Mercedes ಆನೆಯನ್ನು ಹೊಡೆಯಲು Land Rover ಹೊಸ ಉಪಾಯ: ಈ ಕಾರಿನ ಪವರ್‌ಗೆ ಬೆಚ್ಚಿ ಬೀಳಲಿರುವ ಎದುರಾಳಿ!

ಲ್ಯಾಂಡ್ ರೋವರ್ ಮುಂದಿನ ವಾರ ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್‌ನಲ್ಲಿ ತನ್ನ ಸಾರ್ವಜನಿಕ ಚೊಚ್ಚಲ ಪ್ರವೇಶದ ಮೊದಲು ಹೊಸ ಡಿಫೆಂಡರ್ ಆಕ್ಟಾವನ್ನು ಅನಾವರಣಗೊಲೀಸಿದೆ. 4x4 ನ ಅತ್ಯಂತ ತೀವ್ರವಾದ, ಶಕ್ತಿಯುತ ಮತ್ತು ಸಮರ್ಥ ವೇರಿಯಂಟ್ ಆಗಿದ್ದು ಕೇವಲ 110 ಡಿಸೈನ್‌ ಶೈಲಿಯನ್ನು ಆಧರಿಸಿದೆ. ಲ್ಯಾಂಡ್ ರೋವರ್ ಭಾರತದಲ್ಲಿ ಡಿಫೆಂಡರ್ ಆಕ್ಟಾದ ಬೆಲೆಗಳನ್ನು 2.65 ಕೋಟಿ ರೂಪಾಯಿಗಳಿಂದ ಪ್ರಾರಂಭಿಸುತ್ತದೆ ಎಂದು ಬಹಿರಂಗಪಡಿಸಿದ್ದು, ಮೊದಲ ವರ್ಷದ ಉತ್ಪಾದನೆಯ ಮೂಲಕ ಲಭ್ಯವಾಗಲಿರುವ ಎಡಿಷನ್ ಒನ್ ಬೆಲೆ 2.85 ಕೋಟಿ ರೂ.ಗಳಿಂದ ಆರಂಭವಾಗಲಿದೆ.

ವಿಶೇಷ ಆವೃತ್ತಿಯ ಡಿಫೆಂಡರ್‌ಗಳಿಗೆಂದೇ ಈ ಹೊಸ ಆಕ್ಟಾ ಉಪ-ಬ್ರಾಂಡ್‌ ಅನ್ನು ಕಂಪನಿ ಆರಂಭಿಸಿದ್ದು, ಮೊದಲ ಮಾದರಿಯು ರೇಂಜ್ ರೋವರ್‌ನಂತೆಯೇ ಅದೇ 4.4-ಲೀಟರ್ BMW- ಪಡೆದ V8 ಎಂಜಿನ್‌ ನಿಂದ ಚಾಲಿತವಾಗಿದೆ. ಆದರೆ ಇದರ ವಿಶೇಷವೇನೆಂದರೆ ಇದನ್ನು ಮರ್ಸಿಡಿಸ್-AMG G63 ಗೆ ಪ್ರತಿಸ್ಪರ್ಧಿಯಾಗಿ 635hp ಮತ್ತು 750Nm ವರೆಗೆ ಪವರ್‌ ಅನ್ನು ಹೆಚ್ಚಿಸಲಾಗಿದೆ . ಇದು 2510kg Sತೂಕ ಹೊಂದಿದ್ದು 0-96kph ವೇಗವನ್ನು 3.8 ಸೆಕೆಂಡ್‌ನಲ್ಲಿ ಮತ್ತು 250kph ಗರಿಷ್ಠ ವೇಗವನ್ನು ಪಡೆಯುತ್ತದೆ.

Land Rover Defender Octa

ಅದ್ಭುತ ಆನ್-ರೋಡ್ ಕಾರ್ಯಕ್ಷಮತೆಯ ಹೊರತಾಗಿಯೂ, ಇಲ್ಲಿಯವರೆಗಿನ ಯಾವುದೇ ಲ್ಯಾಂಡ್ ರೋವರ್‌ಗಿಂತ ಹೆಚ್ಚಿನ ಮಟ್ಟದ ಆಫ್-ರೋಡ್ ಸಾಮರ್ಥ್ಯವನ್ನು ಒದಗಿಸುವಲ್ಲಿ ಆಕ್ಟಾಗೆ ಹೆಚ್ಚಿನ ಗಮನ ನೀಡಲಾಗಿದೆ. ಹಾಗಾಗಿ ಈ ವಾಹನ ಅದ್ಬುತವಾದ ಆಫ್‌ರೋಡ್‌ ಅನುಭವವನ್ನು ಪ್ರಯಾಣಿಕರಿಗೆ ನೀಡುವುರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ವಾಸ್ತವದ ವಿಷಯ.

