ಜೂನ್‌ ತಿಂಗಳಲ್ಲಿ ಮಹೀಂದ್ರಾ ಕಾರುಗಳ ಭರ್ಜರಿ ಮಾರಾಟ: ಟ್ರಾಕ್ಟರ್ ಮಾರಾಟದಲ್ಲು ದಾಖಲೆ

ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ, ಜೂನ್ 2024 ರಲ್ಲಿ ಒಟ್ಟಾರೆ ವಾಹನ ಮಾರಾಟವನ್ನು ಘೋಷಿಸಿದೆ. ಕಂಪನಿಯ ಪ್ರಕಾರ 69,397 ವಾಹನಗಳು ಮಾರಾಟವಾಗಿದ್ದು, ಇದರಲ್ಲಿ ರಫ್ತು ಸೇರಿದಂತೆ ಶೇ11 ರಷ್ಟು ಬೆಳವಣಿಗೆ ಸಾಧಿಸಿದೆ. ಯುಟಿಲಿಟಿ ವೆಹಿಕಲ್ಸ್ ವಿಭಾಗದಲ್ಲಿ, ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ 40,022 ವಾಹನಗಳ ಮಾರಾಟ ಮತ್ತು ರಫ್ತು ಸೇರಿದಂತೆ ಒಟ್ಟಾರೆ 40,644 ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ23 ರಷ್ಟು ಬೆಳವಣಿಗೆ ಸಾಧಿಸಿದೆ. ಉಳಿದಂತೆ ವಾಣಿಜ್ಯ ವಾಹನಗಳ ಒಟ್ಟಾರೆ ದೇಶೀಯ ಮಾರಾಟವು 20,594 ರಷ್ಟಿದೆ ಎಂದು ಕಂಪನಿ ತಿಳಿಸಿದೆ.

ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಪ್ರಕಾರ, ಜೂನ್‌ನಲ್ಲಿ ಒಟ್ಟು 69,397 ವಾಹನಗಳು ವಾಗಿದ್ದರೇ ಇದರಲ್ಲಿ ಎಸ್‌ಯುವಿಗಳೇ 40,022 ಮಾರಾಟವಾಗಿವೆ. ಈ ಮೂಲಕ ಕಳೆದ ವರ್ಷಕ್ಕಿಂತ ಶೇ11 ರಷ್ಟು ಬೆಳವಣಿಗೆಯಾಗಿದೆ. ಮಹೀಂದ್ರಾ XUV700 ಉತ್ಪಾದನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 2,00,000ನೇ XUV700 ಅನ್ನು ಹೊರತಂದಿದ್ದರಿಂದ ಜೂನ್ ಒಂದು ಮಹತ್ವದ ತಿಂಗಳಾಗಿದೆ ಎಂದರು.

mahindra-sales-report-2024-june-month

ಇನ್ನು ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನ ಫಾರ್ಮ್ ಇಕ್ವಿಪ್‌ಮೆಂಟ್ ಸೆಕ್ಟರ್ (FES) ಜೂನ್ 2024ರ ಟ್ರಾಕ್ಟರ್ ಮಾರಾಟವನ್ನು ಸಹ ಪ್ರಕಟಿಸಿದೆ. ಜೂನ್ 2024 ರಲ್ಲಿ ದೇಶದಲ್ಲಿ ಒಟ್ಟು 45,888 ಯುನಿಟ್‌ ಟ್ರಾಕ್ಟರ್‌ಗಳು ಮಾರಾಟವಾಗಿವೆ. ಕಳೆದ ವರ್ಷ (ಜೂನ್ 2023) ಇದೇ ತಿಂಗಳಲ್ಲಿ 43,364 ಟ್ರಾಕ್ಟರ್‌ಗಳು ಮಾರಾಟವಾಗಿದ್ದವು.

ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್‌ಗಳು ಮಾರಾಟವಾಗಿವೆ. ಜೂನ್ 2024 ರಲ್ಲಿ ಒಟ್ಟು ಟ್ರಾಕ್ಟರ್ ಮಾರಾಟಗಳು (ದೇಶೀಯ + ರಫ್ತುಗಳು) 47,319 ಯುನಿಟ್‌ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಯ 44,478 ಯುನಿಟ್‌ಗಳಿಗೆ ಹೋಲಿಸಿದರೆ ತಿಂಗಳ ರಫ್ತಿನಲ್ಲಿ 1,431 ಘಟಕಗಳು ಹೆಚ್ಚಾಗಿ ಮಾರಾಟವಾಗಿವೆ.

mahindra-sales-report-2024-june-month

ಮಹೀಂದ್ರಾ ಫಾರ್ಮ್ ಇಕ್ವಿಪ್‌ಮೆಂಟ್ ಸೆಕ್ಟಾರ್‌ನ ಅಧ್ಯಕ್ಷ ಹೇಮಂತ್ ಸಿಕ್ಕಾ ಮಾತನಾಡಿ, "ನಾವು ಜೂನ್ ತಿಂಗಳ ದೇಶೀಯ ಮಾರುಕಟ್ಟೆಯಲ್ಲಿ 45,888 ಟ್ರಾಕ್ಟರ್‌ಗಳನ್ನು ಮಾರಾಟ ಮಾಡಿದ್ದೇವೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ6 ರಷ್ಟು ಬೆಳವಣಿಗೆಯಾಗಿದೆ. ರಫ್ತು ಮಾರುಕಟ್ಟೆಯಲ್ಲಿ, ನಾವು 1,431 ಟ್ರಾಕ್ಟರ್‌ಗಳನ್ನು ಮಾರಾಟ ಮಾಡಿದ್ದೇವೆ, ಕಳೆದ ವರ್ಷಕ್ಕಿಂತ ಶೇ28 ರಷ್ಟು ಬೆಳವಣಿಗೆಯಾಗಿದೆ.

ಮಹೀಂದ್ರಾ ಫಾರ್ಮ್ ಇಕ್ವಿಪ್‌ಮೆಂಟ್ ಸೆಕ್ಟಾರ್‌ನ ಅಧ್ಯಕ್ಷ ಹೇಮಂತ್ ಸಿಕ್ಕಾ ಮಾತನಾಡಿ, "ನಾವು ಜೂನ್ ತಿಂಗಳ ದೇಶೀಯ ಮಾರುಕಟ್ಟೆಯಲ್ಲಿ 45,888 ಟ್ರಾಕ್ಟರ್‌ಗಳನ್ನು ಮಾರಾಟ ಮಾಡಿದ್ದೇವೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ6 ರಷ್ಟು ಬೆಳವಣಿಗೆಯಾಗಿದೆ. ರಫ್ತು ಮಾರುಕಟ್ಟೆಯಲ್ಲಿ, ನಾವು 1,431 ಟ್ರಾಕ್ಟರ್‌ಗಳನ್ನು ಮಾರಾಟ ಮಾಡಿದ್ದೇವೆ, ಕಳೆದ ವರ್ಷಕ್ಕಿಂತ ಶೇ28 ರಷ್ಟು ಬೆಳವಣಿಗೆಯಾಗಿದೆ.

mahindra-sales-report-2024-june-month

ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿರುವ XUV 3XO ಕೂಡ ಉತ್ತಮ ಮಾರಾಟ ಕಾಣುತ್ತಿದೆ. ಈ ಕಾರಿಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಫೀಚರ್ಸ್ ಮತ್ತು ಡಿಸೈನ್ ಮೂಲಕ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ. ಈ ಕಾರಿನ ಜೂನ್‌ ತಿಂಗಳ ಒಟ್ಟಾರೆ ಮಾರಾಟ ವಿವರ ಬೇಕಾದಲ್ಲಿ ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 2, 2024, 8:30 [IST]
English summary
Mahindra sales report 2024 june month
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+