ಮತ್ತಷ್ಟು ಕಲರ್‌ಫುಲ್‌ ಆದ ಆಕರ್ಷಕ ಬೆಲೆ‌ಯ ಕಿಯಾ ಸೆಲ್ಟೋಸ್

ಜನಪ್ರಿಯ ಕಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ. ಹೊಸ ನವೀಕರಣಗಳೊಂದಿಗೆ ಕಿಯಾ ಇಂಡಿಯಾ ಕಂಪನಿಯು ಕಿಯಾ ಸೆಲ್ಟೋಸ್ (Kia Seltos ) ಎಸ್‍ಯುವಿ ಮಾರಾಟದಲ್ಲಿ ಸುನಾಮಿ ಎಬ್ಬಿಸಿದೆ. ಈ ಕಿಯಾ ಸೆಲ್ಟೋಸ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ.

ಕಿಯಾ ತನ್ನ ಪ್ರಮುಖ ಎಸ್‍ಯುವಿ ಸೆಲ್ಟೋಸ್‌ನ ಮೂಲ ರೂಪಾಂತರದ ಬಣ್ಣ ಆಯ್ಕೆಗಳನ್ನು ನವೀಕರಿಸಿದೆ. ಈ ಕಿಯಾ ಸೆಲ್ಟೋಸ್ HTE ರೂಪಾಂತರವು ಈಗ ಹೊಸ ಐದು ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ. ಹಿಂದೆ, ಈ ರೂಪಾಂತರವನ್ನು ಎರಡು ಬಾಹ್ಯ ಬಣ್ಣಗಳ ಆಯ್ಕೆಗಳೊಂದಿಗೆ ಮಾತ್ರ ಲಭ್ಯವಿತ್ತು. ಇದೀಗ ಕ್ಲಿಯರ್ ವೈಟ್, ಸ್ಪಾರ್ಕ್ಲಿಂಗ್ ಸಿಲ್ವರ್, ಪ್ಯೂಟರ್ ಆಲಿವ್, ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್, ಇಂಟೆನ್ಸ್ ರೆಡ್ ಮತ್ತು ಇಂಪೀರಿಯಲ್ ಬ್ಲೂ ಬಣ್ಣಗಳ ಆಯ್ಕೆಗಳಿವೆ.

Kia Seltos

ಕಿಯಾ ಸೆಲ್ಟೋಸ್ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.90 ಲಕ್ಷವಾಗಿದೆ. ಕಿಯಾ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಸೆಲ್ಟೋಸ್‌ನ HTE ರೂಪಾಂತರವು ಈಗ ವಿಶಾಲವಾದ ಪ್ಯಾಲೆಟ್‌ನೊಂದಿಗೆ ಬರುತ್ತದೆ, ಇದು ಹೊಸ ಪ್ಯೂಟರ್ ಆಲಿವ್ ಶೇಡ್ ಅನ್ನು ಸಹ ಒಳಗೊಂಡಿದೆ. ಇದು ಎಸ್‍ಯುವಿ ಅನ್ನು ಪ್ರಾರಂಭಿಸಿದಾಗ ಹೆಚ್ಚಿನ ರೂಪಾಂತರಗಳಲ್ಲಿ ಪಾದಾರ್ಪಣೆ ಮಾಡಿತು.

ಈ ರೂಪಾಂತರಕ್ಕೆ ಸೇರಿಸಲಾದ ಇತರ ನಾಲ್ಕು ಹೊಸ ಬಣ್ಣದ ಆಯ್ಕೆಗಳೆಂದರೆ ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್, ಗ್ರಾವಿಟಿ ಗ್ರೇ ಮತ್ತು ಅರೋರಾ ಬ್ಲ್ಯಾಕ್ ಪರ್ಲ್ ಆಗಿದೆ. ಈ ರೂಪಾಂತರವು ಸಿಂಗಲ್-ಟೋನ್ ಬಣ್ಣದ ಆಯ್ಕೆಗಳನ್ನು ಮಾತ್ರ ಪಡೆಯುವುದನ್ನು ಮುಂದುವರೆಸಿದೆ. ಡ್ಯುಯಲ್-ಟೋನ್ ಸೆಲ್ಟೋಸ್ GTX+ ರೂಪಾಂತರಗಳಿಂದ ಪ್ರಾರಂಭವಾಗುತ್ತದೆ. ಟಾಪ್-ಎಂಡ್ ಎಕ್ಸ್-ಲೈನ್ ರೂಪಾಂತರವು ಮ್ಯಾಟ್ ಗ್ರ್ಯಾಫೈಟ್ ಬಣ್ಣವನ್ನು ಪ್ರತ್ಯೇಕವಾಗಿ ಪಡೆಯುತ್ತದೆ.

Kia Seltos

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 113bhp ಮತ್ತು 144Nm ಪೀಕ್ ಟಾರ್ಕ್‌ನೊಂದಿಗೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ iMT ಗೇರ್‌ಬಾಕ್ಸ್ ಅಥವಾ CVT ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಫೇಸ್‌ಲಿಫ್ಟೆಡ್ ಮಾಡೆಲ್‌ನಲ್ಲಿಯೂ 1.5-ಲೀಟರ್, ಟರ್ಬೋಚಾರ್ಜ್ಡ್, ಡೀಸೆಲ್ ಎಂಜಿನ್ ಹೊಂದಿದೆ.

ಈ ಎಂಜಿನ್ 114bhp ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಯುನಿಟ್‌ನೊಂದಿಗೆ ಜೋಡಿಸಬಹುದು. ಇನ್ನು ಕೊನೆಯದಾಗಿ, ಹೊಸದಾಗಿ ಪರಿಚಯಿಸಲಾದ 1.5-ಲೀಟರ್, ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 158 bhp ಪವರ್ ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Kia Seltos

2019ರಿಂದ ಬಿಡುಗಡೆಯಾದಗಿನಿಂದ, ಭಾರತದ ಗ್ರಾಹಕರು ಹೊಸ ಸೆಲ್ಟೋಸ್ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ.ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಈ ರಿಫ್ರೆಶ್ ಮಾಡೆಲ್ ಕಿಯಾ ಸೆಲ್ಟೋಸ್ ಎಸ್‍ಯುವಿ ಮಾದರಿಯು ಸೋರ್ಟಿ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 25, 2024, 13:09 [IST]
English summary
Kia seltos suv base variant hte gets new colour options details
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+