಎರಡು ತಿಂಗಳೊಳಗೆ ಬರೋಬ್ಬರಿ 400 ಯುನಿಟ್‌ ಕಾರುಗಳನ್ನು ಯಶಸ್ವಿಯಾಗಿ ಡೆಲಿವರಿ ನೀಡಿದೆ. ಸದ್ಯ ಕಾರ್ನಿವಲ್ ಲಿಮೋಸಿನ್ 3,350 ಬುಕಿಂಗ್‌ಗಳನ್ನು ಗಳಿಸಿದ್ದು, ಪ್ರಸ್ತುತ ಆರು ತಿಂಗಳಿಗಿಂತ ಹೆಚ್ಚು ಕಾಯುವ ಅವಧಿಯನ್ನು ಹೊಂದಿದೆ. ಈ ಮಟ್ಟದ ಆರ್ಡರ್‌ಗಳು ಕಾರಿಗೆ ಇರುವ ಬಲವಾದ ಬೇಡಿಕೆ ಹಾಗೂ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ಹಾಗೆಯೇ ಈ ಐಷಾರಾಮಿ ವಾಹನದ ಹೆಚ್ಚುತ್ತಿರುವ ಆಕರ್ಷಣೆಯನ್ನು ಒತ್ತಿಹೇಳುತ್ತದೆ ಎಂದು ಕಿಯಾ ಇಂಡಿಯಾ ಹೇಳಿಕೊಂಡಿದೆ.

ಭಾರತದಲ್ಲಿ ಹೊಸ ಕಿಯಾ ಕಾರ್ನಿವಲ್ (Kia Carnival) ಲಿಮೊಸಿನ್ ಬೆಲೆಯು ಎಕ್ಸ್‌ ಶೋರೂಂ ದರದಂತೆ ರೂ. 63.9 ಲಕ್ಷ ಬೆಲೆಯಿದೆ. ಕೇವಲ ಒಂದೇ ಟ್ರಿಮ್‌ನಲ್ಲಿ ಈ ಕಾರನ್ನು ನೀಡಲಾಗುತ್ತಿದ್ದು, ಲಿಮೋಸಿನ್ ಹಾಗೂ ಲಿಮೋಸಿನ್ ಪ್ಲಸ್ ಎಂಬ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಗ್ಲೇಸಿಯರ್ ವೈಟ್ ಪರ್ಲ್ ಮತ್ತು ಫ್ಯೂಷನ್ ಬ್ಲ್ಯಾಕ್ ಎಂಬ 2 ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ.

kia-carnival-limousine-surpasses-400-deliveries-milestone-within-two-months

ಈ ಕಿಯಾ ಕಾರ್ನಿವಲ್ ಕಾರಿನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇಗಾಗಿ ಡುಯಲ್ ಸ್ಕ್ರೀನ್, ಡುಯಲ್ ಸಿಂಗಲ್-ಪೇನ್ ಸನ್‌ರೂಫ್, 12-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 3-ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 7-ಆಸನ (2+2+3) ವ್ಯವಸ್ಥೆಯನ್ನು ಹೊಂದಿದೆ.

ಸುರಕ್ಷತೆಗಾಗಿ 8 - ಏರ್‌ಬ್ಯಾಗ್, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ 360-ಡಿಗ್ರಿ ಕ್ಯಾಮೆರಾಯಂತಹ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ.

kia-carnival-limousine-surpasses-400-deliveries-milestone-within-two-months

ಇಕೋ, ನಾರ್ಮಲ್, ಸ್ಪೋರ್ಟ್ಸ್ ಹಾಗೂ ಸ್ಮಾರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವ ಹೊಸ ಕಿಯಾ ಕಾರ್ನಿವಲ್ ಎಂಪಿವಿ, 2.2 - ಲೀಟರ್ ಡೀಸೆಲ್ ಎಂಜಿನ್‌‌ನ್ನು ಹೊಂದಿದೆ. 197 ಬಿಹೆಚ್‌ಪಿ ಪವರ್ ಮತ್ತು 440 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಕಿಯಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, "ವಿತರಣೆ ಪ್ರಾರಂಭವಾದ 2 ತಿಂಗಳೊಳಗೆ ನಮ್ಮ ಗ್ರಾಹಕರಿಗೆ 400 Kia ಕಾರ್ನಿವಲ್ ಲಿಮೋಸಿನ್‌ಗಳನ್ನು ತಲುಪಿಸುವ ಮೈಲಿಗಲ್ಲನ್ನು ನಾವು ಸಾಧಿಸಿದ್ದೇವೆ. ಈ ಮೈಲಿಗಲ್ಲು Kia ಬ್ರ್ಯಾಂಡ್‌ನಲ್ಲಿ ನಮ್ಮ ಗ್ರಾಹಕರ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ. ಕಾರಿನ ಸಾಟಿಯಿಲ್ಲದ ಐಷಾರಾಮಿ, ಸುಧಾರಿತ ತಂತ್ರಜ್ಞಾನ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಮನಗೆದ್ದಿದೆ ಎಂದರು.

ಭಾರತೀಯ ಮಾರುಕಟ್ಟೆಯಲ್ಲಿ ಟ್ರೇಲ್‌ಬ್ಲೇಜರ್ ಆಗಿ, ಕಾರ್ನಿವಲ್ ಲಿಮೋಸಿನ್ ಅಸಾಧಾರಣ ಅನುಭವಗಳನ್ನು ನೀಡಲು, ಮಿತಿಗಳನ್ನು ಮೀರಿಸಲು ಮತ್ತು ಭವಿಷ್ಯವನ್ನು ಮರುರೂಪಿಸಲು ನಮ್ಮ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ. Kia ಡಿಸೆಂಬರ್ 19 ರಂದು Kia Syros ಅನ್ನು ಅನಾವರಣಗೊಳಿಸುವ ಮೂಲಕ ಭಾರತದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 12, 2024, 14:58 [IST]
English summary
Kia carnival limousine surpasses 400 deliveries milestone within two months
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+