'ಮೇಡ್ ಇನ್ ಇಂಡಿಯಾ' ಕಿಯಾ ಕಾರುಗಳಿಗೆ ವಿದೇಶಗಳಲ್ಲಿ ಭಾರೀ ಜನಪ್ರಿಯತೆ: ದಾಖಲೆ ಸೃಷ್ಟಿ!

ಜನಪ್ರಿಯ ಕಾರು ತಯಾರಕರಾದ ಕಿಯಾ ಇಂಡಿಯಾ, 2,50,000 ವಾಹನ ರಫ್ತುಗಳನ್ನು ಮೀರಿದ ಮಹತ್ವದ ಮೈಲಿಗಲ್ಲಿನ ಸಾಧನೆಯನ್ನು ಪ್ರಕಟಿಸಿದೆ. 2019 ರಿಂದ, ಕಂಪನಿಯು ತನ್ನ ಆಂಧ್ರಪ್ರದೇಶದ ಅನಂತಪುರ ಉತ್ಪಾದನಾ ಸೌಲಭ್ಯದಿಂದ 100ಕ್ಕೂ ಹೆಚ್ಚು ಮಾರುಕಟ್ಟೆಗಳಿಗೆ ಅಂತರಾಷ್ಟ್ರೀಯವಾಗಿ 2,55,133 ಕಾರುಗಳನ್ನು ರವಾನಿಸಿದೆ. ಇದರಲ್ಲಿ ಸೆಲ್ಟೋಸ್ ಹೆಚ್ಚು ರಫ್ತಾಗಿದ್ದು, ಕಂಪನಿಯ ಒಟ್ಟಾರೆ ಸಾಗರೋತ್ತರ ರವಾನೆಗಳಲ್ಲಿ ಶೇ59 ಪಾಲನ್ನು ಹೊಂದಿದೆ. ನಂತರ Kia ನ ಇತರ ಕಾರುಗಳಾದ Sonet ಮತ್ತು Carens ಕ್ರಮವಾಗಿ ಶೇ34 ಮತ್ತು ಶೇ7 ರಷ್ಟು ಪಾಲನ್ನು ಹೊಂದುವ ಮೂಲಕ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.

ಇತ್ತೀಚಿನ ವರ್ಷಗಳಲ್ಲಿ, ಕಂಪನಿಯು ತನ್ನ ಕಾರುಗಳನ್ನು ದೇಶೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಹೆಚ್ಚು ಗಮನಹರಿಸಿದೆ. ಈ ವರ್ಷದಿಂದ ಭಾರತಕ್ಕೆ ಶೇ90 ರಷ್ಟು ಉತ್ಪನ್ನಗಳನ್ನು ತಯಾರಿಸಲು ಹೊರಟಿದೆ. ಪ್ರಸ್ತುತ ಕಿಯಾ ಇಂಡಿಯಾ ತನ್ನ ಅನಂತಪುರದ ಸೌಲಭ್ಯದಿಂದ 100ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ. ಕಿಯಾ ಇಂಡಿಯಾ ರಫ್ತಿನ ಕೆಲವು ಪ್ರಮುಖ ಮಾರುಕಟ್ಟೆಗಳಲ್ಲಿ ದಕ್ಷಿಣ ಆಫ್ರಿಕಾ, ಚಿಲಿ, ಪರಾಗ್ವೆ ಮತ್ತು ಲ್ಯಾಟಿನ್ ಅಮೇರಿಕಾ ಸೇರಿವೆ.

kia-india-surpasses-2-50-lakh-vehicle-exports-milestone

ಕಿಯಾ ಇಂಡಿಯಾದ ಮುಖ್ಯ ಮಾರಾಟ ಅಧಿಕಾರಿ ಮ್ಯುಂಗ್-ಸಿಕ್ ಸೊಹ್ನ್ ಮಾತನಾಡಿ, "ಗುಣಮಟ್ಟ ಮತ್ತು ನಾವೀನ್ಯತೆಗೆ ನಮ್ಮ ಸಮರ್ಪಣೆಯು ನಮ್ಮನ್ನು ಈ ಮೈಲಿಗಲ್ಲಿಗೆ ತಲುಪಿಸಿದೆ. ನಮ್ಮ ಮೇಡ್ ಇನ್ ಇಂಡಿಯಾ ವಾಹನಗಳ ಯಶಸ್ಸು ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟಕ್ಕೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಕಿಯಾದ ಈ ವೇಗವನ್ನು ಕಾಪಾಡಿಕೊಳ್ಳುವ ನಮ್ಮ ಗಮನವು ದೇಶೀಯ ಮಾರುಕಟ್ಟೆಯ ಮೇಲೆ ಕೇಂದ್ರೀಕರಿಸಿದೆ, ನಾವು ಈ ವರ್ಷ ನಮ್ಮ ರಫ್ತುಗಳನ್ನು ಸ್ಥಿರವಾಗಿಡಲು ಯೋಜಿಸುತ್ತೇವೆ ಎಂದರು.

