ಬೇಸಿಗೆಯಲ್ಲಿ ಕೂಲ್ ಆಫರ್‌ಗಳು: ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳು!

ಮಹೀಂದ್ರಾ ಕಂಪನಿಯು ಮೇ ತಿಂಗಳಲ್ಲಿ ಬೊಲೆರೊ, ಬೊಲೆರೊ ನಿಯೋ, ಮೊರಾಜೊ, ಎಕ್ಸ್‌ಯುವಿ 700, ಎಕ್ಸ್‌ಯುವಿ 400 ಇವಿ, ಎಕ್ಸ್‌ಯುವಿ 300 ಮತ್ತು ಸ್ಕಾರ್ಪಿಯೋ-ಎನ್ ಕಾರುಗಳ ಮೇಲೆ ಅತ್ಯಾಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ಈ ಲೇಖನದಲ್ಲಿ ಕಂಪನಿಯು ನೀಡುವ ಪ್ರಯೋಜನಗಳ ಕುರಿತು ವಿವರವಾಗಿ ನೋಡೋಣ.

ಮಹೀಂದ್ರಾ ಎಕ್ಸ್‌ಯುವಿ 300: ಮಹೀಂದ್ರಾ ಕಂಪನಿಯು ತನ್ನ ಎಕ್ಸ್‌ಯುವಿ 300 ಮೇಲೆ ರೂ. 1.78 ಲಕ್ಷ ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ನಗದು ರಿಯಾಯಿತಿ, ಅಫಿಷಿಯಲ್ ಅಕ್ಸೆಸೊರಿಸ್, ವಿಸ್ತರಿತ ವಾರಂಟಿ ಇತ್ಯಾದಿಗಳು ಸೇರಿವೆ. ಇದರಲ್ಲಿ ಟಾಪ್ - ಸ್ಪೆಕ್ ಎಕ್ಸ್‌ಯುವಿ 300 ಡಬ್ಲ್ಯು 8 ಡೀಸೆಲ್ ಮಾದರಿಯು ಗರಿಷ್ಠ ಪ್ರಯೋಜನಗಳನ್ನು ಒಳಗೊಂಡಿದೆ. ಡಬ್ಲ್ಯು 6, ಡಬ್ಲ್ಯು 4 ಮತ್ತು ಡಬ್ಲ್ಯು 2 ರೂಪಾಂತರಗಳಲ್ಲಿ ಕ್ರಮವಾಗಿ ರೂ. 1.33 ಲಕ್ಷ, ರೂ. 95,000 ಮತ್ತು 45,000 ರೂ.ಗಳ ಪ್ರಯೋಜನಗಳು ಲಭ್ಯವಿರುತ್ತವೆ.

mahindra-cars-discount-offers-for-may-2024

ಮಹೀಂದ್ರಾ ಎಕ್ಸ್‌ಯುವಿ 400 ಇವಿ: ಮಹೀಂದ್ರಾ ಎಕ್ಸ್‌ಯುವಿ 400 ಇವಿ 2023ರ ಮಾಡೆಲ್ ಮೇಲೆ ರೂ. 4.4 ಲಕ್ಷ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು. ಇದು ಆಯ್ಕೆ ಮಾಡಿದ ರೂಪಾಂತರ, ಬ್ಯಾಟರಿ ಪ್ಯಾಕ್, ಚಾರ್ಜಿಂಗ್ ಸಾಮರ್ಥ್ಯ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ ಈ ತಿಂಗಳು ಎಕ್ಸ್‌ಯುವಿ 400 ಇವಿ ಖರೀದಿಯಲ್ಲಿ ನೀವು ದೊಡ್ಡ ಮೊತ್ತವನ್ನು ಉಳಿಸಬಹುದು.

ಮಹೀಂದ್ರಾ ಮೊರಾಜೊ: ಮಹೀಂದ್ರಾ ಮೊರಾಜೊ (ಎಂ2, ಎಂ4+ ಮತ್ತು ಎಂ6+)ನ ಮೂರು ರೂಪಾಂತರಗಳ ಮೇಲೆ ರೂ. 93,200 ರವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ನಗದು ರಿಯಾಯಿತಿಗಳು, ವಿನಿಮಯ ಪ್ರಯೋಜನಗಳು, ಕಾರ್ಪೊರೇಟ್ ರಿಯಾಯಿತಿಗಳು ಮತ್ತು ರೂ. 20,000 ಮೌಲ್ಯದ ಅಕ್ಸೆಸೊರಿಗಳಿವೆ. ಪ್ರಸ್ತುತ, ಈ ಎಂಪಿವಿಯ ಬೆಲೆ ರೂ. 14.39 ಲಕ್ಷದಿಂದ ಆರಂಭವಾಗುತ್ತದೆ.

mahindra-cars-discount-offers-for-may-2024

ಮಹೀಂದ್ರಾ ಎಕ್ಸ್ ಯುವಿ 700: ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಎಕ್ಸ್‌ಯುವಿ 700 ನ 2023 ಮಾದರಿಯ ಮೇಲೆ 1.5 ಲಕ್ಷ ರೂ.ಗಳ ನಗದು ರಿಯಾಯಿತಿಯನ್ನು ನೀಡುತ್ತಿದೆ. ಈ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ರೂಪದಲ್ಲಿ ಲಭ್ಯವಿದೆ. ಎಎಕ್ಸ್ 5, 7-ಸೀಟರ್ ಡೀಸೆಲ್ ಮತ್ತು ಎಎಕ್ಸ್ 5, 7-ಸೀಟರ್ ಪೆಟ್ರೋಲ್ ಮ್ಯಾನುವಲ್ ಹೊರತುಪಡಿಸಿ ಬಹುತೇಕ ಎಲ್ಲಾ ರೂಪಾಂತರಗಳಲ್ಲಿ ಉತ್ತಮ ರಿಯಾಯಿತಿಗಳು ಲಭ್ಯವಿದೆ. 2024ರ ಎಕ್ಸ್‌ಯುವಿ 700 ಮಾದರಿಯ ಮೇಲೆ ಯಾವುದೇ ರಿಯಾಯಿತಿ ಲಭ್ಯವಿಲ್ಲ ಎಂಬುದನ್ನು ಗಮನಿಸಬೇಕು.

