ಆನಂದ್ ಮಹೀಂದ್ರಾ ಕಂಪನಿ ಕಾರುಗಳಿಗೆ ಫುಲ್ ಡಿಮ್ಯಾಂಡ್.. ಹೊಸ ಥಾರ್ ರಾಕ್ಸ್‌ ವಿತರಣೆಗೂ ಕಾಯಲೇಬೇಕು!

ಆನಂದ್ ಮಹೀಂದ್ರಾ ಮಾಲೀಕತ್ವದ ಮಹೀಂದ್ರಾ & ಮಹೀಂದ್ರಾ (Mahindra & Mahindra) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಥಾರ್ ರಾಕ್ಸ್‌, ಎಕ್ಸ್‌ಯುವಿ700, ಎಕ್ಸ್‌ಯುವಿ 3ಎಕ್ಸ್ಒ, ಬೊಲೆರೊ ಹಾಗೂ ಸ್ಕಾರ್ಪಿಯೋ ಎನ್ ಸೇರಿದಂತೆ ವಿವಿಧ ಎಸ್‌ಯುವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಅಕ್ಟೋಬರ್‌ನಲ್ಲಿ ದೇಶಾದ್ಯಂತ ವಿವಿಧ ನಗರಗಳಲ್ಲಿ ಈ ಕಾರುಗಳು ಹೊಂದಿರುವ ಕಾಯುವಿಕೆ ಅವಧಿ (Waiting period) ಕುರಿತ ವಿವರಗಳು ಬಹಿರಂಗಗೊಂಡಿವೆ.

ಮೊದಲಿಗೆ ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಆಫ್-ರೋಡ್ ಎಸ್‌ಯುವಿ ಹೊಂದಿರುವ ಕಾಯುವಿಕೆ ಅವಧಿ ಬಗ್ಗೆ ಮಾತನಾಡೋಣ. ಬೆಂಗಳೂರಿನಲ್ಲಿ ಈ ಕಾರಿನ ವಿವಿಧ ರೂಪಾಂತರಗಳು (ವೇರಿಯೆಂಟ್) 2 ತಿಂಗಳಲ್ಲಿ ವಿತರಣೆಯಾಗಲಿವೆ. ನವದೆಹಲಿಯಲ್ಲಿ 2 ತಿಂಗಳು ಹಾಗೂ ಮುಂಬೈನಲ್ಲಿ 1.5 ರಿಂದ 2 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ.

Mahindra Cars October 2024 Waiting Period Revealed Thar Roxx XUV700 Scorpio N XUV 3XO

ನೂತನ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿ, ರೂ.12.99 ರಿಂದ ರೂ.22.49 ಲಕ್ಷ (ಎಕ್ಸ್ ಶೋರೂಂ - ಬೆಂಗಳೂರು) ದರದಲ್ಲಿ ಖರೀದಿಗೆ ಲಭ್ಯವಿದೆ. 2.0-ಲೀಟರ್ ಪೆಟ್ರೋಲ್ ಹಾಗೂ 2-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು) ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ 5 ಜನರು ಸುಲಭವಾಗಿ ಓಡಾಟ ನಡೆಸಬಹುದು.

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿ ಕೂಡ ಭಾರಿ ಬೇಡಿಕೆ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಈ ಕಾರಿನ ರೂಪಾಂತರಗಳನ್ನು ವಿತರಣೆ ಪಡೆಯಲು ಗ್ರಾಹಕರು 5 ರಿಂದ 6 ತಿಂಗಳು ಕಾಯಬೇಕು. ಅದೇ ರೀತಿಯಲ್ಲಿ ನವದೆಹಲಿ 1 ರಿಂದ 1.5 ತಿಂಗಳು ಮತ್ತು ಮುಂಬೈನಲ್ಲಿ 1 ರಿಂದ 2 ತಿಂಗಳಲ್ಲಿ ವಿತರಣೆಯಾಗಲಿವೆ.

Mahindra Cars October 2024 Waiting Period Revealed Thar Roxx XUV700 Scorpio N XUV 3XO

ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಕಾರು, ರೂ.13.99 ರಿಂದ ರೂ.26.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.25-ಇಂಚು) ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (10.25-ಇಂಚು) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಬಗ್ಗೆ ಹೇಳುವುದಾದರೆ, ಇದು ಜನಪ್ರಿಯ ಎಸ್‌ಯುವಿಯಾಗಿದೆ. ಬೆಂಗಳೂರಿನಲ್ಲಿ ಇದರ ವಿವಿಧ ರೂಪಾಂತರಗಳು 5 ರಿಂದ 6 ತಿಂಗಳು ಕಾಯುವಿಕೆ ಅವಧಿ ಹೊಂದಿವೆ. ನವದೆಹಲಿಯಲ್ಲಿ 2 ರಿಂದ 2.5 ತಿಂಗಳು ಹಾಗೂ ಮುಂಬೈನಲ್ಲಿ 1 ರಿಂದ 2 ತಿಂಗಳಲ್ಲಿ ವಿತರಣೆಯಾಗಲಿವೆ. ಈ ಕಾರು ರೂ.13.85 ರಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.

Mahindra Cars October 2024 Waiting Period Revealed Thar Roxx XUV700 Scorpio N XUV 3XO

ಕಡೆಯಾದಾಗಿ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಎಸ್‌ಯುವಿ ಬಗ್ಗೆ ಮಾತನಾಡುವುದಾದರೆ, ಬೆಂಗಳೂರಿನಲ್ಲಿ ಈ ಕಾರಿನ ರೂಪಾಂತರಗಳು (ವೇರಿಯೆಂಟ್) 2 ತಿಂಗಳು, ನವದೆಹಲಿಯಲ್ಲಿ 2.5 ರಿಂದ 3 ತಿಂಗಳು ಮತ್ತು ಮುಂಬೈನಲ್ಲಿ 1 ತಿಂಗಳು ಕಾಯುವಿಕೆ ಅವಧಿ ಹೊಂದಿವೆ. ನೂತನ ಎಕ್ಸ್‌ಯುವಿ 3ಎಕ್ಸ್ಒ ರೂ.7.79 ರಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಒಟ್ಟಾರೆಯಾಗಿ, ಮಹೀಂದ್ರಾ ಮಾರಾಟಗೊಳಿಸುವ ಈ ನೂತನ ಎಸ್‌ಯುವಿಗಳು ನವೀನ-ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯವನ್ನು ಪಡೆದುಕೊಂಡಿರುವುದರಿಂದ ಸ್ವಲ್ಪ ಹೆಚ್ಚಿನ ಕಾಯುವಿಕೆ ಅವಧಿಯನ್ನು ಒಳಗೊಂಡಿವೆ. ಈ ಕಾಲಾವಧಿ ನಗರದಿಂದ ನಗರಕ್ಕೆ ರೂಪಾಂತರಗಳನ್ನು ಅವಲಂಭಿಸಿ, ಬೇರೆಯಾಗಬಹುದು. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ.

More from DriveSpark

Article Published On: Tuesday, October 15, 2024, 13:26 [IST]
English summary
Mahindra cars october 2024 waiting period revealed thar roxx xuv700 scorpio n xuv 3xo
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+