ಭಾರೀ ಜನಪ್ರಿಯತೆ ಪಡೆದು ಮಾರಾಟವಾಗಿದ್ದ ಕಾರನ್ನು ಕೊನೆಗೂ ಮಾಲೀಕರಿಂದ ಹಿಂಪಡೆದ ಕಿಯಾ... ಯಾಕೆ?

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ಎಲೆಕ್ಟ್ರಿಕ್ ಕ್ರಾಸ್‌ಒವರ್ EV6 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಇದೀಗ ಕಿಯಾ ಇಂಡಿಯಾ ತನ್ನ ಕಿಯಾ EV6 (Kia EV6) ಅನ್ನು ತಾಂತ್ರಿಕ ದೋಷ ಕಂಡು ಬಂದ ಕಾರಣ ಹಿಂಪಡೆದಿದೆ. ಈ ಕಾರು ಹಿಂಪಡೆಯುವ ಭಾಗವಾಗಿ ಕಾರುಗಳ ಗ್ರಾಹಕರನ್ನು ವಾಹನ ತಯಾರಕರು ತಲುಪುತ್ತಾರೆ. ಪರ್ಯಾಯವಾಗಿ, ಗ್ರಾಹಕರು ತಮ್ಮ ಸಂಬಂಧಿತ ಡೀಲರ್‌ಗಳೊಂದಿಗೆ ಸಂಪರ್ಕದಲ್ಲಿರಬಹುದು. ಈ ಎಲೆಕ್ಟ್ರಿಕ್ ಕಾರಿನ ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ನಲ್ಲಿನ ಸಂಭಾವ್ಯ ದೋಷವನ್ನು ಸರಿಪಡಿಸಲು ಹಿಂಪಡೆಯಲಾಗುತ್ತಿದೆ.

ಕಿಯಾ ಕಂಪನಿಯ ಪ್ರಕಾರ, 2022ರ ಮಾರ್ಚ್ 3 ಮತ್ತು 2023ರ ಏಪ್ರಿಲ್ ತಿಂಗಳ 14ರ ನಡುವೆ ತಯಾರಿಸಲಾದ ಕಿಯಾ EV6 ಎಲೆಕ್ಟ್ರಿಕ್ ಕಾರಿನ 1,138 ಯೂನಿಟ್‌ಗಳ ರಿಕಾಲ್ ಮಾಡಲಾಗುತ್ತಿದೆ. ಈ ಕಿಯಾ ಎಲೆಕ್ಟ್ರಿಕ್ ಕ್ರಾಸ್ಒವರ್ ಒಂದೇ 77.4kWh ಬ್ಯಾಟರಿ ಪ್ಯಾಕ್ ಮತ್ತು ಸಿಂಗಲ್ ಮೋಟಾರ್, RWD ಮತ್ತು ಡ್ಯುಯಲ್ ಮೋಟಾರ್, AWD ಸೆಟಪ್‌ಗಳೊಂದಿಗೆ ಬರುತ್ತದೆ. ಈ ಕ್ರಾಸ್ಒವರ್ RWD ರೂಪಾಂತರವು 229 bhp ಮತ್ತು 350 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Kia EV6

ಇನ್ನು AWD ರೂಪಾಂತರವು 325 bhp ಮತ್ತು 605 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು AWD ಆವೃತ್ತಿಯು ಕೇವಲ 5.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಆವೃತ್ತಿಯು 528 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದರ ಬ್ಯಾಟರಿಯನ್ನು ಫಾಸ್ಟ್ 350kW DC ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ ಮಾಡಬಹುದು.

ಹೋಮ್ ಚಾರ್ಜಿಂಗ್‌ಗಾಗಿ, ಖರೀದಿದಾರರು 22kW ವಾಲ್ ಬಾಕ್ಸ್ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಹ್ಯುಂಡೈ Ioniq 5 ನಂತೆಯೇ, ಕಿಯಾ EV6 ಬ್ರ್ಯಾಂಡ್‌ನ E-GMP ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ. ಇದರ ಜಿಟಿ-ಲೈನ್ ರೂಪಾಂತರವು ಇತ್ತೀಚಿನ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ವರ್ಚುವಲ್ ರಿಯಾಲಿಟಿ HUD ಮತ್ತು ಸರೌಂಡ್ ವ್ಯೂ ಕ್ಯಾಮೆರಾವನ್ನು ಹೊಂದಿದೆ.