ಲ್ಯಾಂಡ್ ರೋವರ್‌ನ (Land Rover) ಪ್ರಸಿದ್ದ ಕಾರುಗಳಲ್ಲಿ ಪ್ರಮುಖವಾದ ಕಾರು ಈ ಡಿಫೆಂಡರ್. ಕೆಲ ದಿನಗಳ ಹಿಂದೆಯಷ್ಟೇ ಭಾರತ ಕ್ರಿಕೆಟ್‌ ತಂಡದ ಆಟಗಾರ ರಿಷಭ್‌ ಪಂತ್‌ ಸಹ ಖರೀದಿ ಮಾಡಡಿದ್ದರು. ಲ್ಯಾಂಡ್‌ ರೋವರ್‌ ಡಿಫೆಂಡರ್‌ ಭಾರತದ ನೆಚ್ಚಿನ ಸೆಲೆಬ್ರಿಟಿ ಕಾರೆಂದರೂ ಅದು ಅತಿಶಯೋಕ್ತಿಯಾಗಲಾರದು ಎಂಬುದು ನಮ್ಮ ಅಭಿಪ್ರಾಯ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿರುವ ಲ್ಯಾಂಡ್‌ ರೋವರ್‌ ಡಿಫೆಂಡರ್‌ ಬಗ್ಗೆ ನೋಡೋಣ.

Land Rover Defender Octa Defender Octa

ತೀವ್ರವಾದ ಆಫ್-ರೋಡಿಂಗ್ ಅಡ್ವೆಂಚರ್ ಗಳಿಗಾಗಿ ತ್ವರಿತವಾಗಿ ಭಾರತೀಯ ಮತ್ತು ವಿದೇಶಿ ಚಾಲಕರಲ್ಲಿ ಅಚ್ಚುಮೆಚ್ಚಿನಾಗಿದೆ. ಈ ವರ್ಷದ ಆರಂಭದಲ್ಲಿ, ಬ್ರಿಟಿಷ್ ಐಷಾರಾಮಿ ಕಾರು ತಯಾರಕರು ಮಾದರಿಗೆ ಹೊಸ ಎಂಜಿನ್ ಆಯ್ಕೆಗಳನ್ನು ಸೇರಿಸಿದರು ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ 110 ಈಗ ಐದು ಡೋರುಗಳು ಮತ್ತು 5+2 ಸೀಟ್ ಆಯ್ಕೆಯೊಂದಿಗೆ ಬರುತ್ತಿದೆ.

ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್‌ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಯುನಿಟ್ ನೀಡಲಾಗಿದೆ. ಬಂಪರ್ ಕೆಳಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ. ಡಿಫೆಂಡರ್ ಎಸ್‌ಯುವಿಯಲ್ಲಿ ದೊಡ್ಡ ಬಂಪರ್ ನೀಡಲಾಗಿದೆ.ಬಾನೆಟ್‌ನಲ್ಲಿರುವ ರೇಖೆಗಳು ಹಾಗೂ ಕ್ರೀಸ್‌ಗಳು ಈ ಎಸ್‌ಯುವಿಗೆ ಹೆಚ್ಚು ಸ್ಟಾನ್ಸ್ ನೀಡುತ್ತವೆ.

Land Rover Defender Octa Defender Octa

ಸದ್ಯಕ್ಕೆ ಭಾರತದಲ್ಲಿರುವಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸುಮಾರು 300 ಬಿ‌ಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 3.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 298 ಬಿಹೆಚ್‌ಪಿ ಪವರ್ ಹಾಗೂ 1500 - 2500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 3, 2024, 17:21 [IST]
English summary
Land rover unveils the defender octa pricing in india starts at rs 2 65 crore
Read more on land rover india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+