ಮಹೀಂದ್ರಾ ಬೊಲೆರೊ ನಿಯೋ: ಮಹೀಂದ್ರಾ ಬೊಲೆರೊ ನಿಯೋ ಲ್ಯಾಡರ್ ಫ್ರೇಮ್ 7 ಸೀಟರ್ ರೂಪಾಂತರದ ಮೇಲೆ ರೂ. 83,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ನಗದು ರಿಯಾಯಿತಿಗಳು, ವಿನಿಮಯ ಬೋನಸ್ ಗಳು, ಕಾರ್ಪೊರೇಟ್ ರಿಯಾಯಿತಿಗಳು ಮತ್ತು ಪರಿಕರಗಳ ವಿನಂತಿಗಳು ಸೇರಿವೆ. ಬೊಲೆರೊ ನಿಯೋ ಮಿಡ್-ಸ್ಪೆಕ್ ಎನ್ 8 ಮತ್ತು ಎಂಟ್ರಿ ಲೆವೆಲ್ ಎನ್ 4 ರೂಪಾಂತರಗಳ ಮೇಲೆ ರೂ. 64,000 ಮತ್ತು ರೂ. 56,000 ರಿಯಾಯಿತಿ ಲಭ್ಯವಿದೆ.

mahindra-cars-discount-offers-for-may-2024

ಮಹೀಂದ್ರಾ ಬೊಲೆರೊ: ಸಾಮಾನ್ಯ ಮಹೀಂದ್ರಾ ಬೊಲೆರೊ ಮೇಲೆ ಗ್ರಾಹಕರು ಈ ತಿಂಗಳು 82,000 ರೂ.ಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ನಗದು ರಿಯಾಯಿತಿಗಳು, ವಿನಿಮಯ ಪ್ರಯೋಜನಗಳು, ಕಾರ್ಪೊರೇಟ್ ರಿಯಾಯಿತಿಗಳು, ಅಕ್ಸೆಸೊರಿಗಳು ಮತ್ತು ವಿಸ್ತರಿತ ವಾರಂಟಿ ಸೇರಿವೆ. ಮಿಡ್-ಸ್ಪೆಕ್ ಬಿ6 ಮೇಲೆ 48,000 ರೂ., ಎಂಟ್ರಿ ಲೆವೆಲ್ ಬಿ4ಗೆ ಮೇಲೆ 61,000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು.

ಮಹೀಂದ್ರಾ ಸ್ಕಾರ್ಪಿಯೋ-ಎನ್: ಸ್ಕಾರ್ಪಿಯೋ-ಎನ್ ಖರೀದಿಯ ಮೇಲೆ ಉತ್ತಮ ರಿಯಾಯಿತಿ ಲಭ್ಯವಿದೆ. 2023ರ ಮಾದರಿಗಳಾದ 4 ಡಬ್ಲ್ಯುಡಿ ಟಾಪ್-ಸ್ಪೆಕ್ ಝಡ್ 8 ಮತ್ತು ಝಡ್ 8 ಎಲ್ ಡೀಸೆಲ್ ರೂಪಾಂತರಗಳ ಖರೀದಿಯ ಮೇಲೆ 1 ಲಕ್ಷ ರೂ.ಗಳವರೆಗೆ ನಗದು ರಿಯಾಯಿತಿಯನ್ನು ಪಡೆಯಬಹುದು. 2024 ಆರ್‌ಡಬ್ಲ್ಯುಡಿ ಪೆಟ್ರೋಲ್ ಮತ್ತು ಡೀಸೆಲ್ ರೂಪದಲ್ಲಿ ಝಡ್ 8 ಮತ್ತು ಝಡ್ 8 ಎಲ್ ಮೇಲೆ 60,000 ರೂ.ಗಳ ರಿಯಾಯಿತಿ ಲಭ್ಯವಿದೆ.

mahindra-cars-discount-offers-for-may-2024

ಗಮನಿಸಿ: ಮಹೀಂದ್ರಾ ಕಂಪನಿಯು ನೀಡುವ ಈ ರಿಯಾಯಿತಿಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುವ ಸಾಧ್ಯತೆಯಿದೆ. ಇದಲ್ಲದೆ, ಸ್ಟಾಕ್ ಇರುವವರೆಗೆ ಮಾತ್ರ ಈ ರಿಯಾಯಿತಿಗಳು ಲಭ್ಯವಿರುತ್ತವೆ. ಆದ್ದರಿಂದ ಮಹೀಂದ್ರಾ ಕಾರುಗಳನ್ನು ಖರೀದಿಸಲು ಬಯಸುವ ಗ್ರಾಹಕರು ನಿಖರವಾದ ರಿಯಾಯಿತಿಗಳ ಬಗ್ಗೆ ತಿಳಿಯಲು ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ. ಈ ರಿಯಾಯಿತಿಗಳು ಮೇ 31 ರವರೆಗೆ ಮಾತ್ರ ಲಭ್ಯವಿರುತ್ತವೆ.

Article Published On: Wednesday, May 8, 2024, 8:30 [IST]
English summary
Mahindra cars discount offers for may 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+