Mahindra: ಬೊಲೆರೋ ನಿಯೋ ಪ್ಲಸ್ 9-ಸೀಟರ್ ಕಡಿಮೆ ಬೆಲೆಗೆ ಬಿಡುಗಡೆ: ವಿಶೇಷತೆಗಳೇನು?
ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಇಂದು Bolero Neo+ 9-ಸೀಟರ್ ಅನ್ನು ಅನಾವರಣಗೊಳಿಸಿದೆ. ಇದನ್ನು P4 ಮತ್ತು ಪ್ರೀಮಿಯಂ P10 ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಸೊಗಸಾದ, ವಿಶಾಲವಾದ ಮತ್ತು ಕಠಿಣವಾದ ಎಸ್‌ಯುವಿಯನ್ನು ಅಪೇಕ್ಷಿಸುವ ಗ್ರಾಹಕರಿಗಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿದೆ.
ಬೊಲೆರೊ ನಿಯೊ+ 9-ಸೀಟರ್ ಬೊಲೆರೊದ ವಿಶ್ವಾಸಾರ್ಹ, ಶಕ್ತಿಯುತ ಮತ್ತು ಎಲ್ಲಿಯಾದರೂ ಹೋಗಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಪ್ರೀಮಿಯಂ ಇಂಟೀರಿಯರ್ ಮತ್ತು ನಿಯೋ ತಂತ್ರಜ್ಞಾನದೊಂದಿಗೆ ನಿರ್ಮಿಸಲ್ಪಟ್ಟಿದೆ. ದೊಡ್ಡ ಕುಟುಂಬಗಳು, ಸಾಂಸ್ಥಿಕ ಗ್ರಾಹಕರು, ಪ್ರವಾಸ ಮತ್ತು ಪ್ರಯಾಣ ನಿರ್ವಾಹಕರು ಮತ್ತು ಕಂಪನಿಗಳಿಗಾಗಿ ಇದು ಹೇಳಿ ಮಾಡಿಸಿದಂತಿದೆ. Bolero Neo+ ದೃಢವಾದ 2.2 ಲೀಟರ್ mHawk ಡೀಸೆಲ್ ಎಂಜಿನ್ ಹೊಂದಿದ್ದು, ಉತ್ತಮ ಮೈಲೇಜ್ ಮತ್ತು ಪರ್ಫಾಮೆನ್ಸ್‌ಗಾಗಿ ಮೈಕ್ರೋ ಹೈಬ್ರಿಡ್ ತಂತ್ರಜ್ಞಾನವನ್ನು ನೀಡಲಾಗಿದೆ. ಇದರ ಬಾಡಿ-ಆನ್-ಫ್ರೇಮ್ ನಿರ್ಮಾಣ ಮತ್ತು ಸ್ಟೀಲ್ ಬಾಡಿ ಶೆಲ್ ಅನ್ನು ದೀರ್ಘ ಬಾಳಿಕೆ ಮತ್ತು ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ.

ಸುರಕ್ಷತೆ: Bolero Neo+ ಎಸ್‌ಯುವಿನಲ್ಲಿ EBD ಜೊತೆಗೆ ABS, ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್‌ಗಳು, ಎಂಜಿನ್ ಇ-ಮೊಬಿಲೈಜರ್ ಮತ್ತು ಆಟೋಮ್ಯಾಟಿಕ್ ಡೋರ್ ಲಾಕ್‌ಗಳು ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದು ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಒದಗಿಸುತ್ತದೆ.
ಸ್ಟೈಲಿಶ್ ಡಿಸೈನ್: ಬೊಲೆರೊ ನಿಯೊ+ X-ಆಕಾರದ ಬಂಪರ್‌ಗಳು, ಕ್ರೋಮ್ ಇಂಟೇಕ್‌ಗಳು, X-ಆಕಾರದ ಸ್ಪೇರ್ ವೀಲ್ ಕವರ್‌ನಂತಹ ಸಿಗ್ನೇಚರ್ ಬೊಲೆರೊ ಅಂಶಗಳನ್ನು ಹೊಂದಿದೆ. ಇದರ ಅಧಿಕೃತ SUV ವಿನ್ಯಾಸ ಮತ್ತು ಭವ್ಯವಾದ ನಿಲುವು ಸ್ಟೈಲಿಶ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್‌ಗಳು ಮತ್ತು ಕಮಾಂಡಿಂಗ್ ಹುಡ್‌ನಿಂದ ಮತ್ತಷ್ಟು ಆಕರ್ಷಕವಾಗಿ ಕಾಣುತ್ತವೆ.

