1 ಲಕ್ಷ CKD ರಫ್ತುಗಳ ಮೈಲಿಗಲ್ಲು ಸಾಧಿಸಿದ ಕಿಯಾ ಇಂಡಿಯಾ: ಏನಿದು ಸಿಕೆಡಿ ರಫ್ತು?
ಪ್ರಮುಖ ಕಾರು ತಯಾರಕರಾದ ಕಿಯಾ ಮೋಟಾರ್ಸ್, ತನ್ನ ಅನಂತಪುರದ ಉತ್ಪಾದನಾ ಸ್ಥಾವರದಿಂದ ಜೂನ್ 2020 ರಲ್ಲಿ ಸಾಗಣೆಯನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ 1,00,000 ಯುನಿಟ್ ಸಿಕೆಡಿ ವಾಹನಗಳನ್ನು ರಫ್ತು ಮಾಡಿರುವುದಾಗಿ ಘೋಷಿಸಿದೆ. ವಿಶ್ವಾದ್ಯಂತ ಕಂಪನಿಯ CKD ರಫ್ತುಗಳಲ್ಲಿ ಶೇ50 ರಷ್ಟನ್ನು ಹೊಂದಿರುವ ಕಿಯಾ ಕಾರ್ಪೊರೇಷನ್‌ಗೆ ಪ್ರಮುಖ ರಫ್ತು ಕೇಂದ್ರಗಳಲ್ಲಿ ಒಂದಾಗಿ ಕಿಯಾ ಇಂಡಿಯಾವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಅಲ್ಲದೇ ಈ ಸಾಧನೆಯು ಭಾರತವನ್ನು ಪ್ರಮುಖ ರಫ್ತು ಕೇಂದ್ರವಾಗಿ ಸ್ಥಾಪಿಸಲು ಕಂಪನಿಯ ಪ್ರಯತ್ನಗಳನ್ನು ಒತ್ತಿಹೇಳುತ್ತದೆ ಎಂದು ಕಿಯಾ ಹೇಳಿಕೊಂಡಿದೆ.
ಏನಿದು CKD ರಫ್ತು?: CKD ಎಂಬ ಪದವು "ಕಂಪ್ಲೀಟ್ ನಾಕ್ಡ್-ಡೌನ್" ಎಂಬ ಅರ್ಥವನ್ನು ಕೊಡುತ್ತದೆ. ಇದು ಆಟೋಮೋಟಿವ್ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲಾದ ಉತ್ಪಾದನಾ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ತಯಾರಕರು ವಾಹನವನ್ನು ಉತ್ಪಾದನಾ ಸ್ಥಾವರದಲ್ಲಿ ಸಂಪೂರ್ಣವಾಗಿ ಬೇರ್ಪಡಿಸಿ ಬಿಡಿ ಭಾಗಗಳಾಗಿ ಮತ್ತೊಂದು ದೇಶಕ್ಕೆ ರಫ್ತು ಮಾಡುತ್ತಾರೆ. ಬಳಿಕ ಈ ಬಿಡಿ ಭಾಗಗಳನ್ನು ಆಯಾ ದೇಶಗಳಲ್ಲಿ ಜೋಡಿಸಲಾಗುತ್ತದೆ.

