ಟ್ರಕ್ ಡ್ರೈವರ್‌ ಮಕ್ಕಳಿಗೆ ಶುಭಸುದ್ದಿ: ಈಗಾಗಲೇ ಪ್ರಯೋಜನ ಪಡೆದ 10,029 ಮಕ್ಕಳು!

ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಮಹೀಂದ್ರಾ ಟ್ರಕ್ ಮತ್ತು ಬಸ್ ವಿಭಾಗ (MTBD), ಚಾಲಕರ ದಿನಾಚರಣೆ 2024 ರ ಸ್ಮರಣಾರ್ಥ ಇಂದು ಮಹೀಂದ್ರಾ ಸಾರಥಿ ಅಭಿಯಾನದ ಮೂಲಕ ಟ್ರಕ್ ಡ್ರೈವರ್‌ಗಳ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯ ಮೂಲಕ, ಮಹೀಂದ್ರಾದವರು ಉನ್ನತ ಶಿಕ್ಷಣದ ಹಕ್ಕನ್ನು ಬೆಂಬಲಿಸುವ ಮೂಲಕ ಟ್ರಕ್ ಡ್ರೈವರ್‌ಗಳ ಅರ್ಹ ಮಕ್ಕಳ ಜೀವನವನ್ನು ಪರಿವರ್ತಿಸಲು ಸಣ್ಣ ಕೊಡುಗೆ ನೀಡಲು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಈ ಯೋಜನೆ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ಈ ಪ್ರಯತ್ನವು 2014 ರಲ್ಲಿ ಮಹೀಂದ್ರಾ ಸಾರಥಿ ಅಭಿಯಾನದೊಂದಿಗೆ ಪ್ರಾರಂಭಿಸಲಾದ ಟ್ರಕ್ ಚಾಲಕ ಸಮುದಾಯಕ್ಕೆ ಮಹೀಂದ್ರಾ ಟ್ರಕ್ ಮತ್ತು ಬಸ್ ವಿಭಾಗದ ನಿರಂತರ ಬದ್ಧತೆಯ ಮಹತ್ವದ ಮೈಲಿಗಲ್ಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗೆ ರೂ.10,000 ವಿದ್ಯಾರ್ಥಿವೇತನದೊಂದಿಗೆ ಅವರ ಸಾಧನೆಯನ್ನು ಗುರುತಿಸಿ ಪ್ರಮಾಣಪತ್ರದೊಂದಿಗೆ ಗೌರವಿಸಲಾಗುತ್ತದೆ.

mahindra-saarthi-abhiyaan-scholarships-to-daughters-of-truck-drivers

ಇದನ್ನು 75 ಕ್ಕೂ ಹೆಚ್ಚು ಸಾರಿಗೆ ಹಬ್‌ಗಳಲ್ಲಿ ಭಾರತದಾದ್ಯಂತ ತಲುಪುವ ಕಾರ್ಯಕ್ರಮದ ಮೂಲಕ ಮಾಡಲಾಗುತ್ತದೆ. ಇಲ್ಲಿಯವರೆಗೆ, 10,029 ಯುವತಿಯರು ಈಗಾಗಲೇ ಉಪಕ್ರಮದ ಅಡಿಯಲ್ಲಿ ವಿದ್ಯಾರ್ಥಿವೇತನದಿಂದ ಪ್ರಯೋಜನ ಪಡೆದಿದ್ದಾರೆ, ಇದು ಅವರ ಆಕಾಂಕ್ಷೆಗಳನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

ಈ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ 1000 ಮಕ್ಕಳಿಗೆ ಪ್ರತಿಯೊಬ್ಬರಿಗು ರೂ. 10,000 ನೇರವಾಗಿ ಬ್ಯಾಂಕ್‌ಗೆ ವರ್ಗಾವಣೆ ಮಾಡಲಾಗುವುದು. ಜೊತೆಗೆ ಸಾಧನೆಯನ್ನು ಗುರುತಿಸಿ ಪ್ರಮಾಣಪತ್ರದೊಂದಿಗೆ ಗೌರವಿಸಲು ಕಂಪನಿ ಯೋಜಿಸಿದೆ. ಫೆಬ್ರವರಿಯಿಂದ ಮಾರ್ಚ್ 2025 ರವರೆಗೆ, ಮಹೀಂದ್ರಾ ಟ್ರಕ್ ಮತ್ತು ಬಸ್ ನಾಯಕತ್ವದ ಆಯ್ದ ಸ್ಥಳಗಳಲ್ಲಿ ಅಭಿನಂದನೆಯನ್ನು ಆಯೋಜಿಸಲಾಗುವುದು.

ಮಹೀಂದ್ರಾ ಟ್ರಕ್, ಬಸ್‌, ಸಿಇ, ಏರೋಸ್ಪೇಸ್ ಮತ್ತು ಡಿಫೆನ್ಸ್ ಬ್ಯುಸಿನೆಸ್ ಅಧ್ಯಕ್ಷ ವಿನೋದ್ ಸಹಾಯ್ ಮಾತನಾಡಿ, ಮಹೀಂದ್ರ ಸಾರಥಿ ಅಭಿಯಾನದ ಮೂಲಕ ನಾವು ಕೇವಲ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಿಲ್ಲ, ಬದಲಾಗಿ ವಿದ್ಯಭ್ಯಾಸದ ಬಾಗಿಲು ತೆರೆಯುತ್ತಿದ್ದೇವೆ. ಉಜ್ವಲ ಭವಿಷ್ಯಕ್ಕಾಗಿ ಮತ್ತು ಯುವ ಹೃದಯಗಳಲ್ಲಿ ಭರವಸೆಯನ್ನು ತುಂಬುತ್ತಿದ್ದೇವೆ.

ಟ್ರಕ್ ಚಾಲಕ ಪಾಲುದಾರರ ಹೆಣ್ಣುಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಮೂಲಕ ಜೀವನವನ್ನು ಪರಿವರ್ತಿಸಲು ನಾವು ಸಮರ್ಪಿತರಾಗಿದ್ದೇವೆ. ಅವರ ಭವಿಷ್ಯದಲ್ಲಿ ಹೂಡಿಕೆ ಮಾಡುವ ಮೂಲಕ, ನಾವು ನಮ್ಮ ಸಮುದಾಯಗಳಿಗೆ ಮತ್ತು ಆರ್ಥಿಕತೆಗೆ ಗಣನೀಯವಾಗಿ ಕೊಡುಗೆ ನೀಡುವ ಸಶಕ್ತ ಮಹಿಳೆಯರ ಪೀಳಿಗೆಯನ್ನು ಬೆಳೆಸುತ್ತಿದ್ದೇವೆ ಎಂದರು.

ಮಹೀಂದ್ರಾ ವಾಣಿಜ್ಯ ವಾಹನಗಳ ಬಿಸಿನೆಸ್ ಹೆಡ್ ಜಲಜ್ ಗುಪ್ತಾ ಮಾತನಾಡಿ, "ಮಹೀಂದ್ರಾ ಸಾರಥಿ ಅಭಿಯಾನದ ಮೂಲಕ ನಮ್ಮ ನಿರಂತರ ಬದ್ಧತೆಯು ಟ್ರಕ್ ಚಾಲಕರ ಹೆಣ್ಣುಮಕ್ಕಳನ್ನು ಉನ್ನತೀಕರಿಸುವುದು ಮಾತ್ರವಲ್ಲದೆ ಹೊಸ ಅವಕಾಶಗಳ ಸಂಸ್ಕೃತಿಯನ್ನು ಬೆಳೆಸುತ್ತದೆ. ಈ ಉಪಕ್ರಮದ ಮೂಲಕ, ವಾಣಿಜ್ಯ ವಾಹನ ವಿಭಾಗದಲ್ಲಿ ಹೆಚ್ಚಿನ ಮಹಿಳೆಯರನ್ನು ನೋಡಲು ನಾವು ಬಯಸುತ್ತೇವೆ.

ಹೆಣ್ಣುಮಕ್ಕಳ ಭವಿಷ್ಯದಲ್ಲಿ ಹೂಡಿಕೆ ಮಾಡುವ ನಮ್ಮ ಬದ್ಧತೆಯಲ್ಲಿ ದೃಢವಾಗಿರಲು ಮತ್ತು ಪ್ರತಿ ಹುಡುಗಿಯೂ ತನ್ನ ಸಾಮರ್ಥ್ಯವನ್ನು ಪೂರೈಸಲು ಮತ್ತು ನಾಳಿನ ನಾಯಕಿಯಾಗಲು ಬಯಸುವ ಬಲವಾದ ಹಾಗೂ ಹೆಚ್ಚು ಸಮಾನ ಸಮಾಜವನ್ನು ಅಭಿವೃದ್ಧಿಪಡಿಸಲು ನಾವು ಬಯಸುತ್ತೇವೆ ಎಂದು ವಾಣಿಜ್ಯ ವಾಹನಗಳ ಬಿಸಿನೆಸ್ ಹೆಡ್ ಜಲಜ್ ಗುಪ್ತಾ ಹೇಳಿದರು.

Article Published On: Tuesday, September 17, 2024, 14:09 [IST]
English summary
Mahindra saarthi abhiyaan scholarships to daughters of truck drivers
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+