ರೋಡ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಕಿಯಾ ಹೊಸ ಕಾರು... ಶೀಘ್ರದಲ್ಲೆ ಬಿಡುಗಡೆ: ವಿಶೇಷತೆಗಳೇನು?
ಕಿಯಾ ಮೋಟಾರ್ಸ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕಾ ಕಂಪನಿಗಳಲ್ಲಿ ಒಂದಾಗಿದೆ. ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಹಾಗೂ ಭಾರತೀಯ ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡಿರುವ ಕಂಪನಿಯು ಉತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ಮತ್ತೊಂದು ಹೊಸ ಕಾರನ್ನು ಪರಿಚಯಿಸಲು ಸಜ್ಜಾಗಿದೆ. ಹೌದು ಕಿಯಾದಿಂದ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ರೋಡ್ ಟೆಸ್ಟ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಇದು ಕೆಲವು ಆಸಕ್ತಿದಾಯಕ ಇಂಟೀರಿಯರ್ ವಿನ್ಯಾಸದ ವಿವರಗಳನ್ನು ಬಹಿರಂಗಪಡಿಸಿದೆ. ಬ್ರಾಂಡ್ ಸಲ್ಲಿಸಿದ ಪೇಟೆಂಟ್ ಪ್ರಕಾರ, ಇದನ್ನು 'ಸೈರೋಸ್' ಎಂದು ಕರೆಯುವ ಸಾಧ್ಯತೆಯಿದೆ.
ಈ ಹಿಂದೆ ರೋಡ್‌ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾಗ ಕಾರಿನಲ್ಲಿ ಸನ್‌ರೂಫ್, ರೂಫ್ ರೈಲ್ ಮತ್ತು ಆಲ್-ಎಲ್ಇಡಿ ಲೈಟಿಂಗ್ ಜೊತೆಗೆ ಎಲ್ಇಡಿ ಡಿಆರ್‌ಎಲ್‌ಗಳು ಇದ್ದವು. ಜೊತೆಗೆ ಇದು ಡೈಮಂಡ್-ಕಟ್ ಅಲಾಯ್ ವೀಲ್‌ಗಳು, ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟ್‌ಗಳು, ಡ್ರೈವ್ ಮೋಡ್‌ಗಳು, ಟ್ರಾಕ್ಷನ್ ಮೋಡ್‌ಗಳು, ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಮತ್ತು ಬೋಸ್ ಆಡಿಯೊ ಸಿಸ್ಟಮ್ ಅನ್ನು ಸಹ ಹೊಂದಿರುವುದು ಸ್ಪಷ್ಟವಾಗಿತ್ತು.

ಇತ್ತೀಚೆಗೆ ರೋಡ್‌ಟೆಸ್ಟ್‌ನಲ್ಲಿ ಕಾಣಿಸಿಕೊಂಡಾಗ ಈ ಕಾರಿನ ವಿನ್ಯಾಸವು ಭಾರತದ ಇತರ ಯಾವುದೇ ಕಿಯಾ ಕಾರಿನಂತಿಲ್ಲ. ಬದಲಾಗಿ ಇದು ಈ ವರ್ಷದ ಆರಂಭದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಿದ ಕಿಯಾದ ಕೆ4 ಸೆಡಾನ್‌ನಂತೆ ಕಾಣುತ್ತದೆ. ಹೊಚ್ಚ ಹೊಸ 2-ಸ್ಪೋಕ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಸಹ ಹೊಂದಿದೆ. ಜೊತೆಗೆ ಇದು ಆಫ್‌ಸೆಟ್ ಕಿಯಾ ಎಂಬ್ಲಮ್ ಅನ್ನು ಸಹ ಹೊಂದಿದೆ.
ಒಳಾಂಗಣವು ಸೆಲ್ಟೋಸ್‌ನಲ್ಲಿ ನೀಡಲಾದಂತೆಯೇ ಡ್ಯುಯಲ್ ಡಿಸ್ ಪ್ಲೇ, 10.25-ಇಂಚಿನ ಟಚ್ ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯೊಂದಿಗೆ ಜೋಡಿಸಲ್ಪಟ್ಟಿದೆ. ಹೆಚ್ಚುವರಿಯಾಗಿ, ಕಾರು ಟಚ್ ಸ್ಕ್ರೀನ್ ಕೆಳಗೆ ಕೆಲವು ಬಟನ್‌ಗಳನ್ನು ಸಹ ಪಡೆದಿದೆ, ಇದರಲ್ಲಿ ವಾಲ್ಯೂಮ್ ಅನ್ನು ಸರಿಹೊಂದಿಸಲು ಸ್ಕ್ರಾಲ್ ಚಕ್ರವೂ ಇದೆ.

ಈ ಹೊಸ ಎಸ್‌ಯುವಿ ಬೆಲೆ ಹಾಗೂ ಅದರ ಫೀಚರ್ಸ್ ವಿಷಯದಲ್ಲಿ ಕಿಯಾ ಇಂಡಿಯಾ ಕಾರುಗಳ ಸಾಲಿನಲ್ಲಿ ಪ್ರಮುಖ ಮಾದರಿಗಳಾದ ಸೊನೆಟ್ ಮತ್ತು ಸೆಲ್ಟೋಸ್ ನಡುವೆ ಕುಳಿತುಕೊಳ್ಳುತ್ತದೆ. ಮುಂಬರುವ ಕೆಲವೇ ದಿನಗಳಲ್ಲಿ ಕಂಪನಿಯು ಈ ಹೊಸ ಕಾರಿನ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.
ನಾವು ಮೊದಲೇ ವರದಿ ಮಾಡಿದಂತೆ, ಸೈರೋಸ್ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್ ಟ್ರೇನ್‌ನಲ್ಲಿ ಲಭ್ಯವಾಗಲಿದೆ. ಪೆಟ್ರೋಲ್ ಚಾಲಿತ ಕಾರು ಬಿಡುಗಡೆಯಾದ ಸುಮಾರು ಆರು ತಿಂಗಳ ನಂತರ ಎಲೆಕ್ಟ್ರಿಕ್ ಆವೃತ್ತಿಯು ಬಿಡುಗಡೆಯಾಗುವ ನಿರೀಕ್ಷೆಯಿದೆ. ಎರಡೂ ಆವೃತ್ತಿಗಳು ಒಂದೇ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿವೆ, ಹೈಬ್ರಿಡ್ ಆವೃತ್ತಿಯನ್ನು ನಂತರ ಪರಿಚಯಿಸಬಹುದು.

ಮೂಲಗಳ ಪ್ರಕಾರ ಕಿಯಾ ಸೈರೋಸ್ ಪೆಟ್ರೋಲ್ ಆವೃತ್ತಿಯು ಈ ವರ್ಷದ ಕೊನೆಯಲ್ಲಿ ಪಾದಾರ್ಪಣೆ ಮಾಡಲಿದೆ. ಮುಂದಿನ ವರ್ಷದ ಆರಂಭದಲ್ಲಿ ಮಾರಾಟವಾಗಲಿದೆ. ಇದರ ಇವಿ ಆವೃತ್ತಿಯು 2025ರ ಮಧ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ 8 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆ ಹೊಂದಿರುವ ಸೊನೆಟ್‌ಗಿಂತ ಸ್ವಲ್ಪ ಪ್ರೀಮಿಯಂ ಆಗಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








