ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ

ಅತಿದೊಡ್ಡ ಟ್ರ್ಯಾಕ್ಟರ್ ತಯಾರಕರಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ಟ್ರ್ಯಾಕ್ಟರ್ಸ್ ಕಂಪನಿಯು ಮಾರ್ಚ್ 2024ರಲ್ಲಿನ ರಫ್ತುಗಳನ್ನು ಒಳಗೊಂಡಂತೆ 40 ಲಕ್ಷ ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಮಹೀಂದ್ರಾದ ಹೊಸ ಜನ್ ಯುವೋ ಟೆಕ್ ಪ್ಲಸ್ ಈ ಮೈಲಿಗಲ್ಲನ್ನು ಸಾಧಿಸಿದೆ ಎಂದು ಕಂಪನಿ ತಿಳಿಸಿದೆ.

ಮಹೀಂದ್ರಾ ಟ್ರ್ಯಾಕ್ಟರ್ಸ್ 1963ರಲ್ಲಿ ಅಮೆರಿಕಾದ ಇಂಟರ್ ನ್ಯಾಷನಲ್ ಹಾರ್ವೆಸ್ಟರ್ ಇಂಕ್ ಜೊತೆಗಿನ ಪಾಲುದಾರಿಕೆಯಲ್ಲಿ ಮೊದಲ ಟ್ರಾಕ್ಟರ್ ಬಿಡುಗಡೆ ಮಾಡಿತು. ಇದು 2004ರಲ್ಲಿ 1-ಮಿಲಿಯನ್ ಟ್ರ್ಯಾಕ್ಟರ್ ತಯಾರಿಕೆಯ ಗಡಿಯನ್ನು ಮುಟ್ಟಿತು. ಆನಂತರ 2009ರಲ್ಲಿ ವಿಶ್ವದ ಅತಿ ಹೆಚ್ಚು ಮಾರಾಟವಾದ ಫಾರ್ಮ್ ಟ್ರ್ಯಾಕ್ಟರ್ ತಯಾರಕ ಎಂಬ ಹೆಗ್ಗಳಿಕೆ ಪಡೆಯಿತು. ಇದಾದ 9 ವರ್ಷಗಳ ನಂತರ (2013ರಲ್ಲಿ) ಮಹೀಂದ್ರಾ ಟ್ರ್ಯಾಕ್ಟರ್ಸ್ 2-ಮಿಲಿಯನ್- ಟ್ರ್ಯಾಕ್ಟರ್‌ಗಳ ಮೈಲಿಗಲ್ಲನ್ನು ತಲುಪಿ, 2019ರಲ್ಲಿ 3-ಮಿಲಿಯನ್ ಗಡಿಯನ್ನು ತಲುಪಿತು. ಇದೀಗ ಕೇವಲ 5 ವರ್ಷಗಳಲ್ಲಿ (2024 ರಲ್ಲಿ) 40 ಲಕ್ಷ ಟ್ರ್ಯಾಕ್ಟರ್ ಮಾರಾಟದ ಗುರಿಯನ್ನು ಸಾಧಿಸಿದೆ.

mahindra-achieves-40-lakh-tractor-sales-milestone

ಈ 60 ವರ್ಷಗಳ ಕಾಲದಲ್ಲಿ ಮಹೀಂದ್ರಾ 390ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮಾಡೆಲ್‌ಗಳನ್ನು ಒದಗಿಸುತ್ತಾ ಬಂದಿದೆ. ಆ ಮೂಲಕ ತನ್ನ ವೈವಿಧ್ಯಮಯ ಶ್ರೇಣಿಯ ಕೊಡುಗೆಗಳನ್ನು ವಿಸ್ತರಿಸುತ್ತಲೇ ಬಂದಿದೆ. ಈ ಅವಧಿಯಲ್ಲಿ, ಮಹೀಂದ್ರಾ ಟ್ರ್ಯಾಕ್ಟರ್ಸ್ ಕಂಪನಿಯು ಭಾರತದಾದ್ಯಂತ 1,200ಕ್ಕೂ ಹೆಚ್ಚು ಡೀಲರ್ ಪಾಲುದಾರರ ದೃಢವಾದ ಜಾಲವನ್ನು ಸ್ಥಾಪಿಸಿರುವುದಾಗಿ ಮಹೀಂದ್ರಾ ತಿಳಿಸಿದೆ.