Kia EV6

ಇದರೊಂದಿಗೆ 60+ ಕನೆಕ್ಟಿವಿಟಿ ಕಾರ್ ಫೀಚರ್ಸ್, ಏರ್‌ಬ್ಯಾಗ್‌ಗಳು, ADAS ಮತ್ತು ಚಾಲಿತ ಟೈಲ್‌ಗೇಟ್ ಹೊಂದಿದೆ. ಇನ್ನು ಕಿಯಾ EV6 ಎಲೆಕ್ಟ್ರಿಕ್ ಕಾರು ಮೂನ್ಸ್ಕೇಪ್, ಯಾಚ್ಟ್ ಬ್ಲೂ, ಸ್ನೋ ವೈಟ್ ಪರ್ಲ್, ಅರೋರಾ ಬ್ಲ್ಯಾಕ್ ಪರ್ಲ್ ಮತ್ತು ರನ್ವೇ ರೆಡ್.ಎಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ಲಬ್ಯವಿದೆ. ಈ ಎಲೆಕ್ಟ್ರಿಕ್ ಕಾರು 4690 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1550 ಎಂಎಂ ಎತ್ತರದೊಂದಿಗೆ ಅತ್ಯುತ್ತಮ ಕ್ಯಾಬಿನ್ ಸ್ಥಳವಾಕಾಶ ಹೊಂದಿದೆ.

ಕಿಯಾ ತನ್ನ ಹೊಸ ಕಿಯಾ EV5 ಎಲೆಕ್ಟ್ರಿಕ್ ಕಾರನ್ನು ಇತರ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದಾರೆ. ಇದು ಕಿಯಾ ಸ್ಪೋರ್ಟೇಜ್‌ಗೆ ಎಲೆಕ್ಟ್ರಿಕ್ ಮಾದರಿಯು ಪರ್ಯಾಯವಾಗಿ ಬರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿ ಇತರ ಮಾರುಕಟ್ಟೆಗಳಿಗೆ ಪರಿಚಯಿಸುವ ಮೊದಲು ಈ ವರ್ಷದ ನಂತರ ಚೀನಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕಿಯಾ EV5 ಎಲೆಕ್ಟ್ರಿಕ್ ಕಾರು ಅದೇ ಇ-ಸಿಎಮ್‌ಪಿ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಇದು ಕಿಯಾ ಇವಿ6 ಎಲೆಕ್ಟ್ರಿಕ್ ಮಾದರಿಗೂ ಆಧಾರವಾಗಿದೆ.

ಕಿಯಾ ಭಾರತಕ್ಕೆ EV5 ಅನ್ನು ತರಬಹುದು. ಆದರೆ ಈ ಕಿಯಾ EV5 ಎಲೆಕ್ಟಕ್ ಕಾರು 2025ರ ನಂತರ ಬಿಡುಗಡೆಯಾಗಬಹುದು. ಈ ಹೊಸ ಕಿಯಾ EV5 ಎಲೆಕ್ಟ್ರಿಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಿಯಾ EV5 ಮಾದರಿಯು ಅದರ ಹಿರಿಯಣ್ಣ EV9 ನಿಂದ ಹೆಚ್ಚು ಪ್ರಭಾವಿತವಾಗಿದೆ. ಕಿಯಾ EV5 ಎಲೆಕ್ಟ್ರಿಕ್ ಕಾರು 4,615 mm ಉದ್ದವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರು 2,750 mm ವೀಲ್‌ಬೇಸ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 16, 2024, 19:19 [IST]
English summary
Kia ev6 recalled in india 1138 units details
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+