ಅಗ್ಗದ ಫ್ಯಾಮಿಲಿ ಕಾರನ್ನು ಖರೀದಿಸಲು 10,000 ಕುಟುಂಬಗಳು ಸರತಿ ಸಾಲಿನಲ್ಲಿವೆ! ನಿಲ್ಲದ ಬುಕಿಂಗ್ಸ್!

ಭಾರತದ ಜನಪ್ರಿಯ ಎಸ್‌ಯುವಿ ತಯಾರಕರಾದ ಮಹೀಂದ್ರಾ ತನ್ನ ಹೊಸ ಮಾದರಿಗಳು ಮಾತ್ರವಲ್ಲ ಹಳೆಯ ಕಾರುಗಳಿಗೂ ಉತ್ತಮ ಬೇಡಿಕೆಯನ್ನು ಪಡೆಯುತ್ತಿದೆ. ಮಹೀಂದ್ರಾದ ಬೊಲೆರೊ ಮತ್ತು ಬೊಲೆರೊ ನಿಯೋ ಖಂಡಿತವಾಗಿಯೂ ಬ್ರ್ಯಾಂಡ್‌ನ ಜನಪ್ರಿಯ ಮಾದರಿಗಳಾಗಿವೆ. ಕಾರು ತಯಾರಕರು ಪ್ರತಿ ತಿಂಗಳು ಈ ಎರಡೂ ಎಸ್‌ಯುವಿಗಳಿಗಾಗಿ ಸುಮಾರು 10,000 ಬುಕಿಂಗ್‌ಗಳನ್ನು ಸ್ವೀಕರಿಸುತ್ತಿದ್ದಾರೆ.

ಫೆಬ್ರವರಿ 2024ರಲ್ಲಿ ಈ ಎರಡು ಎಸ್‌ಯುವಿಗಳಿಗೆ ಬಾಕಿ ಇರುವ ಡೆಲಿವರಿಗಳ ಸಂಖ್ಯೆಗೆ ಹೋಲಿಸಿದರೆ, ಆರ್ಡರ್ ಉಳಿಸಿಕೊಂಡಿರುವ ಸಂಖ್ಯೆಯೂ ಅದೇ ಮಟ್ಟದಲ್ಲಿದೆ. ಸುಮಾರು 10,000 ಬೊಲೆರೊ ಮತ್ತು ಬೊಲೆರೊ ನಿಯೋಗಳನ್ನು ಗ್ರಾಹಕರಿಗೆ ಡೆಲಿವರಿ ನೀಡಬೇಕಾಗಿದೆ. ಈ ಎರಡೂ ಎಸ್‌ಯುವಿಗಳು ಇತ್ತೀಚೆಗೆ ಇನ್ನೂ 9,500 ಬುಕಿಂಗ್‌ಗಳನ್ನು ಗಳಿಸಿದ್ದು, (ಮಹೀಂದ್ರಾ ಈ ಹಿಂದೆ ಸ್ವೀಕರಿಸಿದ್ದ 11,000 ಯುನಿಟ್ ಬುಕಿಂಗ್‌ಗಳಿಗಿಂತ ಕಡಿಮೆ) ಇದನ್ನು ಗಮನಿಸಿದರೆ ಬೊಲೆರೊ ಶ್ರೇಣಿಯ ವಿತರಣೆಯಲ್ಲಿ ಕಂಪನಿಯು ಒಂದು ತಿಂಗಳು ಹಿಂದಿದೆ ಎಂದು ತೋರುತ್ತದೆ. ಒಟ್ಟಿನಲ್ಲಿ ಈ ರಗಡ್ ಎಸ್‌ಯುವಿಗಳು ಇನ್ನೂ ಸದ್ದು ಮಾಡುತ್ತಿರುವುದು ಕಂಪನಿಗೆ ಉತ್ಸಾಹ ನೀಡುತ್ತಿದೆ.

mahindra-bolero-and-bolero-neo-10-000-bookings-backlog-details

ಮಹೀಂದ್ರಾ ಬೊಲೆರೊ: ಮಹೀಂದ್ರಾ ಬೊಲೆರೊ 1.5 - ಲೀಟರ್ ಡಿಸೇಲ್ ಎಂಜಿನ್ ಪಡೆದಿದ್ದು, 75 PS ಗರಿಷ್ಠ ಪವರ್ ಹಾಗೂ 210 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಬೊಲೆರೊ 16.0 kmpl ಮೈಲೇಜ್ ನೀಡಲಿದೆ.

