ಮೇಡ್ ಇನ್ ಇಂಡಿಯಾ ರೇಂಜ್ ರೋವರ್ ಸ್ಪೋರ್ಟ್ ವಿತರಣೆ ಪ್ರಾರಂಭ

ರೇಂಜ್ ರೋವರ್ ಕಂಪನಿಯು, ಭಾರತದಲ್ಲಿ ಸ್ಥಳೀಯವಾಗಿ ತಯಾರಿಸಲಾದ ರೇಂಜ್ ರೋವರ್ ಸ್ಪೋರ್ಟ್‌ನ ವಿತರಣೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದೆ. ಹೊಸ ರೇಂಜ್ ರೋವರ್ ಸ್ಪೋರ್ಟ್ ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆ‌ಗಳಲ್ಲಿ ಲಭ್ಯವಿದೆ. ಇದರಲ್ಲಿ 3.0 ಲೀ. ಪೆಟ್ರೋಲ್ ಡೈನಾಮಿಕ್ SE ಟ್ರಿಮ್ ಮಾದರಿಯು 294 kW ಪವರ್ ಮತ್ತು 550 Nm ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ 3.0 ಲೀ. ಡೀಸೆಲ್ ಡೈನಾಮಿಕ್ SE ಟ್ರಿಮ್ ಮಾದರಿಯು, 258 kW ಪವರ್ ಮತ್ತು 700 Nm ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಮೇಡ್ ಇನ್ ಇಂಡಿಯಾ ರೇಂಜ್ ರೋವರ್ ಸ್ಪೋರ್ಟ್ (ಎಕ್ಸ್ ಶೋರೂಂ) ಬೆಲೆಯು ರೂ. 1.40 ಕೋಟಿ ಇದೆ. ಈ ಕಾರನ್ನು ಅತ್ಯಾಧುನಿಕ ಎಂಎಲ್ಎ-ಫ್ಲೆಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಹೆಚ್ಚಿನ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್ ನೀಡುತ್ತದೆ. ಸಮರ್ಥನೀಯ ರೇಂಜ್ ರೋವರ್ ಸ್ಪೋರ್ಟ್ ತನ್ನ ಸಣ್ಣ ಓವರ್‌ಹ್ಯಾಂಗ್‌ಗಳು, ದೊಡ್ಡ ವೀಲ್‌ಗಳು ಮತ್ತು ಬೃಹತ್ ಬಾಡಿ ಮೂಲಕ ಸಾಟಿಯಿಲ್ಲದ ರಸ್ತೆ ಉಪಸ್ಥಿತಿಯನ್ನು ಹೊಂದಿದೆ.

locally-made-range-rover-sport-deliveries-started-in-india

ಇದರ ಪ್ರಿ-ಎಂಪ್ಟಿವ್ ಏರ್ ಸಸ್ಪೆನ್ಷನ್ ಮತ್ತು ಅಡಾಪ್ಟಿವ್ ಆಫ್-ರೋಡ್ ಕ್ರೂಸ್ ಕಂಟ್ರೋಲ್ ಮುಂತಾದ ಅಂಶಗಳು ಒಟ್ಟಾರೆಯಾಗಿ ಆಲ್-ರೌಂಡ್ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇದು ಭಾರತೀಯ ಮಾರುಕಟ್ಟೆಗೆ ನಮ್ಮ ಬದ್ಧತೆಗೆ ಸಾಕ್ಷಿಯಾಗಿದ್ದು, ಅತ್ಯಂತ ವಿವೇಚನಾಶೀಲ ಗ್ರಾಹಕರಿಗೆ ವಿಶ್ವ ದರ್ಜೆಯ ಐಷಾರಾಮಿ ವಾಹನಗಳನ್ನು ನೀಡುವ ನಮ್ಮ ನಿರಂತರ ಪ್ರಯತ್ನವಾಗಿದೆ ಎಂದು ಕಂಪನಿ ಹೇಳಿದೆ.

