ಭಾರತೀಯ ಸೇನೆಗೆ ಮಹೀಂದ್ರಾ ಆನೆ ಬಲ: 120KM ವೇಗದಲ್ಲಿ 1000 Kg ಹೊತ್ತೊಯ್ಯುವ ವಾಹನ ಸಿದ್ದ!

ಭಾರತೀಯ ಮೂಲದ ಪ್ರಸಿದ್ದ ವಾಹನ ನಿರ್ಮಾಣ ಕಂಪನಿಯಾದ ಮಹೀಂದ್ರಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಕೇವಲ ನಾಗರೀಕ ಬಳಕೆಯ ವಾಹನಗಳು ಮಾತ್ರವಲ್ಲದೇ, ಭಾರತೀಯ ಸೇನೆಗೂ ಸಹ ಮಹೀಂದ್ರಾ ಕಂಪನಿ ಹಲವಾರು ವಾಹನಗಳನ್ನು ನಿರ್ಮಿಸಿ ಸೇನೆಯ ಮೆಚ್ಚುಗೆಗೂ ಪಾತ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ.

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮಹೀಂದ್ರಾ ಕಂಪನಿಯು ಸೇನೆಗೆ ನಿರ್ಮಿಸಿರುವ ಸೇನಾ ವಾಹನವನ್ನು ಮೊದಲ ಬಾರಿಗೆ ಎಲ್ಲರ ಮುಂದೆ ಇಟ್ಟಿತು. ಹೌದು, ಮಹೀಂದ್ರಾ ಆರ್ಮಾಡೋ ಎಂಬ ವಾಹನವನ್ನು ಮಹೀಂದ್ರಾ ಕಂಪನಿಯು ಭಾರತೀಯ ಸೇನೆಗೆಂದೇ ವಿಶೇಷವಾಗು ನಿರ್ಮಿಸಿತ್ತು. ಈ ಬಾರಿಯ ಗಣರಾಜ್ಯೋತ್ಸವದ ಆಚರಣೆಯಲ್ಲಿ ಮಹೀಂದ್ರಾ, ತನ್ನ ಅರ್ಮಡೋ ವಾಹನವನ್ನು ಮೊದಲ ಬಾರಿಗೆ ಜನರ ಮುಂದೆ ಇಟ್ಟಿದೆ.

Mahindra Armado Military Vehicle Made First Appearance On Republic Day

ಈ ವಾಹನವನ್ನು ತುರ್ತು ನಿರ್ವಹಣಾ ತಂಡಗಳು, ಸ್ಪೆಷಲ್‌ ಫೋರ್ಸ್‌ಗಳು, ಕೌಂಟರ್‌ ಟೆರರಿಸಂ ಓಪರೇಷನ್ಸ್‌, ಗಡಿ ಕಾಯುವುದು ಮತ್ತು ಇತರ ತಂಡಗಳಿಗೆ ಈ ವಾಹನವು ನೆರವಾಗಲಿದೆ ಎಂದು ತಿಳಿದು ಬಂದಿದೆ. ಇನ್ನು ಈ ವಾಹನದ ಪವರ್‌ ಮತ್ತು ಪರ್ಫಾಮೆನ್ಸ್‌ ಬಗ್ಗೆ ನೋಡುವುದಾದರೆ ಈ ವಾಹನವು 3.2 ಲೀಟರ್‌ ಟರ್ಬೋ ಚಾರ್ಜ್ಡ್‌ ಡೈರೆಕ್ಟ್‌ ಇಂಜೆಕ್ಷನ್‌ ಡೀಸೆಲ್‌ ಎಂಜಿನ್‌ ಅನ್ನು ಹೊಂದಿದೆ.

ಅರ್ಮಡೋ ವಾಹನವನ್ನು 2012 ರಲ್ಲಿ ಮೊದಲ ಬಾರಿ ಹೊರ ತಂದಿತ್ತು. ಈ ವಾಹನದಲ್ಲಿ ಹೈ ಲೆವೆಲ್‌ ಬಲಾಸ್ಟಿಕ್‌ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಆರ್ಮರ್ಡ್‌ ಲೈಟ್‌ ಸ್ಪೆಷಲಿಸ್ಟ್‌ ವಾಹನವಾಗಿರುವ ಈ ಮಹೀಂದ್ರಾ ಅರ್ಮಡೋ ವಾಹನ ಹಲವು ವಿಭಾಗಗಳ ಕೆಲಸಗಳಿಗೆ ಬಹಳಷ್ಟು ಮುಖ್ಯವಾದುದು ಎಂಬುದನ್ನು ನಾವಿಲ್ಲಿ ಗಮನಿಸಬೇಕು.

3.2 ಲೀಟರ್‌ ಟರ್ಬೋ ಚಾರ್ಜ್ಡ್‌ ಡೈರೆಕ್ಟ್‌ ಇಂಜೆಕ್ಷನ್‌ ಡೀಸೆಲ್‌ ಎಂಜಿನ್ ಸಹಾಯದಿಂಹ ಈ ಅರ್ಮಡೋ ವಾಹನವು 215 ಬಿಹೆಚ್‌ಪಿ ಪವರ್‌ ಮತ್ತು 500 ಎನ್‌ಎಮ್‌ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಇನ್ನು ಈ ವಾಹನದಲ್ಲಿರುವ 4 ಸ್ಪೀಡ್ ಆಟೋಮ್ಯಾಟಿಕ್‌‌ ಗೇರ್‌ ಬಾಕ್ಸ್‌ ಈ ಪವರ್‌ ಅನ್ನು ವಾಹನದ ನಾಲ್ಕೂ ಚಕ್ರಗಳಿಗಳಿಗೆ ವಿತರಿಸುತ್ತದೆ.

ಇನ್ನು ಈ ವಾಹನದ ಮತ್ತೊಂದು ವಿಶೇಷತೆ ಏನೆಂದರೆ ಸುಮಾರಯ ಒಂದು ಸಾವಿರ ಕೆಜಿ ತೂಕವನ್ನು ಹೊತ್ತುಕೊಂಡು 120 ಕಿಮೀ ವೇಗದಲ್ಲಿ ಚಲಿಸುತ್ತದೆ. ಇನ್ನು ಸುಮಾರು 50 ಕಿಮೀ ವರೆಗೂ ಈ ವಾಹನದ ಟೈರ್‌ನಲ್ಲಿ ಗಾಳಿ ಇಲ್ಲದೇ ಅಥವಾ ಪಂಕ್ಚರ್‌ ಆಗಿದ್ದರೂ ಚಲಿಸಬಲ್ಲದು. ಈ ಎಲ್ಲಾ ವಿಶೇಷತೆಗಳು ಈ ವಾಹನವನ್ನು ತುರ್ತು ಪರಿಸ್ಥಿತಿ ಸಮಯದಲ್ಲಿ ಬಹುಪಯೋಗಿಯಾಗಿಸುತ್ತದೆ.

ಈ ಹಿಂದೆಯಿಂದಲೂ ಮಹೀಂದ್ರಾ ಕಂಪನಿಯ ವಾಹನಗಳು ಭಾರತೀಯ ಸೇನೆಯಲ್ಲಿದೆ. ರಕ್ಷಣಾ ಸಚಿವಾಲಯವು 2021 ರಲ್ಲಿ 1,300 ಲೈಟ್ ಸ್ಪೆಷಲಿಸ್ಟ್ ವಾಹನಗಳಿಗೆ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಭಾಗವಾಗಿ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್‌ ವಿಶೇಷ ವಾಹನವನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, January 28, 2024, 15:00 [IST]
English summary
Mahindra armado military vehicle made first appearance on republic day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+