Mahindra: ಆಟೋ ಚಾಲಕರ ಹಣ ಉಳಿಸುವ ಬೆಸ್ಟ್ ತ್ರಿಚಕ್ರ ವಾಹನ ಬಿಡುಗಡೆ: ವಿಶೇಷತೆಗಳೇನು?

ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ, ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳನ್ನು ಕೂಡ ಮಾರಾಟ ಮಾಡುತ್ತದೆ. ಈ ಎಲೆಕ್ಟ್ರಿಕ್ ವಾಹನಗಳು ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (MLMML), ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ (M&M Ltd.)ನ ಅಂಗಸಂಸ್ಥೆಯಡಿ ಬರುತ್ತವೆ. ಈ ಸಂಸ್ಥೆಯು ಈಗ ಹೊಸ ಇ-ಆಲ್ಫಾ ಪ್ಲಸ್ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಹೊಸ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ನಗರ ಮತ್ತು ಗ್ರಾಮೀಣ ಸಾರಿಗೆಯಲ್ಲಿ ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಮಹೀಂದ್ರಾ ಇ-ಆಲ್ಫಾ ಪ್ಲಸ್ ಅನ್ನು ದೈನಂದಿನ ಬಳಕೆಯ ಕಠಿಣತೆಯ ಅಡಿಯಲ್ಲಿ ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸುಧಾರಿತ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ (PMSM) ಹೊಂದಿದ್ದು, 2600 r/min ನಲ್ಲಿ 1.95 kW ಗರಿಷ್ಠ ಪವರ್ ಮತ್ತು 200 r/min ನಲ್ಲಿ 26.9 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

mahindra-launches-all-new-e-alfa-plus-three-wheeler

ವಾಹನವು 150 Ah ಲೀಡ್ ಆಸಿಡ್ ಬ್ಯಾಟರಿಯಿಂದ ಚಾಲಿತವಾಗಿದೆ. ಇ-ಆಲ್ಫಾ ಪ್ಲಸ್‌ನ ಪ್ರಮುಖ ಹೈಲೈಟ್‌ ಎಂದರೇ ಒಮ್ಮೆ ಚಾರ್ಜ್‌ ಮಾಡಿದ್ರೆ, 100+ ಕಿಲೋಮೀಟರ್ ಓಡಬಲ್ಲದು. ಇದರಿಂದಾಗಿ ಚಾಲಕರು ತಮ್ಮ ಹಣ ಗಳಿಕೆಯನ್ನು ಗರಿಷ್ಠಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಮಹೀಂದ್ರಾ ಭರವಸೆ ನೀಡಿದೆ.

ಮಹೀಂದ್ರಾ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯಂತ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಸಲುವಾಗಿ ಪ್ರತಿ ವಾಹನ ಖರೀದಿಯೊಂದಿಗೆ ಚಾಲಕನಿಗೆ ರೂ. 10 ಲಕ್ಷ ಮೌಲ್ಯದ ಮೂರು ವರ್ಷಗಳ ಅಪಘಾತ ವಿಮೆಯನ್ನು ನೀಡಲಾಗುತ್ತಿದೆ. ಮಹೀಂದ್ರಾ ಚಾರ್ಜರ್ ಮತ್ತು ಬ್ಯಾಟರಿ ಸೇರಿದಂತೆ ವಾಹನದ ಮೇಲೆ 18-ತಿಂಗಳ ವಾರಂಟಿಯನ್ನು ಒದಗಿಸುತ್ತಿರುವುದಾಗಿ ಹೇಳಿದೆ.

mahindra-launches-all-new-e-alfa-plus-three-wheeler

ಹೊಸ ಓಷಿಯಾನಿಕ್ ಬ್ಲೂ ಹ್ಯೂ ಸೇರಿದಂತೆ ಐದು ಬಣ್ಣಗಳಲ್ಲಿ ಈ ಮೂರು-ಚಕ್ರ EV ವಾಹನವನ್ನು ನೀಡಲಾಗುತ್ತಿದೆ. ಹೊಸ ಇ-ಆಲ್ಫಾ ಪ್ಲಸ್, ವಿಶಿಷ್ಟವಾದ ಮುಚ್ಚಿದ ದೇಹದ ವಿನ್ಯಾಸದೊಂದಿಗೆ, ಸುಧಾರಿತ ಬ್ರೇಕಿಂಗ್ ಸಿಸ್ಟಮ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮಹೀಂದ್ರಾ ಇ-ಆಲ್ಫಾ ಪ್ಲಸ್ ಇ-ರಿಕ್ಷಾದ ಬೆಲೆ ರೂ. 1,61,113 (ಎಕ್ಸ್ ಶೋರೂಂ ನೋಯ್ಡಾ) ಇದೆ.

ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್ (MLMML), ಎಲೆಕ್ಟ್ರಿಕ್, ಪೆಟ್ರೋಲ್, CNG, ಡೀಸೆಲ್‌ನಲ್ಲಿ 3 ಮತ್ತು 4-ವೀಲರ್ ಪ್ಯಾಸೆಂಜರ್ ಮತ್ತು ಕಾರ್ಗೋ ವಾಹನಗಳನ್ನು ನೀಡುತ್ತಿದೆ. ಇವುಗಳಲ್ಲಿ ಮಹೀಂದ್ರ ಜೀತೋ 4-ವೀಲರ್, ಆಲ್ಫಾ ಶ್ರೇಣಿಯ 3-ಚಕ್ರ ವಾಹನಗಳು ಮತ್ತು ಎಲೆಕ್ಟ್ರಿಕ್-ಮಾತ್ರ ಝೋರ್ ಗ್ರ್ಯಾಂಡ್ ಮತ್ತು ಟ್ರೀಯೊ ಶ್ರೇಣಿ ಸೇರಿವೆ.

ಮಹೀಂದ್ರಾ ಬಗ್ಗೆ: 1945 ರಲ್ಲಿ ಸ್ಥಾಪನೆಯಾದ ಮಹೀಂದ್ರಾ ಗ್ರೂಪ್ 100ಕ್ಕೂ ಹೆಚ್ಚು ದೇಶಗಳಲ್ಲಿ 26,0000 ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಅತಿದೊಡ್ಡ ಮತ್ತು ಅತ್ಯಂತ ಮೆಚ್ಚುಗೆ ಪಡೆದ ಬಹುರಾಷ್ಟ್ರೀಯ ಒಕ್ಕೂಟವಾಗಿದೆ. ಇದು ಭಾರತದಲ್ಲಿ ಕೃಷಿ ಉಪಕರಣಗಳು, ಯುಟಿಲಿಟಿ ವಾಹನಗಳು, ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿ ನಾಯಕತ್ವದ ಸ್ಥಾನವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 14, 2024, 15:17 [IST]
English summary
Mahindra launches all new e alfa plus three wheeler
Read more on mahindra new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+