ಇದು ಅತ್ಯುತ್ತಮ ಕಾರು, ಆದ್ರೆ ಖರೀದಿಸಲು ಯಾರೂ ಇಲ್ಲ! ಉತ್ಪಾದನೆ ಸ್ಥಗಿತ
ಮಹೀಂದ್ರಾ ಕಂಪನಿಯ ಜನಪ್ರಿಯ ಎಂಪಿವಿಯಾದ ಮರಾಜೊ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ. ಮರಾಜೊವನ್ನು ಮಹೀಂದ್ರಾದ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ, ಇದು ಅದರ ಸಂಭಾವ್ಯ ನಿರ್ಗಮನವನ್ನು ಸೂಚಿಸುತ್ತಿದೆ. ಈ ಬೆಳವಣಿಗೆಯನ್ನು ನೋಡಿದರೆ ಮಹೀಂದ್ರಾ ಇದನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ತೋರುತ್ತಿದೆ. ಈ ಕಾರು ಮಾತ್ರವಲ್ಲದೇ ಮಹೀಂದ್ರಾ ಕಂಪನಿಯು ಇತ್ತೀಚೆಗೆ ಕೆಯುವಿ 100 ಎನ್ಎಕ್ಸ್‌ಟಿ ಸೇರಿದಂತೆ ಕಡಿಮೆ ಮಾರಾಟವಾಗುತ್ತಿದ್ದ ಕಾರುಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸುತ್ತಿದೆ. ಆದರೆ ಈ ಹಿಂದೆ ಕುಟುಂಬ ಆಧಾರಿತ ಎಂಪಿವಿಗಳಲ್ಲಿ ಬೇಡಿಕೆ ಪಡೆದಿದ್ದ ಮರಾಜೊವನ್ನು ಏಕೆ ನಿಲ್ಲಿಸುತ್ತಿದೆ ಎಂಬುದನ್ನು ಇಲ್ಲಿ ನೋಡೋಣ.
ಮಹೀಂದ್ರಾ ಮರಾಜೊ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಕ್ಯಾರೆನ್ಸ್, ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಾರುತಿ ಸುಜುಕಿ XL6 ನಂತಹ ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಇದು ತನ್ನ ವಿಭಾಗದಲ್ಲಿ ವಿಭಿನ್ನ ಕಾರಾಗಿ ಗುರ್ತಿಸಿಕೊಂಡಿದ್ದು, ಇದು ಲ್ಯಾಡರ್ - ಫ್ರೇಮ್ ಚಾಸಿಸ್, ಟ್ರಾನ್ಸ್ವರ್ಸ್ ಮೌಂಟೆಡ್ ಎಂಜಿನ್ ಮತ್ತು ಫ್ರಂಟ್ - ವೀಲ್ ಡ್ರೈವ್ ಅನ್ನು ಹೊಂದಿತ್ತು.

ಮರಾಜೊ ಅಲ್ಯೂಮಿನಿಯಂ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದ್ದು, ಇದು ಸವಾರಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ಹಿಂಭಾಗದಲ್ಲೂ ಎಸಿ ವೆಂಟ್‌ಗಳನ್ನು ಹೊಂದಿತ್ತು, ಎರಡನೇ ಸಾಲನ್ನು ಕ್ಯಾಪ್ಟನ್ ಸೀಟುಗಳು ಅಥವಾ ಬೆಂಚ್ ಆಗಿ ಪಡೆಯುವ ಆಯ್ಕೆ ಕೂಡ ನೀಡಿತ್ತು. ಈ ವೈಶಿಷ್ಟ್ಯಗಳ ಹೊರತಾಗಿಯೂ, ಅದರ ಶಾರ್ಕ್-ಪ್ರೇರಿತ ವಿನ್ಯಾಸವು ಭಾರತೀಯ ಖರೀದಿದಾರರಲ್ಲಿ ಅಷ್ಟು ಕ್ಲಿಕ್ ಆಗಿಲಿಲ್ಲ.
ಹೌದು, ಈ ಕಾರಿನ ಮಾರಾಟವನ್ನು ನೋಡಿದ್ರೆ ನಿಮಗೂ ಅದೇ ಅನಿಸುತ್ತದೆ. ಮೇ 2023 ರಲ್ಲಿ, ಮಹೀಂದ್ರಾ ಮರಾಜೊದಲ್ಲಿ ತನ್ನ ಅತ್ಯಂತ ಕಡಿಮೆ ಮಾರಾಟದ ಅಂಕಿಅಂಶವನ್ನು ದಾಖಲಿಸಿದೆ, ಕೇವಲ 16 ಯುನಿಟ್ ಕಾರುಗಳನ್ನು ಮಾತ್ರ ಮಾರಾಟ ಮಾಡಿದೆ. ಈ ಕಳಪೆ ಪ್ರದರ್ಶನವು ಕಾರನ್ನು ನಿಲ್ಲಿಸುವ ನಿರ್ಧಾರದ ಮೇಲೆ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.