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯಾನುವಲ್ ಎಸಿ, USB ಕನೆಕ್ಟಿವಿಟಿ, ಪವರ್ ವಿಂಡೋ ಮತ್ತು ಪವರ್ ಸ್ಟೀರಿಂಗ್ ಒಳಗೊಂಡಂತೆ ವಿವಿಧ ಫೀಚರ್ಸ್ ಹೊಂದಿದೆ. ಸೇಫ್ಟಿ ಸಲುವಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರಿವರ್ಸ್ ಪಾರ್ಕಿಂಗ್ ಸೆನ್ಸರ್‌ ಪಡೆದಿದೆ.

mahindra-bolero-and-bolero-neo-10-000-bookings-backlog-details

ಮಹೀಂದ್ರಾದ ಬೊಲೆರೊ ನಿಯೋ: ಮಹೀಂದ್ರಾದ ಬೊಲೆರೊ ನಿಯೋ ವಿಶಿಷ್ಟ ಲ್ಯಾಡರ್ - ಫ್ರೇಮ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಏಳು ಆಸನಗಳ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಎನ್ 4, ಎನ್ 8 ಮತ್ತು ಎನ್ 10 ಟ್ರಿಮ್ ಗಳಲ್ಲಿ ಲಭ್ಯವಿರುವ ಮಹೀಂದ್ರಾದ ಬೊಲೆರೊ ನಿಯೋ ಎಸ್‌ಯುವಿ, 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 100 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ನಿಯೋ ಬೆಲೆಗಳು ಪ್ರಸ್ತುತ ರೂ. 9.95 ಲಕ್ಷದಿಂದ 12.15 ಲಕ್ಷ ರೂ. ನಡುವೆ ಇದೆ. ಇತ್ತೀಚೆಗೆ, ಮಹೀಂದ್ರಾ 9 ಸೀಟರ್ ಬೊಲೆರೊ ನಿಯೋ + ಅನ್ನು ಬಿಡುಗಡೆ ಮಾಡಿತು.

ಮಹೀಂದ್ರಾ ಪರಿಚಯಿಸಿದ ಈ 9- ಸೀಟರ್ Bolero Neo+ ಅನ್ನು P4 ಮತ್ತು ಪ್ರೀಮಿಯಂ P10 ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಗಳು 11.39 ಲಕ್ಷ ರೂ.ಗಳಿಂದ 12.49 ಲಕ್ಷ ರೂ.(ಎಕ್ಸ್‌ ಶೋರೂಂ)ಇದೆ. ದೊಡ್ಡ ಕುಟುಂಬಗಳು, ಸಾಂಸ್ಥಿಕ ಗ್ರಾಹಕರು, ಪ್ರವಾಸ ಮತ್ತು ಪ್ರಯಾಣ ನಿರ್ವಾಹಕರು ಮತ್ತು ಕಂಪನಿಗಳಿಗಾಗಿ ಇದು ಹೇಳಿ ಮಾಡಿಸಿದಂತಿದೆ.

mahindra-bolero-and-bolero-neo-10-000-bookings-backlog-details

Bolero Neo+ ದೃಢವಾದ 2.2 ಲೀಟರ್ mHawk ಡೀಸೆಲ್ ಎಂಜಿನ್‌ ಹೊಂದಿದ್ದು, ಉತ್ತಮ ಮೈಲೇಜ್ ಮತ್ತು ಪರ್ಫಾಮೆನ್ಸ್‌ಗಾಗಿ ಮೈಕ್ರೋ ಹೈಬ್ರಿಡ್ ತಂತ್ರಜ್ಞಾನವನ್ನು ನೀಡಲಾಗಿದೆ. ಇದರ ಬಾಡಿ-ಆನ್-ಫ್ರೇಮ್ ನಿರ್ಮಾಣ ಮತ್ತು ಸ್ಟೀಲ್ ಬಾಡಿ ಶೆಲ್ ಅನ್ನು ದೀರ್ಘ ಬಾಳಿಕೆ ಮತ್ತು ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸುರಕ್ಷತೆ: Bolero Neo+ ಎಸ್‌ಯುವಿನಲ್ಲಿ EBD ಜೊತೆಗೆ ABS, ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್‌ಗಳು, ಎಂಜಿನ್ ಇ-ಮೊಬಿಲೈಜರ್ ಮತ್ತು ಆಟೋಮ್ಯಾಟಿಕ್ ಡೋರ್ ಲಾಕ್‌ಗಳು ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದು ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಒದಗಿಸುತ್ತದೆ.

Article Published On: Friday, May 17, 2024, 12:24 [IST]
English summary
Mahindra bolero and bolero neo 10 000 bookings backlog details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+