ಮಹೀಂದ್ರಾ ಟ್ರ್ಯಾಕ್ಟರ್' ಗ್ರಾಹಕರಿಗೆ ಮೊದಲು ಉತ್ಪನ್ನಗಳನ್ನು ಗಮನಿಸುವ ಅವಕಾಶ ಒದಗಿಸುತ್ತಿದ್ದು, ಆ ಮೂಲಕ 40 ಲಕ್ಷ ಮಹೀಂದ್ರಾ ಟ್ರ್ಯಾಕ್ಟರ್‌ಗಳ ವಿಸ್ತಾರವಾದ ಗ್ರಾಹಕರ ನೆಲೆಯನ್ನು ಮತ್ತಷ್ಟು ವಿಸ್ತರಿಸಲು ಅತ್ಯುನ್ನತ ಮಾರಾಟ, ಸರ್ವೀಸ್ ಮತ್ತು ಬಿಡಿಭಾಗಗಳ ನೆರವನ್ನು ಒದಗಿಸುತ್ತದೆ ಮತ್ತು ಬ್ರ್ಯಾಂಡ್ ಅನ್ನು ಶಕ್ತಿಯುತಗೊಳಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮಹೀಂದ್ರಾ ಫಾರ್ಮ್ ಈಕ್ವಿಪ್‌ಮೆಂಟ್ ಸೆಕ್ಟರ್‌ನ ಪ್ರೆಸಿಡೆಂಟ್ ಹೇಮಂತ್ ಸಿಕ್ಕಾ ಮಾತನಾಡಿ, ನಮ್ಮ ಗ್ರಾಹಕರು, ರೈತರು, ಪ್ರತಿದಿನ ನಮಗೆ ಸ್ಫೂರ್ತಿ ನೀಡುವ ನಮ್ಮ ಪಾಲುದಾರರು ಮತ್ತು ನಮ್ಮ ತಂಡಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ನಾವು ಒಟ್ಟಾಗಿ ಪರಿವರ್ತನೆಯ ಪ್ರಯಾಣವನ್ನು ಮುಂದುವರಿಸಲಿದ್ದೇವೆ. ವ್ಯವಸಾಯ ಪದ್ಧತಿಯನ್ನು ಪರಿವರ್ತಿಸುವ ಮತ್ತು ಜೀವನವನ್ನು ಸಮೃದ್ಧಗೊಳಿಸುವ ಉದ್ದೇಶದಿಂದ ನಾವು ಮುನ್ನಡೆಯುತ್ತಿದ್ದೇವೆ. ಈವರೆಗೆ ನಾವು ನಮ್ಮ 40 ಲಕ್ಷ ಮಹೀಂದ್ರಾ ಟ್ರ್ಯಾಕ್ಟರ್ ಅನ್ನು ಮಾರಾಟ ಮಾಡಿರುವುದಾಗಿ ತಿಳಿಸಲು ಹೆಮ್ಮೆಪಡುತ್ತೇವೆ. ಇದೇ ವರ್ಷ ಮಹೀಂದ್ರಾ ಟ್ರ್ಯಾಕ್ಟರ್ 60 ವರ್ಷಗಳನ್ನು ಪೂರೈಸಿದ ಸಂಭ್ರಮ ಆಚರಿಸುತ್ತಿದೆ ಎಂದರು.

ಮಹೀಂದ್ರಾ ಟ್ರ್ಯಾಕ್ಟರ್ಸ್ ಕಂಪನಿಯು ತಮ್ಮ 40 ಲಕ್ಷ ಗ್ರಾಹಕರನ್ನು ಶ್ಲಾಘಿಸುತ್ತಾ, '40 ಲಕ್ಷ ಆನಂದದಾಯಕ ಗ್ರಾಹಕರು ಮತ್ತು 60 ವರ್ಷಗಳ ಬ್ರ್ಯಾಂಡ್ ಟ್ರಸ್ಟ್' (40 lakh happy customers and 60 years of brand trust) ಎಂಬ ಶೀರ್ಷಿಕೆಯಲ್ಲಿ ಹೊಸ ಡಿಜಿಟಲ್ ವೀಡಿಯೊ ಕಮರ್ಷಿಯಲ್ (ಡಿವಿಸಿ) ಅನ್ನು ಪ್ರಸಾರ ಮಾಡುತ್ತಿದೆ.

ಇದೇ ಸಮಯದಲ್ಲಿ ದೇಶಾದ್ಯಂತ ತನ್ನ ಉತ್ಪನ್ನಗಳು ಮತ್ತು ಸರ್ವೀಸ್‌ಗಳ ಮೇಲೆ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದೆ. ಈ ಪ್ರಚಾರ ಅಭಿಯಾನವು 'ಕೆಂಪು' ಬಣ್ಣಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದು, ಈ ಬಣ್ಣವು ಏಕಕಾಲಕ್ಕೆ ಸಮೃದ್ಧಿಯನ್ನು ಮತ್ತು ಮಹೀಂದ್ರಾ ಟ್ರ್ಯಾಕ್ಟರ್‌ಗಳನ್ನು ಸಂಕೇತಿಸುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 19, 2024, 16:35 [IST]
English summary
Mahindra achieves 40 lakh tractor sales milestone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+