ದೇಶವನ್ನು ರಕ್ಷಿಸುವವರಿಗೆ ಅಗ್ಗದ ಕಾರುಗಳು! ಪ್ರಸಿದ್ಧ ಕಂಪನಿಗೆ ಅಭಿನಂದನೆಗಳು!

ಪ್ರಮುಖ ಪ್ರೀಮಿಯಂ ಕಾರು ತಯಾರಕರಾದ ಕಿಯಾ ಇಂಡಿಯಾ, ಸಕ್ರಿಯ ಮತ್ತು ನಿವೃತ್ತ ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಗೆ ತನ್ನ ಎಲ್ಲಾ ಸಾಮೂಹಿಕ ವಿಭಾಗದ ಕಾರುಗಳನ್ನು ನೀಡಲು ಕೇಂದ್ರೀಯ ಪೊಲೀಸ್ ಕಲ್ಯಾಣ್ ಭಂಡಾರ್ (KPKB) ನೊಂದಿಗೆ ಪಾಲುದಾರಿಕೆಯನ್ನು ಪ್ರಕಟಿಸಿದೆ. ಈ ಪಾಲುದಾರಿಕೆಯಡಿ ಕಂಪನಿಯು ತನ್ನ ಪ್ರಮುಖ ಉತ್ಪನ್ನಗಳಾದ ಸೆಲ್ಟೋಸ್, ಸೋನೆಟ್ ಮತ್ತು ಕ್ಯಾರೆನ್ಸ್ ಮಾದರಿಗಳನ್ನು ಅರೆಸೈನಿಕ ಪಡೆಗಳು, ರಾಜ್ಯ ಮತ್ತು ಕೇಂದ್ರ ಪೊಲೀಸ್ ಸಿಬ್ಬಂದಿ ಮತ್ತು ಗೃಹ ಸಚಿವಾಲಯದ ಉದ್ಯೋಗಿಗಳಿಗೆ ವಿಶೇಷ ಬೆಲೆಯಲ್ಲಿ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರೀಯ ಪೊಲೀಸ್ ಕಲ್ಯಾಣ್ ಭಂಡಾರ್(KPKB) ಅನ್ನು 2006 ರಲ್ಲಿ ಕೇಂದ್ರ ಗೃಹ ಸಚಿವಾಲಯದ ಕಲ್ಯಾಣ ಉಪಕ್ರಮವಾಗಿ ಸ್ಥಾಪಿಸಲಾಯಿತು. ಇದು BSF, CRPF, CISF, ITBP, SSB ಮತ್ತು ಅಸ್ಸಾಂ ರೈಫಲ್ಸ್ ಅನ್ನು ಒಳಗೊಂಡಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಗತ್ಯತೆಗಳನ್ನು ಪೂರೈಸುತ್ತದೆ. ಈ ಪ್ರಯೋಜನಗಳನ್ನು IB, BPRD, ಮತ್ತು NCRB ಮುಂತಾದ ವಿವಿಧ ಕೇಂದ್ರೀಯ ಪೊಲೀಸ್ ಸಂಸ್ಥೆಗಳಿಗೂ ವಿಸ್ತರಿಸಬಹುದು.

kia-india-partners-with-kpkb-to-offer-its-mass-vehicles

ಕಿಯಾ ವಾಹನಗಳು ತಮ್ಮ ಹೊಸ-ಯುಗದ ಬಾಹ್ಯ ಮತ್ತು ಒಳಾಂಗಣ ವಿನ್ಯಾಸ, ಪವರ್‌ಫುಲ್‌ ಪರ್ಫಾಮೆನ್ಸ್, ಸಂಪರ್ಕಿತ ಕಾರು ಮತ್ತು ಆರಾಮದಾಯಕ ವೈಶಿಷ್ಟ್ಯಗಳಂತಹ ಸ್ಮಾರ್ಟ್ ತಂತ್ರಜ್ಞಾನಗಳಿಗೆ ಹೆಸರುವಾಸಿಯಾಗಿದೆ. ಎಲ್ಲಾ ಕಿಯಾ ಕಾರುಗಳು ತಮ್ಮ ಸೆಗ್ಮೆಂಟ್‌ಗಳಲ್ಲಿ ಉತ್ತಮ ಹೆಸರು ಮಾಡಿವೆ. ಇಂತಹ ಪ್ರೀಮಿಯಂ ಕಾರುಗಳು ಈಗ ಪಾಲುದಾರಿಕೆಯಡಿ ವಿಶೇಷ ಬೆಲೆಯಲ್ಲಿ ಸಿಗಲಿವೆ.

