ಲಕ್ಷುರಿ ಫೀಚರ್ಸ್, 561 Km ರೇಂಜ್‌ನ ಹೊಸ ಕಿಯಾ EV9 ಎಲೆಕ್ಟ್ರಿಕ್ ಕಾರು ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ ತನ್ನ ಎರಡನೇ ಎಲೆಕ್ಟ್ರಿಕ್ ವಾಹನವಾದ EV9 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಈಗ ಬ್ರ್ಯಾಂಡ್‌ನ ಪ್ರಮುಖ ವಾಹನವಾಗಿದೆ. ಈ ಕಿಯಾ EV9 ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ. 1.29 ಕೋಟಿಯಾಗಿದೆ. ಈ ಕಿಯಾ EV9 ಮಾದರಿಯನ್ನು ಕೇವಲ ಒಂದು ರೂಪಾಂತರದಲ್ಲಿ GT ಲೈನ್ ಮಾತ್ರ ಲಭ್ಯವಿರುತ್ತದೆ. ಹೊಸ ಕಿಯಾ EV9 ಮಾದರಿಯು E-GMP ಪ್ಲಾಟ್‌ಫಾರ್ಮ್ ಆಧಾರಿತವಾಗಿದ್ದು, ಇದು ಕಿಯಾ ಕಂಪನಿಯ ಪ್ರಮುಖ ಮೂರು-ಸಾಲು ಸಂಪೂರ್ಣ ಎಲೆಕ್ಟ್ರಿಕ್ ಎಸ್‍ಯುವಿ ಆಗಿದೆ.
ಕಿಯಾ EV9 (Kia EV9) ಎಲೆಕ್ಟ್ರಿಕ್ ಕಾರಿನ GT-ಲೈನ್ ಲಾಂಗ್-ರೇಂಜ್ ರೂಪಾಂತರವಾಗಿದ್ದು, ಇದು 99.8kWh ಬ್ಯಾಟರಿಯೊಂದಿಗೆ 561 ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 379 bhp ಮತ್ತು 700 Nm ಟಾರ್ಕ್‌ನ ಸಂಯೋಜಿತ ಉತ್ಪಾದನೆಯೊಂದಿಗೆ ಡ್ಯುಯಲ್-ಮೋಟರ್ ಸೆಟಪ್‌ನೊಂದಿಗೆ ಬರುತ್ತದೆ. ಇದು ಕೇವಲ 24 ನಿಮಿಷಗಳಲ್ಲಿ 0-80 ಪ್ರತಿಶತದಿಂದ 350kWh DC ಚಾರ್ಜರ್ ಮೂಲಕ ಫಾಸ್ಟ್ ಚಾರ್ಜ್ ಮಾಡಬಹುದು.

ಈ ಕಿಯಾ EV9 ಎಲೆಕ್ಟ್ರಿಕ್ ಕಾರು 5.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಹೊಸ ಕಿಯಾ EV9 ಎಲೆಕ್ಟ್ರಿಕ್ ಕಾರು 561 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಹೊಸ ಕಿಯಾ EV9 ಎಲೆಕ್ಟ್ರಿಕ್ ಕಾರು ಬ್ಲಾಂಕ್ಡ್-ಆಫ್ ಗ್ರಿಲ್ ಮತ್ತು ಇಂಟಿಗ್ರೇಟೆಡ್ LED DRL ಗಳೊಂದಿಗೆ ಲಂಬವಾದ LED ಹೆಡ್‌ಲೈಟ್‌ಗಳೊಂದಿಗೆ ಅಗ್ರೇಸಿವ್ ಆಗಿ ಕಾಣುವ ಫಾಸಿಕವನ್ನು ಹೊಂದಿದೆ.
ಈ ಎಸ್‍ಯುವಿಯು ಎಲ್‌ಇಡಿ ಟೈಲ್ ಲೈಟ್‌ಗಳ ವಿನ್ಯಾಸವು ಹೋಲುತ್ತದೆ ಮತ್ತು ಎಸ್‌ಯುವಿ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳು ಮತ್ತು ಸ್ಟೇಜ್‌ನಲ್ಲಿ ಕಾರಿನ ಮೇಲೆ ಕಂಡುಬರುವಂತೆ 20-ಇಂಚಿನ ವ್ಹೀಲ್ ಗಳನ್ನು ಒಳಗೊಂಡಿದೆ. ಕಿಯಾ EV9 ಎಲೆಕ್ಟ್ರಿಕ್ ಕಾರು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 20 ರಿಂದ 22 ಇಂಚುಗಳವರೆಗಿನ ವ್ಹೀಲ್ ಗಳನ್ನು ಒಳಗೊಂಡಿದೆ.

ಇದು ವಿವಿಧ ಚಾಲನಾ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಿದ್ಧವಾಗಿದೆ ಎಂದು ಖಚಿತಪಡಿಸುತ್ತದೆ. ಆಧುನಿಕ ಸೌಂದರ್ಯದೊಂದಿಗೆ ಆಫ್-ರೋಡ್ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ವಿಲೀನಗೊಳಿಸುತ್ತದೆ. ಈ ಹೊಸ ಕಿಯಾ EV9 ಎಲೆಕ್ಟ್ರಿಕ್ ಕಾರು ಮೂರು ಸಾಲುಗಳ ಸೀಟುಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ಒಳಭಾಗ ಡ್ಯಾಶ್‌ಬೋರ್ಡ್ ಕ್ಲೀನ್ ವಿನ್ಯಾಸವನ್ನು ಹೊಂದಿದೆ.
ಈ ಹೊಸ ಕಿಯಾ EV9 ಎಲೆಕ್ಟ್ರಿಕ್ ಕಾರಿನ ನಾಲ್ಕು-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ವಿಶಾಲ ಡಿಸ್ ಪ್ಲೇಯನ್ನು ಹೊಂದಿದೆ. ಇದಲ್ಲದೆ ಆಟೋನೊಮೊಸ್ ಡ್ರೈವಿಂಗ್-ಅಸಿಸ್ಟ್ ಫೀಚರ್ಸ್ ಗಳೊಂದಿಗೆ ADAS ಸೂಟ್ ಅನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಎಸ್‍ಯುವಿಯು ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ ಮತ್ತು ಅವೈಡನ್ಸ್ ಅಸಿಸ್ಟ್, ಲೇನ್ ಡಿಪರ್ಚರ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್ ಮತ್ತು ಇತ್ಯಾದಿ ಫೀಚರ್ಸ್ ಗಳನ್ನು ಹೊಂದಿವೆ. ಇದರೊಂದಿಗೆ ಕಿಯಾ EV9 ಎಲೆಕ್ಟ್ರಿಕ್ ಕಾರು 5,015mm ಉದ್ದ, 1,980mm ಅಗಲ, 1,780mm ಎತ್ತರ ಮತ್ತು 3,100mm ವ್ಹೀಲ್‌ಬೇಸ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








