Mahindra: ಮಧ್ಯಮ ವರ್ಗದವರ ನೆಚ್ಚಿನ ಬೊಲೆರೊ ನಿಯೋಗೆ ರೂ.90,000 ಡಿಸ್ಕೌಂಟ್.. 9 ಲಕ್ಷ ಬೆಲೆ, 7 ಜನ ಹೋಗಬಹುದು!

ದೇಶದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ (Mahindra) ಗುರುತಿಸಿಕೊಂಡಿದೆ. ಈ ತಿಂಗಳು ಮಧ್ಯಮ ವರ್ಗದವರ ನೆಚ್ಚಿನ ಬೊಲೆರೊ ನಿಯೋ (Bolero Neo) ಎಸ್‌ಯುವಿಗೆ ದೊಡ್ಡ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಇದು ನಗದು ರಿಯಾಯಿತಿ, ವಿನಿಮಯ ಬೋನಸ್ ಸೇರಿದಂತೆ ವಿವಿಧ ಡಿಸ್ಕೌಂಟ್ ಆಫರ್‌ನ್ನು ಒಳಗೊಂಡಿದೆ.

ಮಹೀಂದ್ರಾ ಬೊಲೆರೊ ನಿಯೋ (Mahindra Bolero Neo) ಕಾರಿನ 2024ರ ಮಾದರಿಗಳು ಒಟ್ಟು ರೂ.73,000 ಹಾಗೂ 2023ರ ಮಾದರಿಗಳು ಗರಿಷ್ಠ ರೂ.90,000 ರಿಯಾಯಿತಿ ಪ್ರಯೋಜನವನ್ನು ಪಡೆದಿವೆ. ಈ ಡಿಸ್ಕೌಂಟ್ ಆಫರ್ ಫೆಬ್ರವರಿ 29 ರವರೆಗೆ ಮಾತ್ರ ಮಾನ್ಯವಾಗಿರಲಿದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್, ರೂಪಾಂತರ ಹಾಗೂ ಬಣ್ಣಗಳನ್ನು ಆಧರಿಸಿ ರಿಯಾಯಿತಿ ಸೌಲಭ್ಯಗಳು ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

Mahindra Bolero Neo Suv Gets Rs 90,000 Discount: 9 Lakh Price, 7 People Seat Capacity

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿ, ರೂ.9.64 ಲಕ್ಷದಿಂದ ರೂ.12.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಎನ್4, ಎನ್8, ಎನ್10 ಮತ್ತು ಎನ್10(ಒ) ಎಂಬ 4 ರೂಪಾಂತರ, ನಪೋಲಿ ಬ್ಲಾಕ್, ಮೆಜೆಸ್ಟಿಕ್ ಸಿಲ್ವರ್, ಹೈವೇ ರೆಡ್, ಪರ್ಲ್ ವೈಟ್, ಡೈಮಂಡ್ ವೈಟ್ ಸೇರಿದಂತೆ 6 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ಈ ಬೊಲೆರೊ ನಿಯೋ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 100 ಪಿಎಸ್ ಗರಿಷ್ಠ ಪವರ್, 260 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದ್ದು, 2WD (ಟೂ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. 17.29 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

Mahindra Bolero Neo Suv Gets Rs 90,000 Discount: 9 Lakh Price, 7 People Seat Capacity

ವಿನ್ಯಾಸದ ದೃಷ್ಟಿಯಿಂದ ಸಹ ಮಹೀಂದ್ರಾ ಬೊಲೆರೊ ನಿಯೋ ಅತ್ಯುತ್ತಮವಾಗಿದ್ದು, 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಕಾರಣಕ್ಕೆ ಮಧ್ಯಮ ವರ್ಗದ ಜನರು, ಅದರಲ್ಲೂ ಗ್ರಾಮೀಣ ಪ್ರದೇಶದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೊಲೆರೊವನ್ನು ಕೊಂಡುಕೊಳ್ಳುತ್ತಾರೆ. ಇದು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಹೈಟ್-ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಕೀಲೆಸ್ ಎಂಟ್ರಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆ ವಿಚಾರದಲ್ಲಿಯೂ ಮಹೀಂದ್ರಾ ಬೊಲೆರೊ ನಿಯೋ ಅತ್ಯಾಧುನಿಕವಾಗಿದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರಿವರ್ಸ್ ಅಸಿಸ್ಟ್‌ & ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ. ಈ ಕಾರಿಗೆ ನಿಸ್ಸಾನ್ ಮ್ಯಾಗ್ನೈಟ್, ಕಿಯಾ ಸೋನೆಟ್, ರೆನಾಲ್ಟ್ ಕಿಗರ್, ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ ಪ್ರಬಲ ಎದುರಾಳಿಯಾಗಿವೆ.

ಇನ್ನು, ಮಹೀಂದ್ರಾ ಬೊಲೆರೊ ನಿಯೋ ಎಸ್‌ಯುವಿ ದೊಡ್ಡ ಮಟ್ಟದಲ್ಲಿ ರಿಯಾಯಿತಿ ಪ್ರಯೋಜನವನ್ನು ಹೊಂದಿರುವುದು ಗ್ರಾಹಕರಿಗೆ ಖುಷಿ ನೀಡಿದೆ. ಈ ಕಾರು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದ್ದು, ಜೊತೆಗೆ 7 ಮಂದಿ ಪ್ರಯಾಣಿಸಲು ಸಾಧ್ಯವಾಗಿರುವುದರಿಂದ ಮಧ್ಯಮ ವರ್ಗದ ಜನರ ಫೆವರೇಟ್ ಆಗಿದೆ. ಸದ್ಯವಿರುವ ಡಿಸ್ಕೌಂಟ್ ಆಫರ್ ಬೊಲೆರೊ ನಿಯೋ ಕೊಂಡುಕೊಳ್ಳುವಂತೆ ಮತ್ತಷ್ಟು ಗ್ರಾಹಕರನ್ನು ಪ್ರೇರಿಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, February 13, 2024, 16:56 [IST]
English summary
Mahindra bolero neo suv gets rs 90000 discount 9 lakh price 7 people seat capacity
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+