ಹೊಸ ಕಿಯಾ ಸೈರಸ್ ಇಂಟೀರಿಯರ್ ಬಹಿರಂಗ: ಶೀಘ್ರ ಬಿಡುಗಡೆ... ಪ್ರತಿಸ್ಪರ್ಧಿಗಳಲ್ಲಿ ನಡುಕ!

ಸೊನೆಟ್ ನಂತರ ಕಂಪನಿಯ 2ನೇ ಸಬ್ 4 ಮೀ. ಎಸ್‌ಯುವಿಯಾಗಿ ಕಿಯಾ ಸೈರಸ್ ಅನ್ನು ಭಾರತದಲ್ಲಿ ಅನಾವರಣಗೊಳಿಸಲಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದು ಸೊನೆಟ್ ಸಬ್ 4 ಮೀ ಎಸ್ ಯುವಿಗಿಂತ ಮೇಲೆ ಹಾಗೂ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿಗಿಂತ ಕೆಳಗಿರಲಿದೆ. ಒಟ್ಟಾರೆ ಕಿಯಾ ಸೈರಸ್ ಆಕರ್ಷಕ ವೈಶಿಷ್ಟ್ಯಗಳೊಂದಿಗೆ, ಬಜೆಟ್ ಬೆಲೆಯಲ್ಲಿ ಗ್ರಾಹರಕನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಈ ಹೊಸ ಎಸ್‌ಯುವಿಯ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸಲು ಕಂಪನಿಯು ಈಗ ಮತ್ತೊಂದು ಟೀಸರ್ ಹೊರಬಿಟ್ಟಿದ್ದು, ಫೀಚರ್ಸ್ ಅನ್ನು ಬಹಿರಂಗಪಡಿಸಿದೆ.

ಮಕ್ಕಳೊಂದಿಗೆ ಜಾಹೀರಾತನ್ನು ಮಾಡುವುದು ಇಂದಿನ ಮಾರ್ಕೆಟಿಂಗ್ ಜಗತ್ತಿನಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳ ಹೊಸ ಟ್ರಿಕ್ ಆಗಿದೆ. ಇದೀಗ ಕಿಯಾ ಕೂಡ ಅದೇ ತಂತ್ರದೊಂದಿಗೆ ಮಗುವಿನ ಜೊತೆ ಹೊಸ ಟೀಸರ್ ಮಾಡಿ ಬಿಡುಗಡೆ ಮಾಡಿದೆ. ಇದರಲ್ಲಿ ಫ್ರಾಸ್ಟ್ ಬ್ಲೂ ಬಣ್ಣದ ಸೈರಸ್ ಎಸ್‌ಯುವಿಯನ್ನು ತೋರಿಸಲಾಗಿದೆ. ಸಬ್ 4 ಮೀ. ಎಸ್‌ಯುವಿಯಾಗಿದ್ದರೂ, ಪುಟ್ಟ ಹುಡುಗಿಗೆ ಹೋಲಿಸಿದರೆ ದೊಡ್ಡ ಗಾತ್ರದ ವಾಹನವೆಂದು ತೋರಿಸಲು ವೀಡಿಯೊವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ.

kia-syros-new-tvc-launched-interior-and-features-revealed

ಹೈ-ಸೆಟ್ ಬಾನೆಟ್, ದೊಡ್ಡ 17-ಇಂಚಿನ ವೀಲ್‌ಗಳು, ಬಾಕ್ಸಿ ವಿನ್ಯಾಸ ಮತ್ತು ರೂಫ್ ರೈಲ್‌ಗಳು ಹೊಸ ಸೈರಸ್ ಎಸ್‌ಯುವಿ ವಿನ್ಯಾಸವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ. ಜೊತೆಗೆ ಡಿಜಿಟಲ್ ಟೈಗರ್ ನೋಸ್ ಗ್ರಿಲ್, ದುಂಡು ಕಮಾನುಗಳೊಂದಿಗೆ ಸ್ಕ್ವೇರಿಶ್ ವೀಲ್ ಆರ್ಚ್ ಕ್ಲಾಡಿಂಗ್, ಆಕರ್ಷಕ ಹೆಡ್‌ಲೈಟ್‌ಗಳು ಮತ್ತು ಟೈಲ್ ಲೈಟ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು ಆಕರ್ಷಣೆಯನ್ನು ಹೆಚ್ಚಿಸಿವೆ.

