ಕೈಗೆಟುಕುವ ಬೆಲೆಯ ಸಣ್ಣ ಸಿಟಿ ಕಾರನ್ನು ಬಿಡುಗಡೆ ಮಾಡಲಿದೆ ಕಿಯಾ: ವಿಶೇಷತೆಗಳೇನು?
ಭಾರತದಲ್ಲಿ ಬಜೆಟ್ ಕಾರುಗಳಿಗೆ ಭಾರೀ ಬೇಡಿಕೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೆಂದು ಮಾರುತಿ ಸುಜುಕಿಯಂತೆ ಎಲ್ಲಾ ಕಂಪನಿಗಳು ಬಜೆಟ್ ಬೆಲೆಯಲ್ಲಿ ಕಾರುಗಳನ್ನು ನೀಡುತ್ತಿಲ್ಲ, ಆದ್ರೆ ಭಾರತೀಯ ಮಾರುಕಟ್ಟೆಗೆ ಅಗ್ಗದ ಬೆಲೆಯ ಪುಟ್ಟ ಕಾರುಗಳ ಅವಶ್ಯಕತೆ ತುಂಬಾ ಇದೆ. ಇದನ್ನು ಮನಗಂಡಿರುವ ಕಿಯಾ ಮೋಟಾರ್ಸ್, ಹೊಸ ಸಿಟಿ ಎಲೆಕ್ಟ್ರಿಕ್ ಕಾರಿನ ಅಭಿವೃದ್ಧಿ ಕೆಲಸದಲ್ಲಿದೆ. ಹೌದು ಕಿಯಾ ಪ್ರಸ್ತುತ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿರುವ 'ಪಿಕಾಂಟೊ'ಗೆ ಹೋಲುವ ಹೊಸ ಎಲೆಕ್ಟ್ರಿಕ್ ಸಿಟಿ ಕಾರನ್ನು ಪರಿಚಯಿಸಲು ಯೋಚಿಸುತ್ತಿದೆ.
ಇದರ ಜೊತೆಗೆ ಕಂಪನಿಯು ಸ್ಟಿಂಗರ್ ಸ್ಥಾನದಲ್ಲಿ ಪರ್ಫಾಮೆನ್ಸ್ ಆಧಾರಿತ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ಅಂದಹಾಗೆ ಕಿಯಾ ಸ್ಟಿಂಗರ್ ಜಾಗತಿಕ ಮಾರುಕಟ್ಟೆಯಲ್ಲಿ ಕಂಪನಿಯ ಪ್ರಮುಖ ಸೆಡಾನ್ ಆಗಿದ್ದು, ಇದನ್ನು ಕಳೆದ ವರ್ಷ ಸ್ಥಗಿತಗೊಳಿಸಲಾಯಿತು. ಕಿಯಾ ಈಗ ಸ್ಟಿಂಗರ್ ಜಾಗದಲ್ಲಿ ಹೊಸ ಟಾಪ್-ಎಂಡ್ ಪರ್ಫಾಮೆನ್ಸ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.

ಕಿಯಾ ತನಗಿರುವ ಇ-ಜಿಎಂಪಿ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಾ ಅದ್ಭುತ ಯಶಸ್ಸನ್ನು ಕಾಣುತ್ತಿದೆ. ಈ ಪ್ಲಾಟ್‌ಫಾರ್ಮ್‌ನಿಂದ ಹೊರಬಂದ ಕಿಯಾ ಇವಿ 6 ಮತ್ತು ಇವಿ 9 ಗ್ರಾಹಕರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿವೆ. ಈ ಬೇಡಿಕೆಯನ್ನು ಉಳಿಸಿಕೊಳ್ಳಲು ಮುಂಬರಲಿರುವ ಇವಿ 5 ಮತ್ತು ಇವಿ 3 ಗಮನಾರ್ಹ ಪಾತ್ರ ವಹಿಸುವ ನಿರೀಕ್ಷೆಯಿದೆ.
