Kia: ಕಿಯಾ 2.0 ನಿಂದ ಹೊಸ SUV! ಭಾರತದಲ್ಲಿ ಈವರಗೆ ನೋಡದ ಕಾರಿದು ಎಂದ ಕಂಪನಿ!

ಭಾರತದಲ್ಲಿ ವಿಶಿಷ್ಟವಾದ ಹಾಗೂ ಹೊಸ ವಿನ್ಯಾಸದ ಎಸ್‌ಯುವಿಗಳನ್ನು ರಚಿಸುವ ಗುರಿಯನ್ನು ಹೊಂದಿರುವ ನಾವು, Kia 2.0 ನಿಂದ ಬಹುನಿರೀಕ್ಷಿತ ಮೊದಲ SUV ಚಿತ್ರಗಳನ್ನು ಅನಾವರಣಗೊಳಿಸಿದ್ದೇವೆ ಎಂದು ಕಿಯಾ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. ಕಿಯಾದ ಮುಂಬರಲಿರುವ ಹೊಸ SUV ಅದರ ವಿಕಸನಗೊಂಡ ವಿನ್ಯಾಸ, 2.0 ತಂತ್ರಜ್ಞಾನ, ಸುರಕ್ಷತೆಯಲ್ಲಿ ಉನ್ನತ ಮಟ್ಟದ ಪ್ರಗತಿಯೊಂದಿಗೆ ನಿರ್ಮಾಣಗೊಂಡಿದೆ. ವಾಹನವು ಫ್ಯೂಚರಿಸ್ಟಿಕ್ ಡಿಸೈನ್ ಮತ್ತು EV9, ಕಾರ್ನಿವಲ್ ಲಿಮೋಸಿನ್ ಎರಡರಿಂದಲೂ ಪ್ರೇರಿತವಾದ ಆಧುನಿಕ ವಿನ್ಯಾಸವನ್ನು ಒಳಗೊಂಡಿದೆ ಎಂದು ಕಿಯಾ ಹೇಳಿದೆ.

ಪ್ರಮುಖ ಪ್ರೀಮಿಯಂ ಕಾರು ತಯಾರಕರಾದ ಕಿಯಾ ಇಂಡಿಯಾ, ಭಾರತದಲ್ಲಿ ವಿಶಿಷ್ಟವಾದ ಹೊಸ ಎಸ್‌ಯುವಿಗಳನ್ನು ರಚಿಸುವ ಗುರಿಯನ್ನು ಹೊಂದಿದ್ದು, ತನ್ನ 2.0 ಕಾರ್ಯತಂತ್ರದ ಭಾಗವಾಗಿ ಮುಂಬರುವ ಹೊಸ ಎಸ್‌ಯುವಿಯ ಬಗ್ಗೆ ಸುಳಿವು ನೀಡಿದೆ. ಹೌದು, ಹೊಸ ಕಾರಿನ ಬಗ್ಗೆ ತನ್ನ ಅತ್ಯಂತ ನಿರೀಕ್ಷಿತ, ಮೊದಲ ಎಸ್‌ಯುವಿಯ ರೇಖಾಚಿತ್ರ (ಸ್ಕೆಚ್)ಗಳನ್ನು ಇಂದು ಅನಾವರಣಗೊಳಿಸಿದೆ. ಕಿಯಾದಿಂದ ಮುಂಬರಲಿರುವ ಕಾರು ಸಾಮಾನ್ಯ ಎಸ್‌ಯುವಿ ವಿನ್ಯಾಸಕ್ಕಿಂತ ಭಿನ್ನವಾಗಿರಲಿದೆ.

kia-india-releases-sketches-of-the-1st-suv-from-evolved-kia-2-0

ಅದರ ಉದ್ದೇಶಪೂರ್ವಕ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 'ಹೊಸ ಜಾತಿಯ ಎಸ್‌ಯುವಿಯನ್ನು ಅನುಭವಿಸಲು' (experience a new species of SUV) ಗ್ರಾಹಕರನ್ನು ಆಹ್ವಾನಿಸುತ್ತಿರುವುದಾಗಿ ಹೇಳಿಕೊಂಡಿದೆ. ಜೊತೆಗೆ ಪ್ರಮುಖ ಅನುಕೂಲತೆಯ ವೈಶಿಷ್ಟ್ಯಗಳು ಮತ್ತು ಅಲ್ಟ್ರಾ-ವಿಶಾಲ (ultra-spacious), ಆರಾಮದಾಯಕ ಕ್ಯಾಬಿನ್ ಅನ್ನು ಈ ಕಾರು ಹೊಂದಿರಲಿದೆ ಎಂದು ಕಿಯಾ ತಿಳಿಸಿದೆ.

