ರೋಡ್ ಟೆಸ್ಟ್ ನಡೆಸಿದ ಮಹೀಂದ್ರಾದ ಬ್ರಹ್ಮಾಸ್ತ್ರ ಹೊಸ ಎಲೆಕ್ಟ್ರಿಕ್ ಕಾರು: ಟಾಟಾಗೆ ಆತಂಕ ಶುರು
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಸದ್ಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಪಾರುಪತ್ಯ ಸಾಧಿಸುತ್ತಿದೆ. ಇದೀಗ ಮತ್ತೊಂದು ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿ ಮಹೀಂದ್ರಾ (Mahindra ) ಕೂಡ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಮಹೀಂದ್ರಾ ಹೊಸ ವಾಹನಗಳ ಬಿಡುಗಡೆಯೊಂದಿಗೆ ತನ್ನ ಎಲೆಕ್ಟ್ರಿಕ್ ವಾಹನಗಳ ಸರಣಿಯನ್ನು ವಿಸ್ತರಿಸುತ್ತಿದೆ.
2022ರಲ್ಲಿ ಮಹೀಂದ್ರಾ ಕಂಪನಿಯು ಹಲವಾರು ಎಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸಿತು, ಇವುಗಳ ಒಂದುದಾಗಿ ಬ್ರ್ಯಾಂಡ್ ಕಾರುಗಳ ಸರಣಿಗೆ ಸೇರಲಿದೆ. ಇತ್ತೀಚೆಗೆ, BE.05 ಎಂಬ ಎಲೆಕ್ಟ್ರಿಕ್ ಕಾರು ರೋಡ್ ಟೆಸ್ಟ್ ಮಾಡುತ್ತಿರುವಾಗ ಕಾಣಿಸಿಕೊಂಡಿದೆ. ಈ ಹೊಸ ಮಹೀಂದ್ರಾ BE.05 ಎಲೆಕ್ಟ್ರಿಕ್ ಕಾರು 2025 ರಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಎಲೆಕ್ಟ್ರಿಕ್ ಕಾರು ಮಾದರಿಯು BE ಬ್ರಾಂಡ್‌ನ ಅಡಿಯಲ್ಲಿ ಬಿಡುಗಡೆಯಾಗಲಿದೆ.

ರೋಡ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು ಹಿಂಬದಿಯಲ್ಲಿ ಮೀರರ್ಸ್ ಮತ್ತು ವೈಪರ್‌ಗಳನ್ನು ಹೊಂದಿರುವುದರಿಂದ ಮಹೀಂದ್ರಾ ಉತ್ಪಾದನಾ ವಿನ್ಯಾಸವನ್ನು ಅಂತಿಮಗೊಳಿಸುವ ಹಂತದಲ್ಲಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಹೆಡ್‌ಲ್ಯಾಂಪ್ ಯುನಿಟ್ ಗಳನ್ನು ಇನ್ನೂ ಮರೆಮಾಡಲಾಗಿದೆ. ಈ ಹೊಸ ಮಾದರಿ ಮಹೀಂದ್ರಾ BE.05 INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.
BE.05 ಕೂಪ್ ತರಹದ ವಿನ್ಯಾಸವನ್ನು ಹೊಂದಿದೆ ಮತ್ತು ಇದು SUV ಆಗಿದ್ದರೂ ಸಾಕಷ್ಟು ಸ್ಪೋರ್ಟಿಯಾಗಿ ಕಾಣುತ್ತದೆ. ಮುಂಭಾಗವನ್ನು XUV700 ಮಾದರಿಯ ವಿನ್ಯಾಸದ ಶೈಲಿಯನ್ನು ಪಡೆದುಕೊಂಡಿರುವುದರಿಂದ ಡೋರ್ ಹ್ಯಾಂಡಲ್‌ಗಳು ತುಂಬಾ ಆಸಕ್ತಿದಾಯಕವಾಗಿವೆ. ಈ ಎಸ್‍ಯುವಿಯ ಹಿಂಭಾಗದ ಡೋರ್ ಹ್ಯಾಂಡಲ್ ಗಳನ್ನು C-ಪಿಲ್ಲರ್‌ನಲ್ಲಿ ಜೋಡಿಸಲಾಗಿದೆ. ಹಿಂಭಾಗದ ಟೈಲ್‌ಗೇಟ್ ವಿಂಡೋದಲ್ಲಿ ಇಂಟಿಗ್ರೇಟೆಡ್ ಸ್ಪಾಯ್ಲರ್ ಇದೆ, ಇದು ಡ್ರ್ಯಾಗ್ ಅನ್ನು ಕಡಿಮೆ ಮಾಡಲು ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಹೀಂದ್ರಾ ಪನೋರಮಿಕ್ ಸನ್‌ರೂಫ್ ಅನ್ನು ಸಹ ನೀಡುತ್ತದೆ. ಮಹೀಂದ್ರಾ BE.05 ಅನ್ನು INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದೇ ಪ್ಲಾಟ್‌ಫಾರ್ಮ್ ಅನ್ನು ಮಹೀಂದ್ರಾ ಕಂಪನಿಯ ಇತರ ಎಲೆಕ್ಟ್ರಿಕ್ ವಾಹನಗಳಿಗೂ ಬಳಸಲಾಗುವುದು. ಎಲೆಕ್ಟ್ರಿಕ್ ಕೂಪ್ ಎಸ್‌ಯುವಿ 4,370 ಎಂಎಂ ಉದ್ದ ಮತ್ತು 1,900 ಎಂಎಂ ಅಗಲವನ್ನು ಹೊಂದಿದೆ. ಇನ್ನು 2,775 ಎಂಎಂ ವೀಲ್‌ಬೇಸ್ ಅನ್ನು ಹೊಂದಿರಲಿದೆ.
ಇನ್ನು INGLO ಒಂದು ಸ್ಕೇಲೆಬಲ್ ಪ್ಲಾಟ್‌ಫಾರ್ಮ್ ಆಗಿದ್ದು ಅದು 4.3 ಮೀಟರ್‌ಗಳು ಮತ್ತು 5 ಮೀಟರ್‌ಗಳ ನಡುವಿನ ವಾಹನವನ್ನು ಅಂಡರ್‌ಪಿನ್ ಮಾಡಬಹುದು. ಮಹೀಂದ್ರಾ ವ್ಹೀಲ್ ಗಳನ್ನು ಕಾರ್ನರ್ ಗಳನ್ನು ಇರಿಸಿದೆ ಮತ್ತು ಫ್ಲೋರ್ಬೋರ್ಡ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ನೆಲವು ಸಮತಟ್ಟಾಗಿರುತ್ತದೆ ಅಂದರೆ ಹಿಂದಿನ ಬೆಂಚ್‌ನಲ್ಲಿರುವ ಮೂವರು ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.
ದೇಶದ ಅತಿದೊಡ್ಡ ಎಸ್‍ಯುವಿ ತಯಾರಕರಾದ ಮಹೀಂದ್ರಾ (Mahindra) ಆಟೋಮೋಟಿವ್, ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದಾರೆ. ಹೊಸ ಮಹೀಂದ್ರಾ XUV.e8 ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಮಾದರಿಯು ಈಗಾಗಲೇ ಜನಪ್ರಿಯವಾಗಿರುವ XUV700 ಎಸ್‍ಯುವಿಯ ಎಲೆಕ್ಟ್ರಿಫೈಡ್ ಆವೃತ್ತಿಯಾಗಿದೆ. ಇನ್ನು ಮುಂಬರುವ XUV.e8 80 kWh ಬ್ಯಾಟರಿ ಪ್ಯಾಕ್ ಮತ್ತು ಎರಡು-ಮೋಟಾರ್ ಸೆಟಪ್‌ನೊಂದಿಗೆ ಆಲ್-ವೀಲ್-ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಬರಲಿದೆ ಎಂದು ಮಹೀಂದ್ರಾ ಆಟೋಮೋಟಿವ್ ದೃಢಪಡಿಸಿದೆ.
ಈ ಸೆಟಪ್ ಗರಿಷ್ಠ 230 ಪಿಎಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸಲು ಸಾಮರ್ಥ್ಯವನ್ನು ಹೊಂದಿದೆ. XUV.e8 XUV.e ಪ್ಲಾಟ್‌ಫಾರ್ಮ್‌ನಿಂದ ಮೊದಲ ಆಲ್-ಎಲೆಕ್ಟ್ರಿಕ್ ವಾಹನವಾಗಿದೆ, ಇದು 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗಬಹುದು. ಇದು ಮುಂಬರುವ ಟಾಟಾ ಹ್ಯಾರಿಯರ್ ಇವಿ ಮಾದರಿಗೆ ಪೈಪೋಟಿ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Image Courtesy: Abhinav Arora/Facebook


Click it and Unblock the Notifications