ಕಿಯಾ ಅಧ್ಯಕ್ಷ ಹೋ - ಸಂಗ್ ಸಾಂಗ್ ಇತ್ತೀಚೆಗೆ ಪಿಕಾಂಟೊ (ಜಾಗತಿಕ ಕಿಯಾ ಕಾರು) ನಂತರದ ಎಲೆಕ್ಟ್ರಿಕ್ ಕಾರು ಮುಂದಿನ ದೊಡ್ಡ ಗುರಿಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಆದರೆ ಅದಕ್ಕೂ ಮೊದಲು ಕಿಯಾ 30,000 ಯುರೋ (ಸುಮಾರು 28 ಲಕ್ಷ ರೂ.) ಗಿಂತ ಕಡಿಮೆ ಬೆಲೆಯ ಇವಿ 2 ಅನ್ನು ಬಿಡುಗಡೆ ಮಾಡಲಿದೆ.

ಒಂದು ಇದು ವೇಳೆ 28 ಲಕ್ಷ ರೂ.ಗೆ ಬಿಡುಗಡೆಯಾದ್ರೆ ಪಿಕಾಂಟೊ ಇದಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗಬೇಕಾದ ಅನಿವಾರ್ಯತೆ ಇದೆ. ಅಂದಾಜು ಬೆಲೆಯು 20,000 ಯುರೋ (ಸುಮಾರು 18.6 ಲಕ್ಷ ರೂ.)ಗೆ ಇಳಿಯಲು ನೋಡುತ್ತಿರುವುದರಿಂದ ಪಿಕಾಂಟೊ ಬದಲಿ ಇನ್ನೂ ಕಠಿಣ ಕೆಲಸವಾಗಿದೆ. ಆದರೆ ಕಂಪನಿಯು ಹೆಚ್ಚಿನ ಪ್ರಮಾಣದ ಮಾರಾಟವನ್ನು ಗುರಿಯಾಗಿಸಿಕೊಂಡು ಸವಾಲನ್ನು ಸ್ವೀಕರಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ.
ಕಿಯಾ ಇವಿ 2 ಗಾತ್ರದಲ್ಲಿ ರಿಯೊ(ಅಂತರಾಷ್ಟ್ರೀಯ ಮಾದರಿ)ಗೆ ಹೋಲಿಸಬಹುದಾದ ನಿರೀಕ್ಷೆಯಿದೆ. ಇ-ಜಿಎಂಪಿ ಆರ್ಕಿಟೆಕ್ಚರ್‌ನ ಮಾರ್ಪಡಿಸಿದ ಆವೃತ್ತಿಯನ್ನು ಬಳಸುತ್ತದೆ. ಇದಲ್ಲದೆ, ಇವಿ 2 ಗಿಂತ ಕೆಳಗಿರುವ ಹೆಚ್ಚು ಕಾಂಪ್ಯಾಕ್ಟ್ ಮಾದರಿಯು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಅದೇ ಪ್ಲಾಟ್ ಫಾರ್ಮ್ ಬಳಸಬೇಕಿದೆ. ಪ್ರಸ್ತುತ ಇತರ ಮಾದರಿಗಳಲ್ಲಿ ಬಳಸಲಾಗುತ್ತಿರುವ ಸಣ್ಣ ಬ್ಯಾಟರಿ ಪ್ಯಾಕ್‌ಗಳು ಮತ್ತು ಎಲೆಕ್ಟ್ರಿಕ್ ಮೋಟರ್‌ಗಳನ್ನು ಸಹ ಬಳಸಬಹುದು.
ಇದು ಪ್ರಸ್ತುತ ಇವಿ 6 ಜಿಟಿಗಿಂತ ಉತ್ತಮ ಪರ್ಫಾಮೆನ್ಸ್ ಹೊಂದಿದ್ದರೆ, ಹೆಚ್ಚು ಚಾಲಕ-ಆಧಾರಿತ ಪ್ಯಾಕೇಜ್‌ನಲ್ಲಿ 600 ಹೆಚ್‌ಪಿ ಪವರ್ ಹೊರಹಾಕಬಹುದು. ಭಾರತದ ಬಗ್ಗೆ ಹೇಳುವುದಾದರೆ, ಕಿಯಾ ಅಕ್ಟೋಬರ್ 3 ರಂದು ಇವಿ 9 ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಲಿದ್ದು, ಇದರ ಬಳಿಕ ಹೆಚ್ಚಿನ ಹೊಸ ಮಾದರಿಗಳು ಬಿಡುಗಡೆಗೆ ಕಾಯುತ್ತಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