ಕಿಯಾ ಇಂಡಿಯಾ ಎಂಡಿ ಮತ್ತು ಸಿಇಒ ಗ್ವಾಂಗು ಲೀ ಪ್ರತಿಕ್ರಿಯಿಸಿ, "ಹೊಸ ಕಿಯಾ 2.0 ಎಸ್‌ಯುವಿ ನಮ್ಮ ಹಳೆಯ ಕಾರುಗಳಿಗಿಂತ ಹೆಚ್ಚಿನ ನಾವೀನ್ಯತೆ, ವಿನ್ಯಾಸ ಶ್ರೇಷ್ಠತೆ ಮತ್ತು ಗ್ರಾಹಕ - ಕೇಂದ್ರಿತತೆಯೊಂದಿಗೆ ಹಳೆಯ ಸಂಪ್ರದಾಯಗಳನ್ನು ಮುರಿಯಲು ನಮ್ಮ ದೀರ್ಘಕಾಲಿಕ ಬದ್ಧತೆಯನ್ನು ಸಾಕಾರಗೊಳಿಸುತ್ತದೆ. ಭಾರತೀಯ ಗ್ರಾಹಕರ ಅವಾಸ್ತವಿಕ ಅಗತ್ಯಗಳಿಂದ ಸ್ಫೂರ್ತಿಯೊಂದಿಗೆ ಈ SUV ಅನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗುತ್ತಿದೆ ಎಂದರು.

kia-india-releases-sketches-of-the-1st-suv-from-evolved-kia-2-0

ಇದು ವಿಶಿಷ್ಟವಾದ, ಪ್ರಗತಿಶೀಲ SUV ವಿನ್ಯಾಸವನ್ನು ಹೊಂದಿದೆ, ಇನ್ನು ಮುಂದೆ ಸಾಂಪ್ರದಾಯಿಕ SUV ವಿನ್ಯಾಸವನ್ನು ಅನುಸರಿಸುವುದಿಲ್ಲ. ಈ SUV ಅನ್ನು ತನ್ನ ವಿಭಾಗದಲ್ಲಿಯೇ ಮೊದಲ ವೈಶಿಷ್ಟ್ಯಗಳು, ಅಸಾಧಾರಣ ಪರ್ಫಾಮೆನ್ಸ್ ಮತ್ತು ಸಾಟಿಯಿಲ್ಲದ ಸೌಕರ್ಯಗಳೊಂದಿಗೆ ಗ್ರಾಹಕರನ್ನು ಆನಂದಿಸಲು ವಿನ್ಯಾಸಗೊಳಿಸಲಾಗಿದೆ. ಉತ್ತಮ ಬೇಡಿಕೆ ಪಡೆಯುವ ಮೂಲಕ ಭಾರತೀಯ ಖರೀದಿದಾರರಿಗೆ ಇದು ಪ್ರತಿಧ್ವನಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದರು.

ಕಿಯಾ ಬಗ್ಗೆ: ಏಪ್ರಿಲ್ 2017 ರಲ್ಲಿ, ಕಿಯಾ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಹೊಸ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಆಂಧ್ರಪ್ರದೇಶದ ರಾಜ್ಯ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿತು. ಬಳಿಕ ಆಗಸ್ಟ್ 2019 ರಲ್ಲಿ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಿತು. ಆಗಿನ ಸಮಯದಲ್ಲಿ 3,00,000 ಯುನಿಟ್‌ ವಾಹನಗಳ ಸ್ಥಾಪಿತ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿತ್ತು.

ಕಿಯಾ ಇಂಡಿಯಾ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್, ಕಾರ್ನಿವಲ್, ಸೋನೆಟ್, ಕ್ಯಾರೆನ್ಸ್ ಮತ್ತು EV6 ಎಂಬ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ತನ್ನ ಅನಂತಪುರದ ಸ್ಥಾವರದಿಂದ ಸುಮಾರು 1.3 ಮಿಲಿಯನ್ ವಾಹನ ರವಾನೆಗಳನ್ನು ಪೂರ್ಣಗೊಳಿಸಿದೆ, ಇದರಲ್ಲಿ 10.5 ಲಕ್ಷಕ್ಕೂ ಹೆಚ್ಚು ದೇಶೀಯ ಮಾರಾಟ ಮತ್ತು 2.5 ಲಕ್ಷ ರಫ್ತುಗಳು ಸೇರಿವೆ. ಕಂಪನಿಯು 287 ನಗರಗಳಲ್ಲಿ 640 ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, November 6, 2024, 15:00 [IST]
English summary
Kia india releases sketches of the 1st suv from evolved kia 2 0
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+