ಇಂಟೀರಿಯರ್: Bolero Neo+ ಪ್ರೀಮಿಯಂ ಇಟಾಲಿಯನ್ ಇಂಟೀರಿಯರ್ ಮತ್ತು ಬ್ಲೂಟೂತ್, USB ಮತ್ತು ಆಕ್ಸ್ ಸಂಪರ್ಕವನ್ನು ಒಳಗೊಂಡಿರುವ 22.8 cm ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಆಂಟಿ-ಗ್ಲೇರ್ IRVM, ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ORVM ಮತ್ತು ಎತ್ತರ-ಹೊಂದಾಣಿಕೆಯ ಚಾಲಕ ಸೀಟಿನಿಂದ ಹೆಚ್ಚುವರಿ ಅನುಕೂಲತೆಗಳನ್ನು ಒದಗಿಸಲಾಗಿದೆ. ವಾಹನದಲ್ಲಿ ಮುಂಭಾಗ ಮತ್ತು ಹಿಂಭಾಗದ ಪವರ್ ಕಿಟಕಿಗಳು, ಆರ್ಮ್‌ರೆಸ್ಟ್‌ಗಳು ಮತ್ತು ಉದಾರವಾದ ಬೂಟ್ ಸ್ಥಳವನ್ನು ಹೊಂದಿದೆ. ಸೀಟಿಂಗ್ ಸಂರಚನೆಯು 2-3-4 ಮಾದರಿಯಲ್ಲಿ ಜೋಡಿಸಲಾದ 9 ಆಸನಗಳನ್ನು ಒಳಗೊಂಡಿರುತ್ತದೆ, ಪ್ರಯಾಣಿಕರ ಮತ್ತು ಸರಕು ಸ್ಥಳವನ್ನು ಗರಿಷ್ಠಗೊಳಿಸುವ ಮೂಲಕ, ವಿವಿಧ ಪ್ರಯಾಣ ಅಗತ್ಯಗಳನ್ನು ಪೂರೈಸುತ್ತದೆ.
ವೇರಿಯೆಂಟ್‌ಗಳು ಮತ್ತು ಬೆಲೆ: Bolero Neo+ ಅನ್ನು P4 ಮತ್ತು P10 ಎಂಬ ಎರಡು ಹೊಸ ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. P4 ಎಂಬುದು ಪ್ರವೇಶ ಮಟ್ಟದ ಆಯ್ಕೆಯಾಗಿದ್ದರೇ, P10 ಹೆಚ್ಚು ಪ್ರೀಮಿಯಂ ಟ್ರಿಮ್ ಆಗಿದೆ. ಬೆಲೆಯು ರೂ. 11.39 ಲಕ್ಷ (ಎಕ್ಸ್-ಶೋರೂಮ್)ದಿಂದ ಪ್ರಾರಂಭವಾಗುವುದರಿಂದ ಇದು ವೈಯಕ್ತಿಕ ಮತ್ತು ವಾಣಿಜ್ಯ ಅಗತ್ಯಗಳೆರಡನ್ನು ಪೂರೈಸುತ್ತದೆ ಎಂದು ಕಂಪನಿ ತಿಳಿಸಿದೆ.
ಮಹೀಂದ್ರಾ ಲಿಮಿಟೆಡ್ ಆಟೋಮೋಟಿವ್ ಸೆಕ್ಟರ್ ಸಿಇಒ ನಳಿನಿಕಾಂತ್ ಗೊಲ್ಲಗುಂಟಾ ಮಾತನಾಡಿ, "ಬೊಲೆರೊ ಬ್ರ್ಯಾಂಡ್ ನಮ್ಮ ಗ್ರಾಹಕರಿಗೆ ಇಷ್ಟು ವರ್ಷಗಳಲ್ಲಿ ದೃಢತೆ ಮತ್ತು ವಿಶ್ವಾಸಾರ್ಹತೆಯ ವಿಶಿಷ್ಟ ಲಕ್ಷಣವಾಗಿ ಗುರ್ತಿಸಿಕೊಂಡಿದೆ. ಬೊಲೆರೊ ನಿಯೋ + ಬಿಡುಗಡೆಯೊಂದಿಗೆ ಬಾಳಿಕೆ, ಸುಧಾರಿತ ವೈಶಿಷ್ಟ್ಯಗಳು ಮತ್ತು ಉನ್ನತ ಸೌಕರ್ಯದ ಭರವಸೆಯನ್ನು ನೀಡುತ್ತಿದ್ದೇವೆ. ಪ್ರತಿ ಕುಟುಂಬ ಮತ್ತು ಫ್ಲೀಟ್ ಮಾಲೀಕರಿಗೆ ಚಾಲನಾ ಅನುಭವವನ್ನು ಸಮೃದ್ಧಗೊಳಿಸುತ್ತದೆ ಎಂದರು."
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications