Mahindra: ಮಹೀಂದ್ರಾದ ಈ ಕಾರಿಗೆ ಮನಸೋತ ಶ್ರೀಸಾಮಾನ್ಯರು.. 7 ಮಂದಿ ಹೋಗಬಹುದು!

ಭಾರತದಲ್ಲಿ ಟಾಟಾದಂತೆ 'ಮಹೀಂದ್ರಾ' ಕೂಡ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿ ಮನೆ ಮಾತಾಗಿದೆ. ಕಂಪನಿಯು ಮಾರಾಟಗೊಳಿಸುವ ಕಾರುಗಳಿಗೆ ಭಾರೀ ಬೇಡಿಕೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದಾರೆ. ಅದರಲ್ಲೂ 'ಬೊಲೆರೊ' ಮಧ್ಯಮ ವರ್ಗದವರ ನೆಚ್ಚಿನ ಎಸ್‌ಯುವಿಯಾಗಿದ್ದು, ದಿನದಿಂದ ದಿನಕ್ಕೆ ಬುಕ್ಕಿಂಗ್‌ನಲ್ಲಿ ಭರ್ಜರಿಯಾಗಿ ಮುನ್ನಗುತ್ತಿದೆ. ಸದ್ಯ ಮೇ ತಿಂಗಳಲ್ಲಿಯೂ ನೂತನ ಬೊಲೆರೊವನ್ನು ವಿತರಣೆ ತೆಗೆದುಕೊಳ್ಳಲು ಸಾವಿರಾರು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಆದಾಗ್ಯೂ ಕಂಪನಿಯು ದೊಡ್ಡ ಮಟ್ಟದಲ್ಲಿ ಆರ್ಡರ್‌ಗಳನ್ನು ಬಾಕಿ ಉಳಿಸಿಕೊಂಡಿದೆ. ಬನ್ನಿ.. ಹೆಚ್ಚಿನ ವಿವರಗಳನ್ನು ತಿಳಿಯೋಣ.

ಈ ಮೇನಲ್ಲಿ ಮಹೀಂದ್ರಾ ಕಂಪನಿಯು ಒಟ್ಟು 2.2 ಲಕ್ಷ ಎಸ್‌ಯುವಿಗಳ ಆರ್ಡರ್‌ನ್ನು ಗ್ರಾಹಕರಿಗೆ ಪೂರೈಸಬೇಕಾಗಿದೆ. ಆ ಸಂಖ್ಯೆಯಲ್ಲಿ ಬೊಲೆರೊ ಮಾದರಿಗಳ ಪಾಲು ದೊಡ್ಡದಿದ್ದು, ಬರೋಬ್ಬರಿ 10,000 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಬೇಕಾಗಿದೆ. ಈಗಲೂ ಬೊಲೆರೊಗೆ ಸಖತ್ ಡಿಮ್ಯಾಂಡ್ ಇದ್ದು, ಪ್ರತಿ ತಿಂಗಳು 9,500ದಷ್ಟು ಹೊಸ ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ.

Mahindra Bolero Car Have 10 000 Open Booking Details

ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಬೊಲೆರೊ (Mahindra Bolero) ಎಸ್‌ಯುವಿಯು ಸಾಮಾನ್ಯ ಬೊಲೆರೊ ಹಾಗೂ ಬೊಲೆರೊ ನಿಯೋ ಎಂಬ ಎರಡು ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಬೊಲೆರೊ ನಿಯೋ ಆವೃತ್ತಿಯು ರೂ.9.95 ಲಕ್ಷದಿಂದ ರೂ.12.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜೊತೆಗೆ ಮೆಜೆಸ್ಟಿಕ್ ಸಿಲ್ವರ್, ಹೈವೇ ರೆಡ್, ಪರ್ಲ್ ವೈಟ್, ಡೈಮಂಡ್ ವೈಟ್ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಬೊಲೆರೊ ನಿಯೋ ಎಸ್‌ಯುವಿಯು 1.5 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 100 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 260 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 5 - ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನ್ನು ಹೊಂದಿದ್ದು, 17.29 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Mahindra Bolero Car Have 10 000 Open Booking Details

ನೂತನ ಮಹೀಂದ್ರಾ ಬೊಲೆರೊ ನಿಯೋ ಕಾರು 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೀಟ್, ಕೀಲೆಸ್ ಎಂಟ್ರಿ, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ರಿವರ್ಸ್ ಅಸಿಸ್ಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್, ಐಎಸ್ಒಎಫ್ಐಎಕ್ಸ್ ಚೈಲ್ಡ್ ಮೌಂಟ್‌ಗಳನ್ನು ಹೊಂದಿದೆ.

ಸಾಮಾನ್ಯ ಬೊಲೆರೊ ಬಗ್ಗೆ ಮಾತನಾಡುವುದಾದರೆ, ಈ ಎಸ್‌ಯುವಿಯು ರೂ.9.98 ಲಕ್ಷದಿಂದ ರೂ.10.91 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ ಇದರ 1.5 - ಲೀಟರ್ ಡೀಸೆಲ್ ಎಂಜಿನ್ 76 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 210 ಎನ್ಎಂ ಪೀಕ್ ಟಾರ್ಕ್ ಹೊರಹಾಕಲಿದ್ದು, 5 - ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನ್ನು ಹೊಂದಿದೆ.

ಈ ಮಹೀಂದ್ರಾ ಬೊಲೆರೊ ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯಾನುಯಲ್ ಎಸಿ, ಪವರ್ ವಿಂಡೋಗಳು ಹಾಗೂ ಪವರ್ ಸ್ಟೀರಿಂಗ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರಿವರ್ಸ್ ಪಾರ್ಕಿಂಗ್ ಸೇನಾರ್ಸ್ ಅನ್ನು ಪಡೆದಿದೆ. ಬೊಲೆರೊಗೆ ರೆನಾಲ್ಟ್ ಟ್ರೈಬರ್ ದೊಡ್ಡ ಪ್ರತಿಸ್ಪರ್ಧಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 29, 2024, 19:03 [IST]
English summary
Mahindra bolero car have 10000 open booking details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+