ಪುನೀತ್, ದರ್ಶನ್‌ಗೆ ಮಾತ್ರವಲ್ಲ ನೀವೂ ಕೂಡ ಖರೀದಿಸಬಹುದು ಈ ಲ್ಯಾಂರ್ಬೋಗಿನಿ ಕಾರು? EMI ಎಷ್ಟು?
ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಈ ನಡುವೆ ದರ್ಶನ್ ಅವರು ಈ ಹಿಂದೆ ಹೇಳಿದ ಮಾತು ಈಗ ವೈರಲ್ ಆಗಿದೆ. ರಾಜ್‌ಕುಮಾರ್ ಮಗನ ಬಳಿ ಮತ್ತು ತೂಗುದೀಪ ಶ್ರೀನಿವಾಸ್ ಮಗನ ಬಳಿ ಇರುವುದು ಇದೇ ಲ್ಯಾಂಬೋರ್ಗಿನಿ ಕಾರ್ ಎಂದು ಹೇಳಿದ್ರು. ಅಲ್ಲದೇ ಸುದ್ದಿವಾಹಿನಿ ನಿರೂಪಕರು ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿ ಟ್ರೆಂಡ್ ಆಗಿದೆ. ಈಗ ಹಲವರು ಈ ಲ್ಯಾಂಬೋಗಿನಿ ಉರುಸ್ ಕಾರಿನ ಬಗ್ಗೆ ತಿಳಿದುಕೊಳ್ಳಲು ಕುತೂಹಲರಾಗಿದ್ದಾರೆ. ಈ ಕಾರಿನ ಮಾದರಿಯ ಇಎಂಐ, ಆನ್ ರೋಡ್ ಬೆಲೆ ಮತ್ತು ಕಾರಿನ ಸಂಪೂರ್ಣ ಮಾಹಿತಿ ಮತ್ತು ಇತರ ವಿವರವನ್ನು ನೀಡುತ್ತೇವೆ.
ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿ ಆರಂಭಿಕೆ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4,18,00,000 ಆದರೆ ಆನ್ ರೋಡ್ ಬೆಲೆಯು ರೂ.5,22,10,771 ಆಗಿದೆ. ಈ ಎಸ್‍ಯುವಿ ಲೋ ವೆರಿಯೆಂಟ್ ಮಾದರಿಗೆ 9.8 % ಬಡ್ಡಿ ದರದಲ್ಲಿ ಐದು ವರ್ಷದ ಲೋನ್ ಮಾಡಿದರೆ ಪ್ರತಿ ತಿಂಗಳು ನೀವು 9,93,776 ಗಳಷ್ಟು ಇಎಂಐ ಪಾವತಿಸಬೇಕು. ಇನ್ನು ಈ ಲ್ಯಾಂಬೊರ್ಗಿನಿ ಉರುಸ್ ಕಾರಿನ ಡೌನ್ ಪೇಮೆಂಟ್ ರೂ.52,21,000 ಆಗಿದೆ.

ಈ ಲ್ಯಾಂಬೊರ್ಗಿನಿ ಉರುಸ್ (Lamborghini Urus) ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಲಕ್ಷುರಿ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಉರುಸ್ ಎಸ್‌ಯುವಿಯಲ್ಲಿ 4.0 ಲೀಟರ್, 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 641 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಪವರ್ ಫುಲ್ ಎಂಜಿನ್ ಆಗಿದೆ.
ಈ ಉರುಸ್ ಎಸ್‌ಯುವಿಯು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಎಸ್‍ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಭಾರತದಲ್ಲಿ ಹಲವು ಚಿತ್ರ ನಟರು ಹಾಗೂ ಉದ್ಯಮಿಗಳು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ. ಈ ಎಸ್‌ಯುವಿಯು ಆಫ್-ರೋಡ್'ಗಾಗಿ ವಿಭಿನ್ನ ಚಾಲನಾ ವಿಧಾನಗಳನ್ನು ಹೊಂದಿದೆ. ಲ್ಯಾಂಬೊರ್ಗಿನಿ ಉರುಸ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂನ ಮೇಲೆ ನಿರ್ಮಾಣವಾಗಿದೆ.

