Kia: ಶೋರೂಂಗಳಲ್ಲಿ ಹೊಸ ಕಿಯಾ ಕಾರ್ನಿವಲ್ ಕಾರಿನ ಬುಕ್ಕಿಂಗ್ ಶುರು.. 2 ಕುಟುಂಬ ಓಡಾಡಬಹುದು!
ದಕ್ಷಿಣ ಕೊರಿಯಾ ಮೂಲದ ಕಿಯಾ (Kia) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ನವೀನ ಶೈಲಿಯ ವಿನ್ಯಾಸ (Design) ಹಾಗೂ ವೈಶಿಷ್ಟ್ಯಗಳನ್ನು (Features) ಪಡೆದುಕೊಂಡಿರುವ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. 2019ರ ಆಗಸ್ಟ್‌ನಲ್ಲಿ ಮಧ್ಯಮ ಗಾತ್ರದ (ಮಿಡ್-ಸೈಜ್) ಎಸ್‌ಯುವಿ 'ಸೆಲ್ಟೋಸ್'ನ್ನು ಮಾರಾಟಕ್ಕೆ ತರುವ ಮೂಲಕ ಕಂಪನಿಯು ದೇಶೀಯ ಕಾರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತ್ತು. ಸದ್ಯ ಹೊಸ ತಲೆಮಾರಿನ ಕಾರ್ನಿವಲ್ (New Generation Carnival) ಎಂಪಿವಿಯನ್ನು ಪರಿಚಯಿಸಲು ತೆರೆಮರೆಯಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ನೂತನ ಕಿಯಾ ಕಾರ್ನಿವಲ್ (Kia Carnival) ಎಂಪಿವಿ ಅಕ್ಟೋಬರ್ 3ರಂದು ಮಾರಾಟಕ್ಕೆ ಬರಲಿದೆ. ಅಧಿಕೃತವಾಗಿ ಬುಕ್ಕಿಂಗ್ ಶುರುವಾಗದಿದ್ದರೂ ದೇಶಾದ್ಯಂತ ಹಲವು ಡೀಲರ್‌ಶಿಪ್‌ಗಳು ಈ ಕಾರಿಗಾಗಿ ಬುಕ್ಕಿಂಗ್ ಪಡೆಯುವುದನ್ನು ಪ್ರಾರಂಭಿಸಿವೆ. ಆಸಕ್ತ ಗ್ರಾಹಕರು, ರೂ.1 ಲಕ್ಷ ಟೋಕನ್ ಮೊತ್ತವನ್ನು ಪಾವತಿಸುವ ಕಾಯ್ದಿರಿಸಬಹುದು ಎಂದು ತಿಳಿದುಬಂದಿದೆ.

ಈ ಕಿಯಾ ಕಾರ್ನಿವಲ್ ಎಂಪಿವಿ, 7 ಅಥವಾ 9 ಆಸನಗಳ ಆಯ್ಕೆ ವ್ಯವಸ್ಥೆಯನ್ನು ಹೊಂದಿರುವ ಸಾಧ್ಯತೆ ಇರುವುದರಿಂದ ರೂ.45 ಲಕ್ಷದಿಂದ ರೂ.50 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ತಿಳಿದುಬಂದಿದೆ. ಜೊತೆಗೆ ಕಿಯಾ ಆಂಧ್ರಪ್ರದೇಶದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಆದರೂ ಕಾರ್ನಿವಲ್ ಎಂಪಿವಿಯನ್ನು ವಿದೇಶದಿಂದ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಮುಂಬರಲಿರುವ ಹೊಚ್ಚ ಹೊಸ ಕಿಯಾ ಕಾರ್ನಿವಲ್ ಎಂಪಿವಿಯೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾದರಿಯಂತೆಯೇ 3.5-ಲೀಟರ್ ವಿ6 ಪೆಟ್ರೋಲ್ ಮತ್ತು 1.6-ಲೀಟರ್ ಪೆಟ್ರೋಲ್ (ಹೈಬ್ರಿಡ್) ಎಂಜಿನ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದರೊಟ್ಟಿಗೆ 191 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 441 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಹೊಂದಿರಬಹುದು ಎನ್ನಲಾಗಿದೆ.

ಈ ಕಾರು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ 12.3-ಇಂಚಿನ ಡಿಸ್ಪ್ಲೇಗಳು, ಮಲ್ಟಿ-ಜೋನ್ ಕ್ಲೇಮೇಟ್ ಕಂಟ್ರೋಲ್, ಪನೊರೊಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ಪ್ಲೇ, 3-ಜೋನ್ ಆಟೋ ಎಸಿ ಹಾಗೂ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿರುವ ಸಾಧ್ಯತೆಯಿದೆ.
ನೂತನ ಕಿಯಾ ಕಾರ್ನಿವಲ್ ಎಂಪಿವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲಿದೆ. ಸುರಕ್ಷತೆ ಸಲುವಾಗಿ 8 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಪಾರ್ಕಿಂಗ್ ಸೇನಾರ್ಸ್ ಮತ್ತು 360 - ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಈ ಕಾರಿಗೆ ಟೊಯೋಟಾ ಇನ್ನೋವಾ ಹೈಕ್ರಾಸ್ (Toyota Innova Hycross), ಟೊಯೊಟಾ ವೆಲ್‌ಫೈರ್ (Toyota Vellfire) ಹಾಗೂ ಲೆಕ್ಸಸ್ ಎಲ್ಎಂ (Lexus LM) ಮಾದರಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ. ಮುಂದಿನ ತಿಂಗಳು ಹೊಸ ಕಿಯಾ ಕಾರ್ನಿವಲ್ ಎಂಪಿವಿ ಮಾರಾಟಕ್ಕೆ ಬರಲಿದ್ದು, ಆ ಬಳಿಕ ಬೆಲೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾದ ವಿವರಗಳು ಗೊತ್ತಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