ಹೊಸ ರೇಂಜ್ ರೋವರ್ ಸ್ಪೋರ್ಟ್‌ನ ಇಂಟೀರಿಯರ್ ಅತ್ಯಾಧುನಿಕವಾಗಿದೆ, ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಸಂಯೋಜಿತ ತಂತ್ರಜ್ಞಾನ ಮತ್ತು ಅಸಾಧಾರಣ ಮಟ್ಟದ ಸೌಕರ್ಯವನ್ನು ಪ್ರಯಾಣಿಕರು ಆನಂದಿಸುತ್ತಾರೆ. ಅಡಾಪ್ಟಿವ್ ಫ್ರಂಟ್ ಲೈಟಿಂಗ್ ಅನ್ನು ಒಳಗೊಂಡಿರುವ ಹೊಸ ಡಿಜಿಟಲ್ LED ಹೆಡ್‌ಲೈಟ್‌ಗಳೊಂದಿಗೆ ಹೆಚ್ಚಿನ ಗೋಚರತೆಯನ್ನು ನೀಡಲಾಗಿದೆ.

locally made Range Rover Sport deliveries started in India

ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ ಇರಿಸಲಾದ 33.27 ಸೆಂ (13.1)ನ ಪಿವಿ ಪ್ರೊ ಇನ್ಫೋಟೈನ್‌ಮೆಂಟ್ ಹ್ಯಾಪ್ಟಿಕ್ ಫ್ಲೋಟಿಂಗ್ ಟಚ್‌ಸ್ಕ್ರೀನ್ ಹೆಚ್ಚಿನ ರೆಸಲ್ಯೂಶನ್ ಅನ್ನು ಹೊಂದಿದೆ. ಇದು ನ್ಯಾವಿಗೇಷನ್‌ನಿಂದ ಹಿಡಿದು ಮಾಧ್ಯಮ ಮತ್ತು ವಾಹನ ಸೆಟ್ಟಿಂಗ್‌ಗಳವರೆಗೆ ಎಲ್ಲವನ್ನೂ ನಿಯಂತ್ರಿಸುತ್ತದೆ. ಇದು ಆನ್‌ಬೋರ್ಡ್ ಅನುಭವವನ್ನು ಬುದ್ಧಿವಂತಿಕೆಯಿಂದ ವೈಯಕ್ತೀಕರಿಸುತ್ತದೆ. ಹಾಗೆಯೇ ಇದರಲ್ಲಿ ಕ್ಯಾಬಿನ್ ಏರ್ ಪ್ಯೂರಿಫಿಕೇಶನ್ ಪ್ರೊ ಲಭ್ಯವಿದೆ.

ಡೆಲಿವರಿಗಳ ಕುರಿತು ಪ್ರತಿಕ್ರಿಯಿಸಿದ, JLR ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ರಾಜನ್, "ನಾವು ಸ್ಥಳೀಯವಾಗಿ ತಯಾರಿಸಿದ ರೇಂಜ್ ರೋವರ್ ಸ್ಪೋರ್ಟ್‌ನ ವಿತರಣೆಯು ನಮಗೆ ಮಹತ್ವದ ಮೈಲಿಗಲ್ಲಾಗಿದೆ. ಇದರೊಂದಿಗೆ, ಸಂಪೂರ್ಣ ರೇಂಜ್ ರೋವರ್ ಪೋರ್ಟ್‌ಫೋಲಿಯೊವನ್ನು ಈಗ ಭಾರತದಲ್ಲಿ ತಯಾರಿಸಲಾಗುತ್ತದೆ. ಸ್ಥಳೀಯ ಉತ್ಪಾದನಾ ಹೆಜ್ಜೆಗುರುತು ಪೋರ್ಟ್‌ಫೋಲಿಯೊದಲ್ಲಿ ಆರು ವಾಹನಗಳಿಗೆ ವಿಸ್ತರಿಸುತ್ತದೆ ಎಂದರು.

locally made Range Rover Sport deliveries started in India

ಭಾರತವು ವಿಶ್ವ ಆಟೋ ಉದ್ಯಮದಲ್ಲಿ ಅಮೆರಿಕಾ, ಜಪಾನ್, ಚೀನಾ ದೇಶಗಳ ನಂತರ ಪ್ರಸ್ತುತ ಪ್ರಮುಖ ಆಟಗಾರನಾಗಿ ಮುಂದುವರಿಯುತ್ತಿದೆ. ಭಾರತದಲ್ಲಿ ತಿಂಗಳಿಗೆ ಅಸಂಖ್ಯಾತ ವಾಹನಗಳ ಮಾರಾಟದೊಂದಿಗೆ ವಿಶ್ವ ವಾಹನ ತಯಾರಕರನ್ನು ಕೈಬೀಸಿ ಕರೆಯುತ್ತಿದೆ. ಸದ್ಯ ವಿಶ್ವ ದೇಶಗಳ ಐಷಾರಾಮಿ ವಾಹನ ತಯಾರಕರು ಸ್ಥಳೀಯವಾಗಿ ವಾಹನಗಳನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, August 13, 2024, 15:35 [IST]
English summary
Locally made range rover sport deliveries started in india
Read more on range rover india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+