ರಸ್ತೆ ಮೇಲಿನ ಅರಮನೆ: ಭಾರತದಲ್ಲಿ ಈ ಐಷಾರಾಮಿ ಕಾರು ಖರೀದಿಗೆ ಮುಗಿಬಿದ್ದಿ ಶ್ರೀಮಂತರು!
ಜನಪ್ರಿಯ ಕಾರು ತಯಾರಕ ಕಂಪನಿಯಾದ ಲೆಕ್ಸಸ್ ಇಂಡಿಯಾ ಅಧಿಕೃತವಾಗಿ ತನ್ನ ಐಷಾರಾಮಿ ಎಂಯುವಿ ಲೆಕ್ಸಸ್ LM 350h (Lexus LM 350h) ಮಾದರಿಯ 2023ರ ಮಾರ್ಚ್ ತಿಂಗಳಿನಲ್ಲೇ ಬೆಲೆಗಳನ್ನು ಮೊದಲು ಘೋಷಿಸಲಾಗಿದ್ದರೂ, ಒಂದು ವರ್ಷದ ನಂತರ ಅಧಿಕೃತ ವಿತರಣೆಗಳು ಪ್ರಾರಂಭಿಸಿದ್ದರು. ಇದೀಗ ಲೆಕ್ಸಸ್ ಇಂಡಿಯಾ ಹೊಸ ಅಪ್ಡೇಟ್ ಅನ್ನು ನೀಡಿದೆ. ಲೆಕ್ಸಸ್ ಇಂಡಿಯಾ ದೇಶದಲ್ಲಿ ತನ್ನ LM 350h ಐಷಾರಾಮಿ ಎಂಪಿವಿಗಾಗಿ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಹೊಸ ಲೆಕ್ಸಸ್ LM 350h ಮಾದರಿಗೆ ಭಾರೀ ಬೇಡಿಕೆಯನ್ನು ಹೊಂದಿದೆ.
ಮೊದಲ ತಿಂಗಳೊಳಗೆ ತ್ವರಿತವಾಗಿ 100 ಲೆಕ್ಸಸ್ LM 350h ಕಾರುಗಳನ್ನು ವಿತರಣೆ ಮಾಡಿದ್ದರು. ಆದರೆ ಲೆಕ್ಸಸ್ LM 350h ಮಾದರಿಗಳಿಗೆ ಬುಕ್ಕಿಂಗ್ ಅನುಗುಣವಾಗಿ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲವೆಂಬ ಕಾರಣಕ್ಕೆ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬುಕಿಂಗ್ ಅನ್ನು ಶೀಘ್ರವಾಗಿ ಪುನರಾರಂಭಿಸಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ಕಂಪನಿ ಹೇಳಿದೆ.

ಈ ಲೆಕ್ಸಸ್ LM 350h (Lexus LM 350h) ಸಂಪೂರ್ಣವಾಗಿ ಬಿಲ್ಟ್-ಅಪ್ (CBU) ವಾಹನವಾಗಿ ಭಾರತಕ್ಕೆ ಬಂದಿದೆ. ಈ ಹೊಸ ಲೆಕ್ಸಸ್ LM ಮಿನಿವ್ಯಾನ್ ಎರಡೂ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದರಲ್ಲಿ 7-ಸೀಟರ್ VIP ರೂಪಾಂತರ ಬೆಲೆಯು ರೂ. 2 ಕೋಟಿಯಾಗಿದ್ದರೆ, 4-ಸೀಟರ್ ಅಲ್ಟ್ರಾ ಲಕ್ಸುರಿ ರೂಪಾಂತರದ ಬೆಲೆಯು ರೂ. 2.50 ಕೋಟಿಯಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
ಎರಡೂ ರೂಪಾಂತರಗಳು ಒಂದೇ 2.5-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ. ಈ ಪವರ್‌ಟ್ರೇನ್ 190 bhp ಮತ್ತು 240 Nm ಟಾರ್ಕ್‌ನ ಸಂಯೋಜಿತ ಉತ್ಪಾದನೆಯನ್ನು ನೀಡುತ್ತದೆ, ಆದರೆ ಆಟೋಮ್ಯಾಟಿಕ್ ರಂತರ ವೇರಿಯಬಲ್ ಟ್ರಾನ್ಸ್‌ಮಿಷನ್ (CVT) ಗೆ ಜೋಡಿಸಲಾಗಿದೆ. ಕಂಪನಿಯು 19.28 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ.

