ಭಾರತದಲ್ಲಿ ಕಿಯಾ ದೈತ್ಯ ಕಾರು ಬಿಡುಗಡೆಗೆ ಸಜ್ಜು... ಟೀಸರ್ ಬಿಡುಗಡೆ! ವಿಶೇಷತೆಗಳೇನು?
ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್, ಭಾರತದಲ್ಲಿ ಹೊಸ ಕಾರಿನ ಬಿಡುಗಡೆಗೆ ಸಜ್ಜಾಗಿದೆ. ಹೌದು, ಅಕ್ಟೋಬರ್ 3 ರಂದು ಹೊಸ ಕಿಯಾ ಇವಿ 9 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಕಂಪನಿ ಯೋಜಿಸಿದೆ. ಇವಿ 9 ಅನ್ನು ಸಿಬಿಯು (ಸಂಪೂರ್ಣವಾಗಿ ನಿರ್ಮಿಸಿದ ಘಟಕ) ಆಗಿ ಭಾರತಕ್ಕೆ ತರಲಾಗುವುದು. ಮೂಲಗಳ ಪ್ರಕಾರ ಭಾರತದಲ್ಲಿ ಇದು ಕಂಪನಿಯ ಪ್ರಮುಖ ಕೊಡುಗೆಯಾಗಲಿದೆ. ಇದು 1 ಕೋಟಿ ರೂ.ಗಿಂತ ಹೆಚ್ಚಿನ ಬೆಲೆಯನ್ನು (ಎಕ್ಸ್ ಶೋರೂಂ) ಹೊಂದುವ ನಿರೀಕ್ಷೆಯಿದೆ, ಅಂದರೆ ಭಾರತದಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.
ಕಿಯಾ ಮೋಟಾರ್ಸ್ ಈ ಹೊಸ ಇವಿ 9 ಎಲೆಕ್ಟ್ರಿಕ್ ಎಸ್‌ಯುವಿಯನ್ನು 2023 ರಲ್ಲಿ ಭಾರತದಲ್ಲಿ ನಡೆದ ಆಟೋ ಎಕ್ಸ್‌ಪೋನಲ್ಲಿ ಮೊದಲ ಬಾರಿಗೆ ಕಾನ್ಸೆಪ್ಟ್ ರೂಪದಲ್ಲಿ ಪ್ರದರ್ಶಿಸಿತ್ತು. ಕೆಲವು ತಿಂಗಳ ನಂತರ ಉತ್ಪಾದನಾ ರೂಪದಲ್ಲಿ ಜಾಗತಿಕವಾಗಿ ಬಹಿರಂಗಪಡಿಸಲಾಯಿತು. ಇದು 6 ಅಥವಾ 7-ಸೀಟರ್ ಸೆಟಪ್ ಅನ್ನು ಹೊಂದಿರಲಿದೆ.

ಕಿಯಾ ಇವಿ9 ವಿಶೇಷತೆಗಳು: ಕಿಯಾ ಇವಿ 9 ವಿದೇಶದಲ್ಲಿ 76.1 ಕಿಲೋವ್ಯಾಟ್ ಬ್ಯಾಟರಿ ಮತ್ತು ದೊಡ್ಡ 99.8 ಕಿಲೋವ್ಯಾಟ್ ಬ್ಯಾಟರಿ ಎಂಬ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ. ದೊಡ್ಡ 99.8 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಕಾರು ಡ್ಯುಯಲ್ ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 435-451 ಕಿ.ಮೀ ರೇಂಜ್ ನೀಡಲಿದೆ.
ಉಳಿದಂತೆ 76.1 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಕಾರು, ಸಿಂಗಲ್ ಮೋಟರ್‌ನೊಂದಿಗೆ ರಿಯರ್ ವೀಲ್ ಡ್ರೈವ್ ರೂಪಾಂತರಗಳು ಅಂದಾಜು 370 ರಿಂದ 489 ಕಿ.ಮೀ ರೇಂಜ್ ನೀಡಲಿವೆ. ಇದರ ಪವರ್‌ಫುಲ್ ಮೋಟಾರ್ 201 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ AWD ಆವೃತ್ತಿಯು 379 ಬಿಹೆಚ್‌ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಕಿಯಾ ಇವಿ-9 ಜಿಟಿ - ಲೈನ್ 100 ಕಿ.ಮೀ ವೇಗವನ್ನು ಕೇವಲ 5.3 ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. RWD ಮತ್ತು AWD ಆವೃತ್ತಿಗಳನ್ನು ಭಾರತಕ್ಕೆ ತರಲಾಗುತ್ತದೆಯೇ ಎಂಬುದರ ಬಗ್ಗೆ ಕಂಪನಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಉತ್ಪಾದನಾ ಸ್ಪೆಕ್ ಕಿಯಾ ಇವಿ-9 ಕಾರಿನ ಬ್ಯಾಟರಿ ಕುರಿತು ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಶೀಘ್ರದಲ್ಲೇ ಕಂಪನಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.
ಪ್ರತಿಸ್ಪರ್ಧಿಗಳು: ಕಿಯಾ ಇವಿ 9 ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವುದರಿಂದ ಬಿಎಂಡಬ್ಲ್ಯು ಐಎಕ್ಸ್ 1 ಮತ್ತು ಆಡಿ ಕ್ಯೂ 8 ಇ-ಟ್ರಾನ್, ಮರ್ಸಿಡಿಸ್ ಬೆಂಝ್ ಇಕ್ಯೂಇ ಎಸ್‌ಯುವಿಗೆ ಪೈಪೋಟಿ ನೀಡಲಿದೆ. ಇವಿ 9 ಜೊತೆಗೆ, ಕಿಯಾ ಮುಂದಿನ ತಲೆಮಾರಿನ ಕಾರ್ನಿವಲ್ ಅನ್ನು ಅಕ್ಟೋಬರ್ 3 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ.
ಹೊಸ ಕಿಯಾ ಇವಿ 9 ಅನ್ನು ನೇರವಾಗಿ ಸಿಬಿಯು (ಸಂಪೂರ್ಣವಾಗಿ ನಿರ್ಮಿಸಿದ ಘಟಕ) ಆಮದು ಮಾಡಿಕೊಳ್ಳಲಾಗುವುದು, ಪ್ರಸ್ತುತ ಕಂಪನಿ ನೀಡುತ್ತಿರುವ ಪ್ರಮುಖ ಎಲೆಕ್ಟ್ರಿಕ್ ಕಾರಾಗಿರುವ ಇವಿ 6 ಗಿಂತ ಮೇಲಿರುತ್ತದೆ. ಇದು 1 ಕೋಟಿ ರೂ.ಗಿಂತ ಹೆಚ್ಚಿನ ಬೆಲೆಯನ್ನು (ಎಕ್ಸ್ ಶೋರೂಂ) ಹೊಂದುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