119 ಮಾಸ್ಟರ್ ಕ್ಯಾಂಟೀನ್‌ಗಳು ಮತ್ತು 1,900 ಕ್ಕೂ ಹೆಚ್ಚು ಅಂಗಸಂಸ್ಥೆ ಕ್ಯಾಂಟೀನ್‌ಗಳಲ್ಲಿ KPKB ಅಡಿಯಲ್ಲಿ ಲಭ್ಯವಿರುತ್ತವೆ. ಪ್ರಸ್ತುತ, ಕೇಂದ್ರೀಯ ಪೊಲೀಸ್ ಕಲ್ಯಾಣ್ ಭಂಡಾರ್ ಪೊಲೀಸ್ ಮತ್ತು ಅರೆಸೇನಾ ಪಡೆಗಳಲ್ಲಿ 35 ಲಕ್ಷ ಫಲಾನುಭವಿಗಳನ್ನು ಒಳಗೊಂಡಿದೆ. KPKB ಬೇಡಿಕೆಗಳನ್ನು ಪೂರೈಸಲು ಮತ್ತು Kia ಉತ್ಪನ್ನದ 88 ವಿವಿಧ ಟ್ರಿಮ್‌ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 362 Kia ಡೀಲರ್‌ಶಿಪ್‌ಗಳನ್ನು ನೋಂದಾಯಿಸಲಾಗಿದೆ ಎಂದು ಕಿಯಾ ತಿಳಿಸಿದೆ.

kia-india-partners-with-kpkb-to-offer-its-mass-vehicles

ಕಿಯಾ ಇಂಡಿಯಾದ ಮುಖ್ಯ ಮಾರಾಟ ಅಧಿಕಾರಿ ಮ್ಯುಂಗ್-ಸಿಕ್ ಸೋಹ್ನ್ ಮಾತನಾಡಿ, ಈ ಕಾರ್ಯತಂತ್ರದ ಸಹಭಾಗಿತ್ವದ ಮೂಲಕ ಅರೆಸೈನಿಕ ಮತ್ತು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸೇವೆ ಸಲ್ಲಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ವರ್ಗ ಪ್ರಮುಖ ಉತ್ಪನ್ನಗಳು ಅವರಿಗೆ ಅತ್ಯುತ್ತಮವಾದವುಗಳನ್ನು ಒದಗಿಸುತ್ತವೆ ಎಂಬ ವಿಶ್ವಾಸವಿದೆ. ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಇನ್-ಕ್ಲಾಸ್ ಮೊಬಿಲಿಟಿ ಅನುಭವ ಒದಗಿಸಲು ನಮ್ಮ ಕಾರುಗಳು ಸಿದ್ದವಾಗಿವೆ ಎಂದರು.

ಏಪ್ರಿಲ್ 2017 ರಲ್ಲಿ, ಕಿಯಾ ಇಂಡಿಯಾ ಅನಂತಪುರ ಜಿಲ್ಲೆಯಲ್ಲಿ ತಮ್ಮ ಬೃಹತ್ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಆರಂಭಿಸಿತು. ನಿರ್ಮಾಣ ಪೂರ್ಣಗೊಂಡ ಬಳಿಕ ಆಗಸ್ಟ್ 2019ರಲ್ಲಿ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಿ ಈಗ 3,00,000 ಯುನಿಟ್‌ಗಳ ಸ್ಥಾಪಿತ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಪ್ರಸ್ತುತ 265 ನಗರಗಳಲ್ಲಿ 588 ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಅನ್ನು ಹೊಂದಿದೆ.

kia-india-partners-with-kpkb-to-offer-its-mass-vehicles

ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಈವರೆಗೆ ಸೆಲ್ಟೋಸ್, ಕಾರ್ನಿವಲ್, ಸೋನೆಟ್, ಕ್ಯಾರೆನ್ಸ್ ಮತ್ತು EV6 ಸೇರಿ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ಕಿಯಾ ಇಂಡಿಯಾ ತನ್ನ ಅನಂತಪುರದ ಸ್ಥಾವರದಿಂದ 9.8 ಲಕ್ಷಕ್ಕೂ ಹೆಚ್ಚು ದೇಶೀಯ ಮಾರಾಟ ಮತ್ತು 2.5 ಲಕ್ಷ ರಫ್ತು ಸೇರಿದಂತೆ 1.2 ಮಿಲಿಯನ್ ವಾಹನ ರವಾನೆಗಳನ್ನು ಪೂರ್ಣಗೊಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 21, 2024, 13:22 [IST]
English summary
Kia india partners with kpkb to offer its mass vehicles
Read more on kia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+