ಇಂಟೀರಿಯರ್ ಬಹಿರಂಗ: ಟೀಸರ್‌ನಲ್ಲಿ ಕಿಯಾ ಸೈರಸ್‌ನ ಒಳಾಂಗಣವನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಎಎಸ್ಎಂಆರ್ ಶೈಲಿಯ ತುಣುಕಿನಿಂದ ಪ್ರದರ್ಶಿಸಲಾದ ಉತ್ತಮ ವಸ್ತುಗಳ ಆಯ್ಕೆಯನ್ನು ನಾವು ಇದರಲ್ಲಿ ನೋಡಬಹುದು. ಸೈರಸ್‌ನಲ್ಲಿ ಈಗ ಆಫ್-ಸೆಂಟರ್ ಕಿಯಾ ಲೋಗೋದೊಂದಿಗೆ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್ ಜೊತೆಗೆ ಬರುತ್ತದೆ. ರಾಡಾರ್ ಆಧಾರಿತ ಲೆವೆಲ್ -2 ADAS ಕೂಡ ಇದೆ.

kia-syros-new-tvc-launched-interior-and-features-revealed

ಕ್ಲೈಮೆಟ್ ಕಂಟ್ರೋಲ್‌ಗಾಗಿ ಮಧ್ಯದಲ್ಲಿ 5-ಇಂಚಿನ ಟಚ್ಸ್ಕ್ರೀನ್, 12.3-ಇಂಚಿನ ನಾನ್-ಟಚ್ ಪ್ಯಾನಲ್ ಡ್ರೈವರ್‌ ಡಿಸ್ಪ್ಲೆ, ಮೂರು ಡಿಸ್ಪ್ಲೇಗಳ ಒಕ್ಕೂಟವಾದ ಫ್ರೀ-ಸ್ಟ್ಯಾಂಡಿಂಗ್ 30-ಇಂಚಿನ ಟ್ರಿನಿಟಿ ಡಿಸ್ಪ್ಲೇ ನೀಡಲಾಗಿದೆ, ಇನ್ಫೋಟೈನ್‌ಮೆಂಟ್‌ಗಾಗಿ 12.3-ಇಂಚಿನ ಟಚ್ಸ್ಕ್ರೀನ್, ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ನೀಡಲಾಗಿದೆ.

ಪವರ್ಡ್ ಡ್ರೈವರ್ ಸೀಟ್, ಫ್ರಂಟ್‌ ಮತ್ತು ಬ್ಯಾಕ್‌ನಲ್ಲಿ ವೆಂಟಿಲೇಟೆಡ್ ಸೀಟ್‌, ಹಾಗೆಯೇ ಹಿಂಭಾಗದ ಸೀಟುಗಳನ್ನು 60:40 ಅನುಪಾತದಲ್ಲಿ ವಿಭಜಿಸಬಹುದಾಗಿದೆ. ಬೂಟ್‌ನಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ನೀಡಲಾಗಿದೆ, ಏರ್ ಪ್ಯೂರಿಫೈಯರ್, ಹಿಂಭಾಗದ ವಿಂಡೋ ಶೇಡ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಹಿಂಭಾಗದ ಎಸಿ ವೆಂಟ್‌ಗಳು ಒಳಭಾಗದಲ್ಲಿರುವ ಇತರ ಗಮನಾರ್ಹ ವೈಶಿಷ್ಟ್ಯಗಳಾಗಿವೆ.

kia-syros-new-tvc-launched-interior-and-features-revealed

ಎಂಜಿನ್‌: ಕಿಯಾ ಸೈರಸ್ 1.5 ಲೀಟರ್ 4-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಹಾಗೂ 1.0 ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಸೈರೋಸ್ ಟರ್ಬೊ ಪೆಟ್ರೋಲ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದ ಕಂಪನಿಯ ಮೊದಲ ವಾಹನವಾಗಿದೆ. ಆಟೋಮ್ಯಾಟಿಕ್‌ಗೆ ಸಂಬಂಧಿಸಿದಂತೆ, ಪೆಟ್ರೋಲ್ 7-ಸ್ಪೀಡ್ ಡಿಸಿಟಿ ಮತ್ತು ಡೀಸೆಲ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 26, 2024, 13:40 [IST]
English summary
Kia syros new tvc launched interior and features revealed
Read more on kia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+