ಮೇಲೆ ತಿಳಿಸಲಾದ ಪದ್ದತಿಯಲ್ಲಿ ಜೂನ್ 2020 ರಲ್ಲಿ ಸಾಗಣೆಯನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ 1 ಲಕ್ಷ ಯುನಿಟ್ ಸಿಕೆಡಿ ವಾಹನಗಳನ್ನು ರಫ್ತು ಮಾಡಿದೆ. ಈ ಯಶಸ್ಸು ಸೆಲ್ಟೋಸ್, ಸೋನೆಟ್ ಮತ್ತು ಕ್ಯಾರೆನ್ಸ್ ಕಾರುಗಳನ್ನು ಹೊಂದಿರುವ ಕಿಯಾ ಇಂಡಿಯಾದ ಶ್ರೇಣಿಯ ಮಾರುಕಟ್ಟೆ ಮತ್ತು ಸ್ಪರ್ಧಾತ್ಮಕ ಬೆಲೆಗೆ ಸಾಕ್ಷಿಯಾಗಿದೆ ಎಂದು ಕಿಯಾ ಹೇಳಿಕೊಂಡಿದೆ.
ಈ ಮೂಲಕ ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿರುವ ಕಿಯಾ ಉತ್ಪಾದನಾ ಸ್ಥಾವರವು ಈಗ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಜೊತೆಗೆ ಭಾರತವನ್ನು ಪ್ರಮುಖ ರಫ್ತು ಕೇಂದ್ರವನ್ನಾಗಿ ಮಾಡುವಲ್ಲಿ ಸಹಕರಿಸಿದೆ. ಕಿಯಾ ಇಂಡಿಯಾ 2024 ರಲ್ಲಿ ಉಜ್ಬೇಕಿಸ್ತಾನ್, ಈಕ್ವೆಡಾರ್ ಮತ್ತು ವಿಯೆಟ್ನಾಂ ಮಾರುಕಟ್ಟೆಗಳಿಗೆ CKD ಯುನಿಟ್‌ಗಳ ರಫ್ತು ಸಂಖ್ಯೆ 38,000 ತಲುಪುವ ನಿರೀಕ್ಷೆಯಲ್ಲಿದೆ.

ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಕಿಯಾ ಮುಖ್ಯ ಮಾರಾಟ ಅಧಿಕಾರಿ ಜುನ್ಸು ಚೋ, "ಭಾರತವು ಕಿಯಾ ಕಾರ್ಪೊರೇಷನ್‌ಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಬಲವಾದ ಮಾರಾಟದ ಚಾಲಕನಾಗಿ ಮಾತ್ರವಲ್ಲದೆ ಉದಯೋನ್ಮುಖ ರಫ್ತು ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಈ ಮೈಲಿಗಲ್ಲು ಕಿಯಾ ಇಂಡಿಯಾದ ಉತ್ಕೃಷ್ಟತೆ, ನಾವೀನ್ಯತೆ ಮತ್ತು ಜಾಗತಿಕ ಗ್ರಾಹಕರಿಗೆ ಮೌಲ್ಯವನ್ನು ತಲುಪಿಸುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಕಿಯಾ ಸೆಲ್ಟೋಸ್, ಸೋನೆಟ್ ಮತ್ತು ಕ್ಯಾರೆನ್ಸ್‌ನಂತಹ ಮಾದರಿಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಲವಾಗಿ ಕಾರ್ಯನಿರ್ವಹಿಸುವುದನ್ನು ನೋಡಲು ನಾವು ಹೆಮ್ಮೆಪಡುತ್ತೇವೆ. ಜಾಗತಿಕ ವಾಹನ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸರ್ಕಾರದ ರಫ್ತು-ಸ್ನೇಹಿ ನೀತಿಗಳಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದರು.

2030 ರ ವೇಳೆಗೆ ನಮ್ಮ ರಫ್ತು ಪ್ರಮಾಣವನ್ನು ದ್ವಿಗುಣಗೊಳಿಸಲು ನಮ್ಮ CKD ಹೆಜ್ಜೆಗುರುತನ್ನು ಮಧ್ಯಪ್ರಾಚ್ಯ ಮತ್ತು ಆಫ್ರಿಕಾಕ್ಕೆ ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. 3.67 ಲಕ್ಷ ವಾಹನಗಳ ಸಂಚಿತ ರಫ್ತು ಅಂಕಿಅಂಶವು ಕಿಯಾದ 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳ ಜಾಗತಿಕ ಬೇಡಿಕೆಯನ್ನು ಒತ್ತಿಹೇಳುತ್ತದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಉತ್ತಮ ಗುಣಮಟ್ಟದ ವಾಹನಗಳನ್ನು ತಲುಪಿಸುತ್ತದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