ಮಹೀಂದ್ರಾ ಮರಾಜೊದ ಮಾರಾಟದ ಅಂಕಿ ಅಂಶಗಳು ಸ್ಥಿರವಾಗಿ ಕಡಿಮೆಯಾಗುತ್ತಲೇ ಬರುತ್ತಿವೆ. ಸರಾಸರಿ, ಮಾಸಿಕ ಸುಮಾರು 60 ಯುನಿಟ್‌ಗಳು ಮಾತ್ರ ಮಾರಾಟವಾಗುತ್ತಿವೆ, ಇದು ರಾಷ್ಟ್ರವ್ಯಾಪಿ ದಿನಕ್ಕೆ ಕೇವಲ ಎರಡು ಯುನಿಟ್‌ಗಳಿಗೆ ಅನುವಾದಿಸುತ್ತದೆ. ಕಳೆದ ವರ್ಷ ಭಾರತದಲ್ಲಿ ಕೇವಲ 721 ಯುನಿಟ್ ಕಾರುಗಳು ಮಾರಾಟವಾಗಿವೆ.
ರೀ ಎಂಟ್ರಿ ಕೊಡಲಿದೆಯೇ?: ಕಳಪೆ ಮಾರಾಟ ಕಾಣುತ್ತಿದ್ದ ಕಾರುಗಳನ್ನು ಯಶಸ್ವಿ ಮಾದರಿಗಳಾಗಿ ಮಾಡಿದ ಇತಿಹಾಸವನ್ನು ಮಹೀಂದ್ರಾ ಹೊಂದಿದೆ. ಉದಾಹರಣೆಗೆ ಬೊಲೆರೊ ನಿಯೋ ಮತ್ತು ಹೊಸ ತಲೆಮಾರಿನ ಥಾರ್ ಬಗ್ಗೆ ಹೇಳಬಹದು. ಮಹೀಂದ್ರಾ ಭವಿಷ್ಯದಲ್ಲಿ ಮರಾಜೊವನ್ನು ಕೂಡ ಹೊಸ ನವೀಕರಣ ನೀಡಿ ಫೇಸ್ ಲಿಫ್ಟ್‌ನೊಂದಿಗೆ ಮತ್ತೆ ಪರಿಚಯಿಸುವ ಸಾಧ್ಯತೆಯು ಇದೆ.

ಬಿಡುಗಡೆಯಾದಾಗ, ಮಹೀಂದ್ರಾ ಮರಾಜೊ ಗಮನಾರ್ಹವಾಗಿತ್ತಾದರೂ, ಅದರ ವಿನ್ಯಾಸವು ಅದರ ಯಶಸ್ಸಿನ ಕೊರತೆಗೆ ಪ್ರಮುಖ ಕಾರಣ ಎಂದು ನಂಬಲಾಗಿದೆ. ಆದ್ರೂ ಈ ಕಾರು ಉತ್ತಮ ವೈಶಿಷ್ಟ್ಯಗಳು ಮತ್ತು ದೃಢವಾದ ಎಂಜಿನ್ ಹೊಂದಿತ್ತು. ಆದಾಗ್ಯೂ, ಮಹೀಂದ್ರಾ ಮಾರುಕಟ್ಟೆಯಲ್ಲಿ ತನ್ನ ಎಂಪಿವಿ ಸ್ಥಾನವನ್ನು ತಿರುಗಿ ಪಡೆಯಬಹುದು. ಆದ್ರೂ ಕಿಯಾ ಕ್ಯಾರೆನ್ಸ್ ಇರುವಾಗ ಮರಾಜೊ ಟಾಪ್‌ಗೆ ಬರುವುದು ಸುಲಭವಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications