ಕಿಯಾ ಸೈರಸ್ vs ಸ್ಕೋಡಾ ಕೈಲಾಕ್: 10 ಲಕ್ಷವಿದ್ದರೆ ಈ ಪ್ರೀಮಿಯಂ ಕಾರುಗಳನ್ನು ಖರೀದಿಸಬಹುದು!
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳೆಂದರೆ ಸಬ್-4 ಮೀಟರ್ ವಿಭಾಗದ ಕಾರುಗಳಾಗಿವೆ. ಈ ವಿಭಾಗದಲ್ಲಿ ಈಗಾಗಲೇ ಧೂಳೆಬ್ಬಿಸುವಂತಹ ಕಾರುಗಳು ಆಕ್ರಮಿಸಿಕೊಂಡಿವೆಯಾದ್ರೂ ಹೊಸ ಕಾರುಗಳ ಆಗಮನ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಪ್ರೀಮಿಯಂ ಬ್ರಾಂಡ್ ಆಗಿರುವ ಸ್ಕೋಡಾ ಕೂಡ ಹೊಸ ಕೈಲಾಕ್ (Skoda Kylaq) ಅನ್ನು ಈ ವಿಭಾಗದಲ್ಲಿ ಅಗ್ಗದ ಬೆಲೆಗೆ ಬಿಡುಗಡೆ ಮಾಡಿ ಉತ್ತಮ ಬೇಡಿಕೆ ಪಡೆದುಕೊಂಡ ಬೆನ್ನಲ್ಲೇ, ಇದೀಗ ಕಿಯಾ ಹೊಸ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿಬಿಟ್ಟಿದೆ. ಹೌದು, ಕಿಯಾ ಸೈರಸ್ (kia syros) ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಶೀಘ್ರದಲ್ಲೆ ಬಿಡುಗಡೆಯಾಗಲಿದೆ.
ಸ್ಕೋಡಾ ಕೈಲಾಕ್ ಹಾಗೂ ಕಿಯಾ ಸೈರಸ್ ಭಾರತೀಯ ವಾಹನ ಮಾರುಕಟ್ಟೆಗೆ ಹೊಸ ಪ್ರವೇಶಗಳಾಗಿವೆ. ಆದರೆ ಸ್ಕೋಡಾ ಕೈಲಾಕ್ ಈಗಾಗಲೇ ಖರೀದಿಗೆ ಲಭ್ಯವಿದ್ದರೇ, ಜನವರಿ 3 ರಿಂದ ಕಿಯಾ ಸೈರಸ್ ಬುಕಿಂಗ್ ಪ್ರಾರಂಭವಾಗಲಿದೆ. ಈ ಎರಡೂ ವಾಹನಗಳ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಇಲ್ಲಿ ಹೋಲಿಸಿದ್ದೇವೆ. ನಿಮ್ಮ ಅಗತ್ಯಗಳಿಗೆ ಸೂಕ್ತವಾದದನ್ನು ಕಾರನ್ನು ಆಯ್ಕೆ ಮಾಡಲು ಈ ಲೇಖನ ಸಹಕರಿಸಬಹುದು.

ಬೆಲೆ: ಹೊಸ ಸ್ಕೋಡಾ ಕೈಲಾಕ್ ಕಾಂಪ್ಯಾಕ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.7.89 ಲಕ್ಷ (ಎಕ್ಸ್ ಶೋರೂಂ)ವಿದ್ದರೇ, ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 14.40 ಲಕ್ಷ (ಎಕ್ಸ್ ಶೋರೂಂ)ವಿದೆ. ಇತ್ತ ಕಿಯಾ ಸೈರಸ್‌ನ ಬೆಲೆಯನ್ನು ಇನ್ನು ಬಹಿರಂಗಪಡಿಸದಿದ್ದರೂ ನಿರೀಕ್ಷಿತ ಬೆಲೆ ಸುಮಾರು ರೂ.9 ಲಕ್ಷ ಆರಂಭಿಕ ಬೆಲೆಯೊಂದಿಗೆ 2025 ಜನವರಿ 17 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ಫೀಚರ್ಸ್: ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ 10 - ಇಂಚಿನ ಟಚ್‌ಸ್ಕ್ರೀನ್, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದ ಸೀಟ್ ವೆಂಟಿಲೇಶನ್‌ನಂತಹ ಫೀಚರ್ಸ್ ಇವೆ.

ಹೊಸ ಕಿಯಾ ಸೈರಸ್ ಎಸ್‌ಯು ಫೀಚರ್ಸ್ ವಿಷಯಕ್ಕೆ ಬಂದರೆ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡ್ರೈವರ್ಸ್ ಡಿಸ್‌ಪ್ಲೇಗಾಗಿ 12.3-ಇಂಚಿನ ಡುಯಲ್ ಸ್ಕ್ರೀನ್ ಸೆಟಪ್, ವೆಂಟಿಲೇಟೆಡ್ ಫ್ರಂಟ್ & ರೇರ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಡುಯಲ್-ಜೋನ್ ಎಸಿ, 4-ವೇ ಪವರ್ಡ್ ಡ್ರೈವರ್ ಸೀಟ್, ಆಂಬಿಯೆಂಟ್ ಲೈಟಿಂಗ್, ಅಪ್/ ಡೌನ್ ಪವರ್ ವಿಂಡೋಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಸುರಕ್ಷತಾ ಫೀಚರ್ಸ್: ಕಿಯಾ ಸೈರಸ್ ಎಸ್‌ಯುವಿಯಲ್ಲಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್ - 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಇತ್ತ ಸ್ಕೋಡಾ ಕೈಲಾಕ್ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ.

ಎಂಜಿನ್: ಸ್ಕೋಡಾ ಕೈಲಾಕ್ ಎಸ್‌ಯುವಿಯಲ್ಲಿ 1.0-ಲೀಟರ್ TSI ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, 115 bhp ಪವರ್ ಮತ್ತು 178 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
ಕಿಯಾ ಸೈರಸ್ ಎಸ್‌ಯುವಿ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಪಿಎಸ್ ಪವರ್ ಹಾಗೂ 172 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಮತ್ತೊಂದು 1.5-ಲೀಟರ್ ಡೀಸೆಲ್ ಎಂಜಿನ್, 116 ಪಿಎಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಎಂಟಿ ಹಾಗೂ 6-ಸ್ಪೀಡ್ ಎಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.


Click it and Unblock the Notifications