ಭಾರತದಲ್ಲಿ ಕಿಯಾಗೆ ವರದಾನವಾದ ಸಾನೆಟ್: ಮಧ್ಯಮ ವರ್ಗದವರ ಫೇವರೆಟ್ ಕಾರು!
ಜನಪ್ರಿಯ ಕಾರು ತಯಾರಕರಲ್ಲಿ ಒಂದಾಗಿರುವ ಕಿಯಾ ಇಂಡಿಯಾ, ಮೇ 2024 ರಲ್ಲಿ 19,500 ಯುನಿಟ್ ಕಾರುಗಳ ಮಾರಾಟವನ್ನು ನೋಂದಾಯಿಸಿದೆ. ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 18,766 ಯುನಿಟ್ ಕಾರುಗಳಿಗೆ ಹೋಲಿಸಿದರೆ ಶೇ3.9 ಕ್ಕಿಂತ ಹೆಚ್ಚಿನ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಜನವರಿ 2024 ರಲ್ಲಿ ಬಿಡುಗಡೆಯಾದ ಹೊಸ ಸಾನೆಟ್ ಫೇಸ್‌ಲಿಫ್ಟ್ ಮಾಡೆಲ್ ಮೇ 2024 ರಲ್ಲಿ 7,433 ಯುನಿಟ್ ಕಾರುಗಳ ಮಾರಾಟದೊಂದಿಗೆ ಕಿಯಾ ಇಂಡಿಯಾಗೆ ಅತಿ ಹೆಚ್ಚು ಮಾರಾಟವಾದ ಕಾರಾಗಿ ಹೊರಹೊಮ್ಮಿದೆ.
ಕಿಯಾ ಸೆಲ್ಟೋಸ್ 6,736 ಯುನಿಟ್ ಕಾರುಗಳು ಮತ್ತು ಕ್ಯಾರೆನ್ಸ್ 5,316 ಯುನಿಟ್ ಕಾರುಗಳ ಮಾರಾಟದೊಂದಿಗೆ ನಂತರದ ಸ್ಥಾನದಲ್ಲಿವೆ. ಕಿಯಾ ಮೇ ತಿಂಗಳಿನಲ್ಲಿ ಸಾಗರೋತ್ತರ ಮಾರುಕಟ್ಟೆಗಳಿಗೆ 2,304 ಯುನಿಟ್‌ಗಳನ್ನು ರಫ್ತು ಮಾಡಿದೆ. ಅಲ್ಲಿಗೆ ಕಿಯಾ ಇಂಡಿಯಾ ಒಟ್ಟು 21,804 ಯುನಿಟ್ ಕಾರುಗಳನ್ನು ಮಾರಟ ಮಾಡಿದೆ.

ಕಂಪನಿಯು ತನ್ನ ಸ್ಥಿರವಾದ ರಫ್ತು ಕಾರ್ಯತಂತ್ರದ ಮೇಲೆ ಬ್ಯಾಂಕಿಂಗ್ ಮಾಡುವ ಮೂಲಕ ಇಲ್ಲಿಯವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ 2.5 ಲಕ್ಷ ಕಾರುಗಳ ರಫ್ತು ಮೈಲಿಗಲ್ಲನ್ನು ಮೀರಿಸಿದೆ. ಇದರಲ್ಲಿ ಸೆಲ್ಟೋಸ್ ಬಹುಪಾಲು ಕೊಡುಗೆ ನೀಡಿದೆ. ಸುಮಾರು ಶೇ 60 ರಷ್ಟು ರಫ್ತುಗಳು ಭಾರತದಿಂದ ಮಾಡಲಾಗಿದೆ. ಕಂಪನಿಯ ಸಾಗರೋತ್ತರ ರವಾನೆಗಳಲ್ಲಿ ಸಾನೆಟ್ ಶೇ34 ಮತ್ತು ಕ್ಯಾರೆನ್ಸ್ ಶೇ7 ರಷ್ಟು ಪಾಲನ್ನು ಹೊಂದಿವೆ.
ಕಿಯಾ ಇಂಡಿಯಾದ ಮಾರ್ಕೆಟಿಂಗ್ ಮುಖ್ಯಸ್ಥರಾದ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, "ಈ ವರ್ಷ ಇಲ್ಲಿಯವರೆಗೆ, ನಮ್ಮ ಮಾದರಿಗಳ ಹೊಸ ಸ್ಪರ್ಧಾತ್ಮಕ ರೂಪಾಂತರಗಳನ್ನು ಪರಿಚಯಿಸುವಲ್ಲಿ ನಾವು ಆಕ್ರಮಣಕಾರಿಯಾಗಿದ್ದೇವೆ, ಇದು ನಮ್ಮ ಮಾರಾಟಕ್ಕೆ ಗಣನೀಯ ಕೊಡುಗೆ ನೀಡಿದೆ. ಮುಂಬರುವ ತಿಂಗಳುಗಳಲ್ಲಿ ಇದೇ ಬೆಳವಣಿಗೆಯನ್ನು ಮುಂದುವರಿಸುತ್ತೇವೆ ಎಂದರು.

ಸುಮಾರು ಐದು ವರ್ಷಗಳ ಅಲ್ಪಾವಧಿಯಲ್ಲಿ, Kia ದೇಶದ ಪ್ರಮುಖ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 9.8 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಶೀಘ್ರದಲ್ಲೇ 1 ಮಿಲಿಯನ್ ದೇಶೀಯ ಮಾರಾಟದ ಮೈಲಿಗಲ್ಲನ್ನು ದಾಟುತ್ತೇವೆ ಎಂದು ಹರ್ದೀಪ್ ಸಿಂಗ್ ಬ್ರಾರ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಸೆಲ್ಟೋಸ್, ಕಾರ್ನಿವಲ್, ಸೋನೆಟ್, ಕ್ಯಾರೆನ್ಸ್ ಮತ್ತು EV6 ಸೇರಿದಂತೆ ಐದು ವಾಹನಗಳನ್ನು ಬಿಡುಗಡೆ ಮಾಡಿದೆ. ಕಿಯಾ ಇಂಡಿಯಾ ತನ್ನ ಅನಂತಪುರದ ಸ್ಥಾವರದಿಂದ 9.8 ಲಕ್ಷ ದೇಶೀಯ ಮಾರಾಟ ಮತ್ತು 2.5 ಲಕ್ಷ ರಫ್ತು ಸೇರಿದಂತೆ 1.2 ಮಿಲಿಯನ್ ವಾಹನ ರವಾನೆಗಳನ್ನು ಪೂರ್ಣಗೊಳಿಸಿದೆ.

ಭಾರತೀಯ ರಸ್ತೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಸಂಪರ್ಕಿತ ಕಾರುಗಳೊಂದಿಗೆ, ಇದು ದೇಶದ ಸಂಪರ್ಕಿತ ಕಾರ್ ಲೀಡರ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ಬ್ರ್ಯಾಂಡ್ 236 ನಗರಗಳಲ್ಲಿ 522 ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಅನ್ನು ಹೊಂದಿದ್ದು, ದೇಶಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ಬಲಪಡಿಸುವತ್ತ ಗಮನಹರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