ಈ ಪ್ಲಾಟ್‌ಫಾರಂನಲ್ಲಿಯೇ ಆಡಿ ಕ್ಯೂ 7 ಹಾಗೂ ಪೋರ್ಷೆ ಕೇನ್ ಕಾರುಗಳನ್ನು ನಿರ್ಮಿಸಲಾಗಿದೆ. ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯು ಸ್ಲಿಮ್ ಆದ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ. ಈ ಎಸ್‌ಯುವಿಯ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರಿನಿಂದ ಸ್ಫೂರ್ತಿ ಪಡೆದಿದೆ. ಲ್ಯಾಂಬೊರ್ಗಿನಿ ಉರುಸ್ 21 ಇಂಚಿನ ಅಲಾಯ್ ವ್ಹೀಲ್'ಗಳನ್ನು ಹೊಂದಿದೆ.
ಈ ಎಸ್‌ಯುವಿಯಲ್ಲಿ 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್'ಗಳನ್ನು ಅಳವಡಿಸಬಹುದು. ಉರುಸ್, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ಕಾರ್ ಆಗಿದೆ. ಇನ್ನು ಉರುಸ್ ಪರ್ಲ್ ಕ್ಯಾಪ್ಸುಲ್ ಆವೃತ್ತಿಯಲ್ಲಿರುವ ಕ್ಲಾಡಿಂಗ್ ಗ್ಲೋಸಿ ಬ್ಲಾಕ್ ಬಣ್ಣವನ್ನು ಹೊಂದಿದ್ದರೆ ಸ್ಟ್ಯಾಂಡರ್ಡ್ ಮಾದರಿಯ ಉರುಸ್ ಮ್ಯಾಟ್ ಬ್ಲಾಕ್ ಬಣ್ಣದ ಕ್ಲಾಡಿಂಗ್ ಹೊಂದಿದೆ.

ಈ ಗ್ಲೋಸ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಲ್ಯಾಂಬೊರ್ಗಿನಿ ಕಂಪನಿಯ ಸ್ಟೈಲ್ ಪ್ಯಾಕೇಜ್‌ನ ಭಾಗವಾಗಿ ನೀಡಲಾಗುತ್ತದೆ. ಉರುಸ್ 440 ಎಂಎಂ ಮೂಲಕ ಅತಿದೊಡ್ಡ ಕಾರ್ಬನ್-ಸೆರಾಮಿಕ್ ಬ್ರೇಕ್ ರೋಟಾರ್‌ಗಳನ್ನು ಹೊಂದಿರುವ ಪ್ರಪಂಚದ ಏಕೈಕ ಉತ್ಪಾದನಾ ಕಾರು. ಈ ಬ್ರೇಕ್‌ಗಳು 305 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಈ ಎಸ್‌ಯುವಿಗೆ ನೆರವಾಗುತ್ತವೆ.
ಇನ್ನು ಲ್ಯಾಂಬೊರ್ಗಿನಿ ಉರಸ್ ಮಾದರಿಯು 305 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಉರುಸ್ ಎಸ್ ಅದರ ಪರ್ಫಾರ್ಮೆಂಟೆ ಸಹೋದರ ಮಾದರಿಗಿಂತ ಸ್ವಲ್ಪ ಚಿಕ್ಕದಾಗಿದೆ. ಈ ಉರುಸ್ ಎಸ್ ಎಸ್‍ಯುವಿಯು 5,112 ಎಂಎಂ ಉದ್ದ, 2,018 ಎಂಎಂ ಅಗಲ ಮತ್ತು 1,638 ಎಂಎಂಎತ್ತರವನ್ನು ಹೊಂದಿದೆ, ಇನ್ನು ಇದು ವ್ಹೀಲ್ ಬೇಸ್ 3,003 ಎಂಎಂ ಉದ್ದವಾಗಿದೆ.


Click it and Unblock the Notifications