ಇನ್ನು ಫುಲ್ ಟ್ಯಾಂಕ್‌ನಲ್ಲಿ ಈ ಕಾರು 1200 km ಗಿಂತಲೂ ಹೆಚ್ಚು ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹೊಸ ಲೆಕ್ಸಸ್ LM ಮಿನಿವ್ಯಾನ್ ಅನ್ನು ಉತ್ತಮ ಏರೋಡೈನಾಮಿಕ್ಸ್‌ಗಾಗಿ ವಿನ್ಯಾಸದಲ್ಲಿ ಹೊಸ ನವೀಕರಣಗಳನ್ನು ಮಾಡಲಾಗಿದೆ. ಹೊಸ ವಿನ್ಯಾಸದಲ್ಲಿರುವ ಹೊರಭಾಗಗಳು ಹೊಸ ಸ್ಪಿಂಡಲ್ ಬಾಡಿ ಫ್ರಂಟ್ ಗ್ರಿಲ್ ವಿನ್ಯಾಸ ಮತ್ತು ಕ್ರೋಮ್ ಅಸ್ಸೆಂಟ್ ಗಳನ್ನು ಸೊಗಸಾಗಿ ವಿನ್ಯಾಸಗೊಳಿಸಲಾಗಿದೆ.
ಇನ್ನು ಈ ಮಿನಿವ್ಯಾನ್ ಒಳಭಾಗವು ಐಷಾರಾಮಿಯಾಗಿದೆ. ಈ ಐಷಾರಾಮಿ ಮಿನಿವ್ಯಾನ್ ಮಾದರಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ ರೆಫ್ರಿಜರೇಟರ್, ಸ್ಟೋರೇಜ್ ವಿಭಾಗಗಳು, ಹಿಟೆಡ್ ಆರ್ಮ್ ರೆಸ್ಟ್‌ಗಳು ಮತ್ತು ಬಾಡಿಯ ಉಷ್ಣತೆಯನ್ನು ಪತ್ತೆಹಚ್ಚುವ ಮತ್ತು HVAC ಅನ್ನು ನಿಯಂತ್ರಿಸುವ ಸುಧಾರಿತ ತಾಪಮಾನ ಮತ್ತು ಕೂಲಿಂಗ್ ಸಿಸ್ಟಂ ಸಹ ಅದರ ಒಳಾಂಗಣದ ಒಂದು ಭಾಗವಾಗಿದೆ. ಈ ಹೊಸ ಲೆಕ್ಸಸ್ LM ಮಿನಿವ್ಯಾನ್ ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ.

ಈ ಲೆಕ್ಸಸ್ LM 5,125 mm ಉದ್ದ, 1,890 mm ಅಗಲ ಮತ್ತು 1,945 mm ಎತ್ತರವನ್ನು ಹೊಂದಿದೆ. ಇನ್ನು ಈ ಲೆಕ್ಸಸ್ ಮಿನಿವ್ಯಾನ್ 3,000 mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಹಿಂದಿನ Lexus LM ಮಿನಿವ್ಯಾನ್ ಮಾದರಿಗೆ ಹೋಲಿಸಿದರೆ, 85 mm ಉದ್ದ, 40 mm ಅಗಲ ಮತ್ತು 10 mm ಎತ್ತರವನ್ನು ಹೊಂದಿದೆ.
ಇನ್ನು ಇದು 17 ಇಂಚಿನ ಅಥವಾ 19 ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆದಿದೆ. ಸೂಕ್ಷ್ಮ ಪಿಸ್ಟನ್ ಸುಧಾರಿತ AVS ಸಸ್ಪೆಕ್ಷನ್ ಅನ್ನು ಹೊಂದಿದ್ದು, ಸುಗಮ ಸವಾರಿಯನ್ನು ನೀಡುವುದಲ್ಲದೆ ಕಾರಿನೊಳಗಿನ ಕಂಪನಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹೊಸ ಲೆಕ್ಸಸ್ LM ಸುರಕ್ಷತಾ ಫೀಚರ್ಸ್ ದೀರ್ಘ ಪಟ್ಟಿಯೊಂದಿಗೆ ಬರುತ್ತದೆ. ಇವುಗಳಲ್ಲಿ ಪ್ರೀ-ಕೊಲಿಷನ್ ವಾರ್ನಿಂಗ್, ಪ್ರಿ-ಕೊಲಿಶನ್ ಬ್ರೇಕ್ ಅಸಿಸ್ಟ್ ಮತ್ತು ಪ್ರಿ-ಕೊಲಿಶನ್ ಬ್ರೇಕಿಂಗ್ ಸೇರಿವೆ.


Click it and Unblock the Notifications