ಸುಮಾರು ಐದು ವರ್ಷಗಳ ಹಿಂದೆ ಉತ್ಪಾದನೆಯನ್ನು ಆರಂಭಿಸಿದ ಕಿಯಾದ ಅನಂತಪುರ ಸ್ಥಾವರವು ಕಂಪನಿಯ ಜಾಗತಿಕ ನೆಟ್‌ವರ್ಕ್‌ನಲ್ಲಿ ಶೀಘ್ರವಾಗಿ ನಿರ್ಣಾಯಕ ರಫ್ತು ಕೇಂದ್ರವಾಗಿದೆ. ಸೌಲಭ್ಯದ ಸುಧಾರಿತ ಉತ್ಪಾದನಾ ಸಾಮರ್ಥ್ಯಗಳು ಮತ್ತು ಅತ್ಯುನ್ನತ ಗುಣಮಟ್ಟದ ಮಾನದಂಡಗಳ ಅನುಸರಣೆಯು ವಿಶ್ವಾದ್ಯಂತ RV ಗಳ ಬೇಡಿಕೆಯನ್ನು ಪೂರೈಸಲು ಕಿಯಾವನ್ನು ಸಕ್ರಿಯಗೊಳಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

kia-india-surpasses-2-50-lakh-vehicle-exports-milestone

ಕಿಯಾ ಆಗಸ್ಟ್ 2019 ರಲ್ಲಿ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಸುಮಾರು 3,00,000 ಯುನಿಟ್‌ಗಳ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿಯವರೆಗೆ, ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್, ಕಾರ್ನಿವಲ್, ಸೋನೆಟ್, ಕ್ಯಾರೆನ್ಸ್ ಮತ್ತು EV6 ಎಂಬ ಐದು ವಾಹನಗಳನ್ನು ಬಿಡುಗಡೆ ಮಾಡಿದೆ.

ಕಿಯಾ ಪ್ರಪಂಚದಾದ್ಯಂತ 52,000 ಉದ್ಯೋಗಿಗಳು, 190 ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಉಪಸ್ಥಿತಿ ಮತ್ತು ಆರು ದೇಶಗಳಲ್ಲಿ ಉತ್ಪಾದನಾ ಸೌಲಭ್ಯಗಳೊಂದಿಗೆ, ಕಂಪನಿಯು ಇಂದು ವರ್ಷಕ್ಕೆ ಸುಮಾರು ಮೂರು ಮಿಲಿಯನ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಕಿಯಾ ಎಲೆಕ್ಟ್ರಿಫೈಡ್ ಮತ್ತು ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆಯನ್ನು ಮುನ್ನಡೆಸುತ್ತಿದೆ ಎಂದು ಕಿಯಾ ಇಂಡಿಯಾ ಹೇಳಿಕೊಂಡಿದೆ.

kia-india-surpasses-2-50-lakh-vehicle-exports-milestone

ಭಾರತೀಯ ರಸ್ತೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಸಂಪರ್ಕಿತ ಕಾರುಗಳೊಂದಿಗೆ, ಇದು ದೇಶದ ಸಂಪರ್ಕಿತ ಕಾರ್ ಲೀಡರ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ಬ್ರ್ಯಾಂಡ್ 236 ನಗರಗಳಲ್ಲಿ 522 ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಅನ್ನು ಹೊಂದಿದ್ದು, ದೇಶಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ಬಲಪಡಿಸುವತ್ತ ಗಮನಹರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 14, 2024, 13:56 [IST]
English summary
Kia india surpasses 2 50 lakh vehicle exports milestone
Read more on kia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+