ಕೊರೋನಾ ಕಾಲದಲ್ಲಿ ಮಾರುಕಟ್ಟೆಗೆ ಬಂದ ಕೊರಿಯನ್‌ ಹುಲಿ: ಇಲ್ಲಿಯವರೆಗೆ ಬರೋಬ್ಬರಿ 4.5 ಲಕ್ಷ ಮಾರಾಟ

ಕಿಯಾ ಜಾಗತಿಕವಾಗಿ ಜನಪ್ರಿಯವಾಗಿರುವ ದಕ್ಷಿಣ ಕೊರಿಯಾದ ಕಾರು ಕಂಪನಿಯಾಗಿದೆ. ಸೆಲ್ಟೋಸ್ ಮೂಲಕ 2019 ರಲ್ಲಿ ಭಾರತವನ್ನು ಪ್ರವೇಶಿಸಿದ ಕಿಯಾ ಸೆಪ್ಟೆಂಬರ್ 2020 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸೋನೆಟ್ ಎಂಬ ಗೇಮ್ ಚೇಂಜರ್ ಕಾರನ್ನು ಬಿಡುಗಡೆ ಮಾಡಿತು. ಭಾರತದಲ್ಲಿ ಕಿಯಾ ಸೋನೆಟ್ ಬಿಡುಗಡೆಯಾದ 4 ವರ್ಷಗಳ ನಂತರ ಸೆಪ್ಟೆಂಬರ್ 18 ರಂದು, ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಸೋನೆಟ್ ಕಾರುಗಳ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ನಾವು ನೋಡಲಿದ್ದೇವೆ.

ಸೆಲ್ಟೋಸ್ ಕಿಯಾ ಕಂಪನಿಯ ಅತ್ಯಂತ ಯಶಸ್ವಿ ಕಾರು ಎಂಬುದರಲ್ಲಿ ಸಂದೇಹವಿಲ್ಲ. ಅದಕ್ಕಾಗಿಯೇ ಕಿಯಾ ಭಾರತದಲ್ಲಿ ಸೆಲ್ಟೋಸ್ ಅನ್ನು ಮೊದಲ ಕಾರು ಎಂದು ಬಿಡುಗಡೆ ಮಾಡಿದ್ದು. ಸೆಲ್ಟೋಸ್ ನಂತರ, ಕಿಯಾ 2020 ರಲ್ಲಿ 2 ಕಾರುಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಒಂದು ಸೋನೆಟ್ (Kia Sonet).

Kia Sonet Achieves Milestone of 4 5 Lakh Sales in Four Years

ನಾಲ್ಕು ವರ್ಷಗಳ ಹಿಂದೆ ಸೆಪ್ಟೆಂಬರ್ 18 ರಂದು ಬಿಡುಗಡೆಯಾದ KIA ಇಂಡಿಯಾದ ಮೊದಲ ಕಾಂಪ್ಯಾಕ್ಟ್ SUV ಸೋನೆಟ್, ಆಗಸ್ಟ್ ಅಂತ್ಯದವರೆಗೆ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ 4,49,812 ಯುನಿಟ್‌ಗಳ ಭರ್ಜರಿ ಮಾರಾಟವನ್ನು ಸಾಧಿಸಿದೆ. SIAM ನ ಸಗಟು ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 3,57,743 ಸೋನೆಟ್‌ಗಳನ್ನು ಮಾರಾಟ ಮಾಡಲಾಗಿದ್ದು, 92,069 ರಫ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸೆಲ್ಟೋಸ್ ಮಧ್ಯಮ ಗಾತ್ರದ ಎಸ್‌ಯುವಿ ಜೊತೆಗೆ ಸೋನೆಟ್ ಮತ್ತು ಇತ್ತೀಚೆಗೆ ಕ್ಯಾರೆನ್ಸ್ ಎಂಪಿವಿ, ದೇಶದ ಯುಟಿಲಿಟಿ ವೆಹಿಕಲ್ಸ್ ಕ್ಷೇತ್ರದಲ್ಲಿ ಕಿಯಾ ಇಂಡಿಯಾದ ಪ್ರಬಲ ಅಸ್ತಿತ್ವವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಕಿಯಾ ಸೊನೆಟ್‌ ಕಾರಿನ ಕುರಿತಾಗಿ ಕೇಳದವರು ಕಮ್ಮಿಯೇ ಸರಿ. ಕಡಿಮೆ ಬೆಲೆಗೆ ಒಂದು ಎಸ್‌ಯುವಿ ಬೇಕು ಎಂದುಕೊಳ್ಳುಉವರಿಗೆ ಕಿಯಾ ಸೊನೆಟ್‌ ಪರ್ಫೆಕ್ಟ್‌ ಆಯ್ಕೆ.

Kia Sonet Achieves Milestone of 4 5 Lakh Sales in Four Years

ಮೊದಲಿಗೆ ಕಿಯಾ ಸೋನೆಟ್‌ ಕಾರಿನ ಎಕ್ಸ್‌ ಶೋರೂಮ್‌ ಬೆಲೆ ನೋಡುವುದಾದರೆ ಸುಮಾರು 7,99,000 ರೂಪಾಯಿಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್‌ ನೋಡುವುದಾದರೆ ಅದು ಸುಮಾರು 1,24,165 ಲಕ್ಷ ರೂಪಾಯಿಗಳಷ್ಟು ಬರುತ್ತದೆ. ಈ ಕಾರಿನ ಇನ್ಸ್ಯುರೆನ್ಸ್‌ ಸುಮಾರು 39,087 ರೂಗಳು. ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಕಿಯಾ ಸೋನೆಟ್‌‌ ಸುಮಾರು 9,65,414 ರೂಗಳಷ್ಟಾಗುತ್ತದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಕಿಯಾ ಸೋನೆಟ್ ಎಸ್‌ಯುವಿ, ರೂ.7.99 ಲಕ್ಷದಿಂದ ರೂ.15.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸ್‌ಟಿಇ, ಎಕ್ಸ್‌ಟಿಇ (ಒ), ಎಕ್ಸ್‌ಟಿಕೆ, ಎಕ್ಸ್‌ಟಿಕೆ (ಒ) ಎಕ್ಸ್‌ಟಿಕೆ ಪ್ಲಸ್ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್) ಹಾಗೂ ಪ್ಯೂಟರ್ ಆಲಿವ್, ಗ್ಲೇಸಿಯರ್ ವೈಟ್ ಪರ್ಲ್, ಕ್ಲಿಯರ್ ವೈಟ್ ಒಳಗೊಂಡಂತೆ ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ.

ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 120 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 172 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ 83 ಪಿಎಸ್ ಪವರ್ ಮತ್ತು 115 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

ಮತ್ತೊಂದು, 1.5-ಲೀಟರ್ ಎಂಜಿನ್ 116 ಪಿಎಸ್ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್, 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್ ಬಾಕ್ಸ್ ಅನ್ನು ಪಡೆದಿದೆ. ಪೆಟೋಲ್ ಮಾದರಿಗಳು 18.7 - 19.2 ಕೆಎಂಪಿಎಲ್, ಡೀಸೆಲ್ ರೂಪಾಂತರಗಳು 18.6 - 22.3 ಕೆಎಂಪಿಎಲ್ ಮೈಲೇಜ್ ಕೊಡುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, September 23, 2024, 13:13 [IST]
English summary
Kia sonet achieves milestone of 4 5 lakh sales in four years
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+